54 thousand subsidy for cow units ಪಶು ಪಾಲನೆ ಮಾಡಲಿಚ್ಚಿಸುವ ರೈತರಿಗೆ ಪಶುಪಾಲನೆಗೆ ಶೇ. 90 ರಷ್ಟು ಸಹಾಯಧನ ಅಂದರೆ 54 ಸಾವಿರ ರೂಪಾಯಿ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಪ್ರಸಕ್ತ 2022-23ನೇ ಸಾಲಿನ ಹಾಲು ಉತ್ಪಾದಕರಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಲಬುರಗಿ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಇಚ್ಚೆಯುಳ್ಳ ರೈತರಿಗೆ ಒಂದು ಮಿಶ್ರತಳಿ ಹಸು/ಸುಧಾರಿತ ತಳಿ ಎಮ್ಮೆ ಘಟಕ ಹಾಗೂ (10+1) ಕುರಿ/ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುವುದು.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಮಿಶ್ರತಳಿ ಹಸು/ಸುಧಾರಿತ ತಳಿ ಎಮ್ಮೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಘಟಕ ಮೊತ್ತ 60 ಸಾವಿರ ರೂಪಾಯಿಯಲ್ಲಿ (ಶೇ.90) ರಷ್ಟು ಅಂದರೆ 54 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.
54 thousand subsidy for cow units ರೈತರಿಗೆ ಸಹಾಯಧನ ಎಷ್ಟು ಸಿಗಲಿದೆ?
(10+1) ಕುರಿ ಮೇಕೆ ಘಟಕ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಘಟಕ ಮೊತತ್ 60 ಸಾವಿರ ರೂಪಾಯಿಗಳಲ್ಲಿ ಶೇ.90 ರಷ್ಟು ಅಂದರೆ 54 ಸಾವಿರ ರೂಪಾಯಿಗಳನ್ನು ಸಹಾಯಧನ ನೀಡಲಾಗುವುದು. ಘಟಕದ ಸಹಾಯಧನ ಹೊರತುಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಕೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯಲಾಗುವುದು.
ಜಿಲ್ಲೆಯ ಅರ್ಹ ರೈತ ಫಲಾನುಭವಿಗಳು ಡಿಸೆಂಬರ್ 7 ರಿಂದ ತಮ್ಮ ಸಮೀಪದ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸರ್ಕಾರ ಮಾರ್ಗಸೂಚಿನನ್ವಯ ಎಲ್ಲಾ ದಾಖಲಾತಿಗಳೊಂದಿಗೆ ಡಿಸೆಂಬರ್ 30 ರ ಸಂಜೆ 5 ಗಂಟೆಯೊಳಗಾಗಿ ಸಂಬಂಧಪಟ್ಟ ತಾಲೂಕಿನ ಪಶು ವೈದ್ಯ ಸೇವಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : ನಿಮ್ಮ ಜಮೀನಿನೊಂದಿಗೆ ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ?
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪ ನಿರ್ದೇಶಕರು/ಜಿಲ್ಲೆಯ ಎಲ್ಲಾ ತಾಲೂಕಿನ ಸಹಾಯಕ ನಿರ್ದೇಶಕರುಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕಲಬುರಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08472 226139, ಮೊಬೈಲ್ ಸಂಖ್ಯೆ 9448636316, ಆಳಂದ ದೂರವಾಣಿ ಸಂಖ್ಯೆ 08477 202355, ಮೊಬೈಲ್ ಸಂಖ್ಯೆ 9448651345, ಜೇವರ್ಗಿ ದೂರವಾಣಿ ಸಂಖ್ಯೆ 08488 236048 ಮತ್ತು ಮೊಬೈಲ್ ಸಂಖ್ಯೆ 997255636, ಅಫಜಲ್ಪೂರ 08470 283028, ಮೊಬೈಲ್ ಸಂಖ್ಯೆ 9449123571, ಚಿತ್ತಾಪುರ 08474 236226, ಮೊಬೈಲ್ ಸಂಖ್ಯೆ 9611732647, ಚಿಂಚೋಳಿ 08475 273066 ಮತ್ತು ಮೊಬೈಲ್ ನಂಬರ್ 9880220932 ಹಾಗೂ ಸೇಡಂ ದೂರವಾಣಿ ಸಂಖ್ಯೆ08441 200005, ಮೊಬೈಲ್ ಸಂಖ್ಯೆ 9449618724 ಗೆ ಸಂಪರ್ಕಿಸಲು ಕೋರಲಾಗಿದೆ.
ಕೊಪ್ಪಳ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
ಹಾಲು ಉತ್ಪಾದಕರಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಒಂದು ಮಿಶ್ರತಳಿ ಹಸು ಅಥವಾ ಸುಧಾರಿತ ತಳಿ ಎಮ್ಮೆ ಘಟಕ ಹಾಗೂ ಕುರಿ ಅಥವಾ ಮೇಕೆ ಘಟಕ ಅನುಷ್ಠಾನಗೊಳಿಸಲು ಕೊಪ್ಪಳ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ನೀವು ನಿಂತಿರುವ ಸ್ಥಳ ಯಾವ ಸರ್ವೆ ನಂಬರಿನಲ್ಲಿ ಬರುತ್ತದೆ? ಯಾರ ಹೆಸರಿಗಿದೆ? ಮೊಬೈಲ್ ನಲ್ಲೆ ಚೆಕ್ ಮಾಡಿ
ಒಂದು ಮಿಶ್ರ ತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕದಲ್ಲಿ 1 ಮಿಶ್ರ ತಳಿ ಹಸು ಅಥವಾ 1 ಸುಧಾರಿತ ತಳಿ ಎಮ್ಮೆಯನ್ನು ವಿತರಿಸಲಾಗುವುದು. ಈ ಘಟಕದ ವೆಚ್ಚ 60 ಸಾವಿರ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 54 ಸಾವಿರ ಸಹಾಯಧನ ಹಾಗೂ 6 ಸಾವಿರ ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನವಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್. ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.