ಕೃಷಿ ಯಂತ್ರೋಪಕರಣ ಖರೀದಿ ಮಾಡುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಈಗ ನೀವು ಕೃಷಿ ಇಲಾಖೆಯ ಕಚೇರಿಗಳಿಗೆ ಹೋಗದೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ (Subsidy up to 80% on agricultural machinery) ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಹೌದು, ರೈತರು ಈಗ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರದ Sub-Mission on Agricultural Mechanization (SMAM) ಯೋಜನೆಯಡಿಯಲ್ಲಿ  ಅರ್ಜಿ ಸಲ್ಲಿಸಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಬಹುದು.. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಮಾಹಿತಿ.

ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಶೇ. 50 ರಿಂದ 80ರವರೆಗೆ  ಸಬ್ಸಿಡಿ ದರದಲ್ಲಿ  ರೈತರಿಗೆ ಈ ಯೋಜನೆಯಡಿಯಲ್ಲಿ ನೀಡಲಾಗುವುದು. ಇದಕ್ಕಾಗಿ ನೀವು ಯಾವ ಕಚೇರಿಗಳಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಸ್ವೀಕೃತವಾದ ನಂತರ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಬಹುದು.

ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Documents):

ಗುರುತಿನ ಚೀಟಿ, ಆಧಾರ್ ಕಾರ್ಡ್,  ಪಾಸ್‌ಪೋರ್ಟ್‌ ಸೈಜ್‌ ಫೋಟೊ, ಭೂಮಿ ಹಕ್ಕು ಪತ್ರ ( ROR),  ರೈತನ ಬ್ಯಾಕ್‌ ಖಾತೆಯ ಪಾಸ್‌ಬುಕ್‌ನ ಮುಖಪುಟದ ನಕಲು , ಆಧಾರ್‌ ಕಾರ್ಡ್‌/ಚುನಾವಣಾ ಗುರುತಿನ ಚೀಟಿಯ ನಕಲು ಪ್ರತಿ, ಎಸ್.ಸಿ ಎಸ್.ಟಿಯವರಾಗಿದ್ದರೆ ಜಾತಿ ಆದಾಯ ಪ್ರಮಾಣ ಪತ್ರದ ನಕಲು ಪ್ರತಿಯನ್ನು ನೀಡಬೇಕಾಗುತ್ತದೆ .

ನೊಂದಣಿ ಮಾಡುವುದು ಹೇಗೆ ? (How to Register)

ರೈತರು ತಮ್ಮ ಹೆಸರನ್ನು ನೋಂದಾಯಿಸಲು https://agrimachinery.nic.in/   ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ Direct Benefit Transfer in Agriculture Mechanization ಮೇಲೆ ಕ್ಲಿಕ್ ಮಾಡಬೇಕು. ನಂತರ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ ಫಾರ್ಮರ್ ಮೇಲೆ ಕ್ಲಿಕ್ ಮಾಡಬೇಕು.ನಂತರ ಯಾವ್ಯಾವ ದಾಖಲಾತಿಗಳು ಬೇಕು ಎಂಬ ಪೇಜ್ ತೆರೆದುಕೊಳ್ಳುತ್ತದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡನಂತರ close ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್, ಅಥವಾ ಮೊಬೈಲ್ ನಂಬರ್ ಅಥವಾ ಹೆಸರು ಸೆಲೆಕ್ಟ ಮಾಡಿಕೊಂಡು ನಿಮ್ಮ ರಾಜ್ಯ, ನಿಮ್ಮ ಜಿಲ್ಲೆ , ತಾಲೂಕು , ಗ್ರಾಮವನ್ನು ಆಯ್ಕೆ ಮಾಡಬೇಕು . ರೈತರ ಹೆಸರು ಆಧಾರ್‌ ಕಾರ್ಡ್‌ನಲ್ಲಿ ಇರುವಂತೆ ನೊಂದಾಯಿಸಬೇಕು . ರೈತರ ವಿವರ, ಸಣ್ಣ, ಮಧ್ಯಮ, ದೊಡ್ಡ ಇಳುವರಿದಾರರ ಕುರಿತ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ಈ ಮೂಲಕ ವೆಬ್‌ಸೈಟ್‌ನಲ್ಲಿ ಹೆಸರು, ವಿವರ ನೊಂದಾಯಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಒಂದು ವೇಳೆ ನಿಮಗೆ ಮೇಲಿನ ರೀತಿಯಲ್ಲಿ ಸಮಸ್ಯೆಯಾಗುತ್ತಿದ್ದರೆ  https://agrimachinery.nic.in/farmer/management/index ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಂಡು ಅಲ್ಲಿ ಕೇಳಲಾದ ದಾಖಲೆಗಳನ್ನು ನಿಮ್ಮ ಮುಂದೆ ಇಟ್ಟುಕೊಂಡು  ಮಾಹಿತಿಯನ್ನು ಭರ್ತಿ ಮಾಡಬೇಕು.  ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಸಹ ತಿಳಿದುಕೊಳ್ಳಬಹುದು.

ಸೂಚನೆ:  ಪೋರ್ಟಲ್ ನಲ್ಲಿ ಹೆಸುರ ನೋಂದಾಯಿಸುವಾಗ ಸರಿಯಾದ ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ಆಧಾರ್ ಕಾರ್ಡ್ ಪ್ರಕಾರ ರೈತನ ಹೆಸರು ಇರಬೇಕು. ರೈತ ವರ್ಗ (ಎಸ್ ಸಿ/ಎಸ್ ಟಿ/ಸಾಮಾನ್ಯ), ರೈತ ಪ್ರಕಾರ (ಸಣ್ಣ/ಸಣ್ಣ/ದೊಡ್ಡ)  ರೈತರಿದ್ದರೆ ಮಾಹಿತಿ ಸರಿಯಾಗಿ ಒದಗಿಸಬೇಕು.

ಕರ್ನಾಟಕದಲ್ಲಿ ಕೆ ಕಿಸಾನ್  ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆ. ಕಿಸಾನ್ ತಂತ್ರಾಂಶದಲ್ಲಿ ನಿಮ್ಮ ಹೆಸರು ನೊಂದಾಯಿಸಿದವರಿಗೆ ಮಾತ್ರ ಈ  ಸೌಲಭ್ಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ  ಶಂಕರ ಮೂರ್ತಿ ಉಪನಿರ್ದೇಶಕರು, ಮೊ.  8277929855 ಗೆ ಕರೆ ಮಾಡಿ ಮಾಹಿತಿ ಪಡೆದು ನೋಂದಣಿ ಮಾಡಿಸಿ.

ಮೇಲ್ ಐಡಿ: [email protected] ವಿಳಾಸ: Deputy Director of Agriculture FM & MI O/O commissionerate of Agriculture Dept of Agriculture No.1 Seshadri Road Bengaluru 560001 ನೀಡಲಾಗಿದೆ.

ಮೂಲ: ಕೇಂದ್ರ ಸರ್ಕಾರದ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ ಆ್ಯಂಡ್ ಫಾರ್ಮರ್ಸ್ ವೆಲಫೇರ್ ಮಿನಿಸ್ಟರಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಫಾರ್ಮರ್ಸ್ ವೆಲ್ಫೇರ್

Leave a Reply

Your email address will not be published. Required fields are marked *