See your village map in mobile ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಕೆರೆಕಟ್ಟೆಗಳು, ನಿಮ್ಮೂರಿನ ಮ್ಯಾಪ್ ಹಾಗೂ ನಿಮ್ಮ ಜಮೀನಿನ ಸರ್ವೆ ನಂಬರ್ ಮೊಬೈಲ್ ನಲ್ಲಿಯೇ ನೋಡಬಹುದು. ಹೌದು, ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ.
ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನಿಮ್ಮೂರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗಾಗರೆ ಮೊಬೈಲ್ ನಲ್ಲಿ ನಿಮ್ಮ ಜಮೀನಿಗೆ ಹೋಗುವ ದಾರಿ, ಕೆರೆಕಟ್ಟೆಗಳು, ಪಕ್ಕದ ಊರಿನ ರಸ್ತೆ, ನಿಮ್ಮೂರಿನ ಮ್ಯಾಪ್ ಹೇಗೆ ನೋಡಬಹುದು ಎಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.
See your village map in mobile ಜಮೀನಿಗೆ ಹೋಗುವ ದಾರಿ ಇಲ್ಲಿ ಚೆಕ್ ಮಾಡಿ
ನಿಮ್ಮ ಜಮೀನಿನ ಸರ್ವೆ ನಂಬರ್ ನೊಂದಿಗೆ ಅಕ್ಕಪಕ್ಕದ ಸರ್ವೆ ನಂಬರ್ ಗಳು, ದೇವಸ್ಥಾನ, ನಿಮ್ಮ ಜಮೀನಿನ ಹತ್ತಿರವಿರುವ ಕೆರೆ, ಗ್ರಾಮದ ಗಡಿರೇಖೆ, ನೀರು ಹರಿಯುವ ದಿಕ್ಕು ಸೇರಿದಂತೆ ಇನ್ನಿತರ ಮಾಹಿತಿಗಳು ಒಂದೇ ಮ್ಯಾಪ್ ನಲ್ಲಿ ಸಿಗುತ್ತದೆ. ಭೂ ಕಂದಾಯ ಇಲಾಖೆಯು ಈ ಸೌಲಭ್ಯವನ್ನು ಒದಗಿಸಿದೆ.
ಭೂ ಕಂದಾಯ ಇಲಾಖೆಯ ಈ
https://www.landrecords.karnataka.gov.in/service3/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. Map Types ನಲ್ಲಿ Cadastral Maps ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮೂರಿನ ಮುಂದುಗಡೆ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೊಂದು ಪಾಪ್ ಅಪ್ ಬ್ಲ್ಯಾಕ್ಡ್ ಮೆಸೆಜ್ ಬರುತ್ತದೆ. ಅಲ್ಲಿ ನೀವು Always Show ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನ ಮ್ಯಾಪ್ ತೆರೆಯಲ್ಪಡುತ್ತದೆ.
ಈ ಮ್ಯಾಪ್ ನಲ್ಲಿ ನಿಮ್ಮ ಊರಿನ ಸುತ್ತಮುತ್ತಲಿನ ಗಡಿರೇಖೆ, ಕಾಲುದಾರಿ, ಬಂಡಿದಾರಿ, ಹಳ್ಳ, ಬೆಟ್ಟ ಸರ್ವೆ ನಂಬರ್ ಗಳು, ಕೆರೆ, ಹಳ್ಳ, ನೀರು ಹರಿಯುವ ದಿಕ್ಕು, ದೇವಸ್ಥಾನ, ಬಾವಿಗಳಿದ್ದರೆ ಎಲ್ಲವೂ ಮ್ಯಾಪ್ ನ ಎಡಗಡೆ ನಮೂದಿಸಲಾಗಿರುತ್ತದೆ. ನೀವು ಅಲ್ಲಿರುವ ಗಡಿರೇಖೆ, ಸರ್ವೆ ನಂಬರ್ , ಕೆರೆ ಕಟ್ಟೆ, ಬಾವಿ, ಗುಡ್ಡ, ಕಾಲುದಾರಿ, ಬಂಡಿದಾರಿ ಸೇರಿದಂತೆ ಇನ್ನಿತರ ಮಾಹಿತಿ ಅಲ್ಲಿ ನೀಡಲಾಗಿರುತ್ತದೆ. ನಿಮ್ಮೂರಿನ ಸುತ್ತಮುತ್ತಲಿರುವ ಗ್ರಾಮಗಳ ಹೆಸರು, ಗ್ರಾಮಗಳಿಗೆ ಇರುವ ರಸ್ತೆಗಳು, ಗಡಿರೇಖೆ ಎಲ್ಲವೂ ಕಾಣುತ್ತದೆ.
ಇದನ್ನೂ ಓದಿ:ಬೆಳೆ ಹಾನಿ ಪರಿಹಾರ ಹಣ ಜಮೆ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಮ್ಯಾಪ್ ನ್ನು ಭೂ ಕಂದಾಯ ಇಲಾಖೆಯು ತಯಾರಿಸಿರುತ್ತದೆ. ಮ್ಯಾಪ್ ಸಹಾಯದಿಂದ ರೈತರು, ಜನಸಾಮಾನ್ಯರು ತಮ್ಮೂರಿನ, ಜಮೀನಿನ ಗಡಿರೇಖೆ, ಸರ್ವೆ ನಂಬರ್, ಕಾಲ್ದಾರಿ, ಹಳ್ಳಕೊಳ್ಳ, ಬೆಟ್ಟ, ಕೆರೆಗಳನ್ನು ಗುರುತಿಸಬಹುದು. ನಿಮ್ಮ ಜಮೀನಿನ ಸರ್ವೆ ನಂಬರ್, ಕಾಲುದಾರಿ, ಎತ್ತಿನ ಬಂಡಿ ದಾರಿಗಳನ್ನು ಸುಲಭವಾಗಿ ಗುರುತಿಸಬಹುದು.
ಈ ಮ್ಯಾಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮ್ಮೂರಿನ ಎಲ್ಲಾ ಜಮೀನಿನ ಸರ್ವೆನಂಬರ್, ಕಾಲುದಾರಿ ಸೇರಿದಂತೆ ಇತರ ಮಾಹಿತಿಗಳನ್ನು ಪಡೆಯಬಹುದು.