ಬ್ಯಾಟರಿಯಿಂದಲೂ ನಡೆಯುವ ಸೋಲಿಸ್ ಹೈಬ್ರೀಡ್ 5015 ಟ್ರ್ಯಾಕ್ಟರ್

Written by By: janajagran

Updated on:

Solis Hybrid 5015 Tractor ಇಂಟರ್ ನ್ಯಾಷನಲ್ ಟ್ರ್ಯಾಕ್ಟರ್ ಲಿಮಿಟೆಡ್ (ಐಟಿಎಲ್) ಸೋಲಿಸ್ ಹೈಬ್ರೀಡ್  5015  ಹೊಸ ಟ್ರ್ಯಾಕ್ಟರನ್ನು ಬಿಡುಗಡೆ ಮಾಡಿದೆ. ಹೌದು, ಈ ದೇಶದ ಮೊದಲ ಹೈಬ್ರೀಡ್ ಟ್ರ್ಯಾಕ್ಟರ್ ಆಗಿದೆ.

ಜಪಾನಿಸ್ ತಂತ್ರಜ್ಞಾನವನ್ನು ಹೊಂದಿರುವ ಈ ಟ್ರ್ಯಾಕ್ಟರ್ ಮೂರು ರೀತಿಯಲ್ಲಿ ಲಾಭದಾಯಕವಾಗಿದೆ. ಐಟಿಎಲ್ ಕಂಪನಿಯು ಜಪಾನ್ ದೇಶದ ಯುನ್ಮಾರ್ ಅಗ್ರಿಬಿಸಿನೆಸ್ ಕಂಪನಿ ಸಹಯೋಗದದೊಂದಿಗೆ ಈ ಟ್ರ್ಯಾಕ್ಟರ್ ರೂಪಿಸಿದೆ ಇದರ ಎಕ್ಸ್ ಶೋ ರೂ ಬೆಲೆ 7.21 ಲಕ್ಷ ರೂಪಾಯಿ ಇದೆ.

Solis Hybrid 5015 Tractor  ಬ್ಯಾಟರಿಯಿಂದಲೂ ನಡೆಯುವ ಸೋಲಿಸ್ ಹೈಬ್ರೀಡ್ 5015 ಟ್ರ್ಯಾಕ್ಟರ್ ಮಾಹಿತಿ

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ ಹೊಸ ಯುಗದ ತಂತ್ರಜ್ಞಾನಗಳನ್ನು ಭಾರತದ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ತರಲು ನಾವು ಬದ್ಧರಾಗಿದ್ದೇವೆ., ಇದು ಮೂರು ರೀತಿಯಲ್ಲಿ ಟ್ರ್ಯಾಕ್ಟರ್ ಗಳ ಕಾರ್ಯಕ್ಷಮತೆಯನ್ನು ನೀಡುತ್ತದೆ’ ಎಂದು ಐಟಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್  ತಿಳಿಸಿದ್ದಾರೆ.

ಇದನ್ನೂ ಓದಿ ಹಸಿರು ಪಟ್ಟಿಯಲ್ಲಿದ್ದರೂ ಸಾಲ ಮನ್ನಾಏಕಾಗಿಲ್ಲಾ? ಇಲ್ಲಿದೆ ಮಾಹಿತಿ

ಇದು ಹೈಬ್ರೀಡ್ ಟ್ರ್ಯಾಕ್ಟರ್ ಆಗಿದ್ದು, ಡೀಸೆಲ್ ಮಾತ್ರವಲ್ಲದೆ ಬ್ಯಾಟರಿಯಿಂದಲೂ ಕಾರ್ಯನಿರ್ವಹಸಲಿದೆ. ಟ್ರ್ಯಾಕ್ಟರ್ ಲಿಥಿಯಂ-ಅಯಾನ್ ಬ್ಯಾಟರಿಯೊಂದಿಗೆ ಸರಳ 16ಎ ಮನೆಯ ಸಾಕೆಟ್ ಪ್ಲಗ್ ನೊಂದಿಗೆ ಬರುತ್ತದೆ ಮತ್ತು ಮೂರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.  ಇ ಪವರ್ ಬೂಸ್ಟರ್ ಹೊಂದಿರುವ ಮೊದಲ ಟ್ರ್ಯಾಕ್ಟರ್ ಇದಾಗಿದೆ. ಇದು 50 ಎಚ್.ಪಿ. ಸಾಮರ್ಥ್ಯದ ಡಿಸೇಲ್ ಇಂಜಿನ್ ಹೊಂದಿದೆ. ಆ ಮೂಲಕ 60 ಎಚ್.ಪಿ. ಟ್ರ್ಯಾಕ್ಟರ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.  ಇಂಧನ ಉಳಿತಾಯ ಮಾಡಲಿದೆ.

ಹೊಸ ಟ್ರ್ಯಾಕ್ಟರ್ ಸ್ವಯಂ-ಚಾರ್ಜಿಂಗ್ ಕಟ್-ಆಫ್ ಕಾರ್ಯವನ್ನು ಸಹ ಒಳಗೊಂಡಿದೆ, ಇದು ದೀರ್ಘಕಾಲದವರೆಗೆ ಬ್ಯಾಟರಿ ಬಾಳಿಕೆಗೆ ಬರುತ್ತದೆ. ಲಿಥೇನಿಯಂ ಬ್ಯಾಟರಿ ಅಳವಡಿಸಿದ್ದರಿಂದ  ಪರಿಸರ ಮಾಲಿನ್ಯವನ್ನು ತಡೆಗಟ್ಟುತ್ತದೆ. ಸ್ಮಾರ್ಟ್ ಎಲ್ಇಡಿ ಡಿಸ್ ಪ್ಲೇ ನೀಡಲಾಗಿದೆ. ಇಲ್ಲಿ ಬ್ಯಾಟರಿಯ ಚಾರ್ಜಿಂಗ್ ಹಂತವನ್ನು ಇದು ತೋರಿಸಲಿದೆ.

ಇದನ್ನೂ ಓದಿ ರೈತರಿಗೆ ಭರ್ಜರಿ ಗುಡ್ ನ್ಯೂಸ್: ರೈತರ ಖಾತೆಗೆ ಬರ ಪರಿಹಾರ ಜಮೆ

ಕಂಪನಿಯು ತನ್ನ ಹೋಶಿಯಾರ್ ಪುರ್ (ಪಂಜಾಬ್) ಆಧಾರಿತ ಉತ್ಪಾದನಾ ಘಟಕದಲ್ಲಿ ಸೋಲಿಸ್ ಯಾನ್ಮಾರ್ ಶ್ರೇಣಿಯ ಟ್ರ್ಯಾಕ್ಟರ್ ಗಳನ್ನು ಉತ್ಪಾದಿಸುತ್ತದೆ. ಐಟಿಎಲ್ ಈಗ ವರ್ಷಗಳಿಂದ 130 ದೇಶಗಳಲ್ಲಿ ಸೋಲಿಸ್ ಬ್ರಾಂಡ್ ಅನ್ನು ಮಾರಾಟ ಮಾಡುತ್ತಿದೆ. ಈ ಬ್ರಾಂಡ್ ಅನ್ನು 2019 ರಲ್ಲಿ ಭಾರತದಲ್ಲಿ ಪರಿಚಯಿಸಲಾಗಿದೆ. ಈಗ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಹೈಬ್ರಿಡ್ ಟ್ರ್ಯಾಕ್ಟರ್ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ವಿಶ್ವಾಸವನ್ನು ಹೆಚ್ಚಿಸಲು ಲಿಥಿಯಂ-ಅಯಾನ್ ಬ್ಯಾಟರಿ ಮತ್ತು ಸುಧಾರಿತ ಟ್ರ್ಯಾಕ್ಟರ್ ಇದಾಗಿದೆ ಎಂದು ಐಟಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್  ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ  ಟ್ರ್ಯಾಕ್ಟರ್ ಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Leave a Comment