ಸ್ವಯಂ ಉದ್ಯೋಗ, ಕಿರು ಉತ್ಪನ್ನ ಉದ್ಯಮಗಳಿಗೆ ಸಹಾಯಧನದಲ್ಲಿ ಮಿನಿದಾಲ್ ಮಿಲ್, ಮಸಾಲಾ ಪುಡಿಯಂತ್ರ, ನಮಕಿನ್ ಮಷಿನ್, ಶುಗರ್ ಕೇನ್ ಜ್ಯೂಸ್ ಯಂತ್ರ, ಪೇಪರ್ ಪ್ಲೇಟ್ ಯಂತ್ರೋಪಕರಣಗಳ ಒದಗಿಸಲು ಅರ್ಜಿ ಆಹ್ವಾನ

Written by By: janajagran

Published on:

ಸ್ವಯಂ ಉದ್ಯೋಗ, ಕಿರು ಉತ್ಪನ್ನ ಉದ್ಯಮಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಒದಗಿಸುವುದಕ್ಕಾಗಿ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ 2020-21ನೇ ಸಾಲಿನ ಕ್ರಿಯಾ ಯೋಜನೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಮಿನಿದಾಲ್ ಮಿಲ್, ಅಟೋಮೆಟಿಕ್ ಐಲ್ ತಯಾರಿಸುವ ಯಂತ್ರ, ಮಸಾಲಾ ಪುಡಿಯಂತ್ರ,  ನಮಕಿನ್ ಮಷಿನ್, ಶುಗರ್ ಕೇನ್ ಜ್ಯೂಸ್ ಯಂತ್ರ,  ಐಲ್ ಪೌಚ್ ಮತ್ತು ಫುಡ್ ಗ್ರೇನ್ ಪ್ಯಾಕಿಂಗ್ ಮಷಿನ್, ಹೈಡ್ರಾಲಿಕ್ ಪೇಪರ್ ಪ್ಲೇಟ್ ಮೇಕಿಂಗ್ ಮಷಿನ್,  ಬೇಕರಿ ಉತ್ಪಾದನಾ ಯಂತ್ರಗಳಿಗಾಗಿ ಸಹಾಯಧನ ನೀಡಲಾಗುವುದು.  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲುಈ ಲಿಂಕ್ https://www.kkhracs.com/ ಮೇಲೆ ಕ್ಲಿಕ್ ಮಾಡಬೇಕು. ಆಗ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ, ಮತ್ತು ಸಾಂಸ್ಕೃತಿಕ ಸಂಘದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನೋಂದಣಿ  ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಹೆಸರು ಮೊಬೈಲ್ ನಂಬರ್ ನಮೂದಿಸಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಆಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಡ್ಯಾಷ್ ಬೋರ್ಡ್ ಪೇಜ್ ನ ಉದ್ಯೋಗಮಿತ್ರ ಮೇಲೆ ಕ್ಲಿಕ್ ಮಾಡಬೇಕು. ಕೆಳಗಡೆ ಕಿರು ಉತ್ಪನ್ನಗಳ ಯಂತ್ರಗಳನ್ನು ಒದಗಿಸುವ ಯೋಜನೆ ಯಲ್ಲಿ ಯಾವ ಯಂತ್ರೋಪಕರಣಗಳಿಗೆ ಎಷ್ಟು ಪ್ರೋತ್ಸಾಹಧನ ನೀಡಲಾಗುವುದು ಎಂಬಿತ್ಯಾದಿ ಮಾಹಿತಿಗಳಿರುತ್ತವೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡನಂತರ ಅಪ್ಲಿಕೇಷನ ಗಾಗಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ವೈಯಕ್ತಿಕವಾಗಿ ಅರ್ಜಿ ಸಲ್ಲಿಸುತ್ತಿದ್ದರೆ ವೈಯಕ್ತಿಕ ಆಯ್ಕೆ ಮಾಡಿಕೊಳ್ಳಬೇಕು.  ಸ್ವಸಹಾಯ ಗುಂಪು ಮೂಲಕ ಅರ್ಜಿ ಸಲ್ಲಿಸಬೇಕಾದರೆ ಸ್ವ ಸಹಾಯ ಗುಂಪು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಉದಾಹರಣೆಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸುತ್ತಿದ್ದರೆ ವೈಯಕ್ತಿಕ ಆಯ್ಕೆ ಮಾಡಿಕೊಂಡ ನಂತರ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ, ಗ್ರಾಮ, ಯಂತ್ರೋಪಕರಣ, ಮೊಬೈಲ್ ನಂಬರ್, ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ಜಾತಿ, ಉಫಜಾತಿ, ಆಧಾರ್ ಸಂಖ್ಯೆ, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಅರ್ಜಿದಾರ ಪ್ರಸ್ತುತ ಹೊಂದಿರು ಅಂಗಡಿ, ಸ್ವಂತ, ಬಾಡಿಗೆ ಏನೆಂದು ನಮೂದಿಸಬೇಕು. ವಿಳಾಸ ಭರ್ತಿ ಮಾಡಿದ ನಂತರ ಅರ್ಜಿಯನ್ನು ಸೇವ್ ಮಾಡಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472 227712 ಗೆ ಸಂಪರ್ಕಿಸಬಹುದು.ಅಥವಾ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಐವಾನ್ ಇ ಶಾಹಿ ರಸ್ತೆ, ಕಲಬುರಗಿ ವಿಭಾಗ, ಕಲಬುರಗಿ ಸಂಪರ್ಕಿಸಬಹುದು.

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅರ್ಹ ಫಲಾನುಭವಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Leave a comment