ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭ

Written by By: janajagran

Updated on:

ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ತೀರ್ಮಾನದಂತೆ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒಟ್ಟು 08 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲಿಗೆ 1940 ರೂಪಾಯಿ ದರ ಹಾಗೂ ಭತ್ತ ಗ್ರೇಡ್-ಎ ದರ ಪ್ರತಿ ಕ್ವಿಂಟಾಲಿಗೆ 1960 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ರೈತರು ಬೆಳೆದ ಭತ್ತವನ್ನು ಮಾರಾಟ ಮಾಡಲು ತಮ್ಮ ಸಮೀಪದ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ತಾಲೂಕುವಾರು ಖರೀದಿ ಕೇಂದ್ರಗಳ ಹಾಗೂ ಖರೀದಿ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.

ಚಿತ್ತಾಪೂರ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸನ್ನತಿ ಮತ್ತು ಕೆಲ್ಲೂರು ಹಾಗೂ ಖರೀದಿ ಅಧಿಕಾರಿಗಳಾದ ಎಸ್.ಬಿ.ಬಿರಾದಾರ ಇವರ ಮೊಬೈಲ್ ಸಂಖ್ಯೆ 9448880409 ಇರುತ್ತದೆ.

ಸೇಡಂ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಧೋಳ, ಕೊಲಕುಂದಾ, ಮದನಾ, ನಾಡೆಪಲ್ಲಿ ಹಾಗೂ ಖರೀದಿ ಅಧಿಕಾರಿಗಳಾದ ಮಲ್ಲಪ್ಪ ತಾಳಿಕೋಟಿ ಇವರ ಮೊಬೈಲ್ ಸಂಖ್ಯೆ 9743299026 ಇರುತ್ತದೆ.

ಜೇವರ್ಗಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಳಬಟ್ಟಿ ಹಾಗೂ ಖರೀದಿ ಅಧಿಕಾರಿಗಳಾದ ಸಿದ್ದಮ್ಮ ಇವರ ಮೊಬೈಲ್ ಸಂಖ್ಯೆ 9740621479 ಇರುತ್ತದೆ.

ಯಡ್ರಾಮಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಳ್ಳಿ ಹಾಗೂ ಖರೀದಿ ಅಧಿಕಾರಿಗಳಾದ ಸಿದ್ದಮ್ಮ ಇವರ ಮೊಬೈಲ್ ಸಂಖ್ಯೆ 9740621479 ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರನ್ನು (ಮೊಬೈಲ್ ಸಂಖ್ಯೆ 9448496023) ಗೆ ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾದ ರೈತರ ಖಾತೆಗೆ  68.67 ಕೋಟಿ ರೂಪಾಯಿ ಜಮೆ

ಕಳೆದ ಜುಲೈ-ಸೆಪ್ಟೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದೂವರೆಗೆ ಆರು ಕಂತುಗಳಲ್ಲಿ 79,673 ಫಲಾನುಭವಿಗಳಿಗೆ 68.67 ಕೋಟಿ ರೂಪಾಯಿ ಇನಪುಟ್ ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಇದನ್ನೂ ಓದಿ : 4.61 ಲಕ್ಷ ರೈತರಿಗೆ 318.87 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಬಿಡುಗಡೆ- ಆರ್. ಅಶೋಕ

ಜಿಲ್ಲೆಯ ಕಲಬುರಗಿ, ಕಾಳಗಿ, ಚಿಂಚೋಳಿ, ಚಿತ್ತಾಪೂರ, ಆಳಂದ, ಅಫಜಲಪೂರ ಜೇವರ್ಗಿ, ಶಹಾಬಾದ, ಸೇಡಂ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಬೆಳೆ ಹಾನಿಗೊಳಗಾಗಿದ್ದವು. ಕಂದಾಯ ಮತ್ತು ಕೃಷಿ ಇಲಾಖೆಯು ಜಂಟಿ ಸಮೀಕ್ಷೆ ನಡೆಸಿ ಸುಮಾರು 2,32,872 ಹೆಕ್ಟೇರ್ ಬೆಳೆ ಹಾನಿಯಾದ ಕಾರಣ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಬೆಳೆ ಪರಿಹಾರಕ್ಕಾಗಿ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾAಶದಲ್ಲಿ ದಾಖಲು ಮಾಡಲಾಗಿದ್ದು, ಇದೀಗ 7ನೇ ಹಂತದಲ್ಲಿ 9,715 ಫಲಾನುಭವಿಗಳಿಗೆ 747.85 ಲಕ್ಷ ಇನ್ ಪುಟ್ ಸಬ್ಸಿಡಿಯನ್ನು ಜಮೆ ಮಾಡಲು  ಅನುಮೋದನೆ ದೊರೆತಿದೆ.

ಶೀಘ್ರದಲ್ಲಿಯೇ ರೈತರ ಬ್ಯಾಂಕ್ ಖಾತೆಗಳಿಗೆ 747.85 ಲಕ್ಷ ರೂ. ಪರಿಹಾರ ಧನವನ್ನು ಜಮೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment