ರಾಜ್ಯ ಸರ್ಕಾರದ 4 ಸಾವಿರ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿ

Written by By: janajagran

Updated on:

State Govt PMkisan status ಕೇಂದ್ರ ಸರ್ಕಾರವು ಪ್ರತಿ ವರ್ಷ ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ  6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಸಹ 4 ಸಾವಿರ ರೂಪಾಯಿ ಹಣವನ್ನು ಎರಡು ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡುತ್ತದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿರುವ ಸ್ಟೇಟಸ್ ನೋಡುವಂತೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಹಣದ ಸ್ಟೇಟಸ್ ನ್ನು ಸಹ ಮೊಬೈಲ್ ನಲ್ಲಿಯೇ ನೋಡಬಹುದು. ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ. ಯಾವ ದಿನಾಂಕ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.

State Govt PMkisan status ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ಜಮೆಯಾಗುವ 4 ಸಾವಿರ ರೂಪಾಯಿ ಹಣ ಸ್ಟೇಟಸ್ ನೋಡಲು

https://fruits.karnataka.gov.in/

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯ ಸರ್ಕಾರದ ಫ್ರೂಟ್ಸ್ ತಂತ್ರಾಂಶದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಬಲಗಡೆ  ಸಿಟಿಜನ್ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಗೂ ಫ್ರೂಟ್ಸ್ ಲಾಗಿನ್ ಆಗಿದ್ದ ಪಾಸ್ವರ್ಡ್ ಹಾಕಬೇಕು. ಒಂದು ವೇಳೆ ನೀವು ಪಾಸ್ವರ್ಡ್ ಮರೆತಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೊಬೈಲಿಗೆ ಓಟಿಪಿ ಬರುತ್ತದೆ. ಅದರ ಆಧಾರದ ಮೇಲೆ ನೀವು ಫ್ರೂಟ್ಸ್ ತಂತ್ರಾಂಶದ ಪೇಜ್ ಓಪನ್ ಮಾಡಬೇಕು. ಆಗ ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಪೇಜ್ ನಲ್ಲಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಪೇಮೆಂಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಭೆನಿಫಿಷಿಯರಿ ಐಡಿ, ನಿಮ್ಮ ಹೆಸರು, ಇಲಾಖೆ, ಸ್ಮೀಮ್, (ಪಿಎಂ ಕಿಸಾನ್ ಸ್ಟೇಟ್ ಕಂಟ್ರಿಬ್ಯೂಷನ್), ವರ್ಷ, ಪೇಮೆಂಟ್ ಜಮೆಯಾದ ದಿನಾಂಕ ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ.

ಒಂದು ವೇಳೆ ನೀವು ಫ್ರೂಟ್ಸ್  ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಸದಿದ್ದರೆ  ಈ

  https://fruits.karnataka.gov.in/OnlineUserLogin.aspx  

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ಸಿಟಿಜನ್ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಆಧಾರ್ ನಂಬರ್ ನಲ್ಲಿರುವಂತೆ ಹಸರು ಹಾಗೂ ಮೊಬೈಲ್ ನಂಬರ್ ನಮೂದಿಸಿ ಐ ಅಗ್ರಿ ಬಾಕ್ಸ್ ಸೆಲೆಕ್ಟ್ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಪ್ರೋಸಿಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ನಿಮ್ಮ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು. ಕ್ರಿಯೇಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅಕೌಂಟ್ ಓಪನ್ ಆಗುತ್ತದೆ.  ಆಗ ಟೇಕ್ ಮಿ ದ ಲಾಗಿನ್ ಪೇಜ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ನಮೂದಿಸಿದ ನಂತರ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಸೇವ್ ಮಾಡಿ ಅರ್ಜಿ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆಗ ನೀವು ನಿಮ್ಮ ಖಾತೆಗೆ ರಾಜ್ಯ ಸರ್ಕಾರದಿಂದ ಜಮೆಯಾದ ಹಣದ ಸ್ಟೇಟಸ್ ನೋಡಬಹುದು.

ಇದನ್ನೂ ಓದಿ ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಹೀಗೆ ಪಡೆಯಿರಿ

ಕೂಡಲೇ ನಿಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಿ. ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಬೇಕಾದರೆ ಫ್ಟೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

Leave a Comment