ಕೃಷಿ ಇಲಾಖೆಯ ಸೌಲಭ್ಯಪಡೆಯಬೇಕಾದರೆ ಪ್ರತಿಯೊಬ್ಬ ರೈತರಿಗೆ ಫ್ರೂಟ್ಸ್ ಐಡಿ ಮಹತ್ವವಾಗಿದೆ ಎಂಬುದು ಎಲ್ಲಾ ರೈತರಿಗೆ ಗೊತ್ತಿದ್ದ ಸಂಗತಿ. ಈಗ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಹೌದು, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಕೃಷಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ರೈತರಿಗೆ ಬೇಕೇ ಬೇಕು. ಹಾಗಾದರೆ ಫ್ರೂಟ್ಸ್ ಐಡಿ ಎಂದರೇನು? ರೈತರು ಆನ್ಲೈನ್ ನಲ್ಲಿ ಫ್ರೂಟ್ಸ್ ಐಡಿಗೆ ಅರ್ಜಿ ಹೇಗೆ ಸಲ್ಲಿಸಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಏನಿದು ಫ್ರೂಟ್ಸ್ ಐಡಿ (What is FRUITS ID?
ಸರ್ಕಾರಿ, ಖಾಸಗಿ ನೌಕರರಿಗೆ ತಮ್ಮ ಐಡಿ ಕಾರ್ಡ್ ಇದ್ದಂತೆ ರೈತರಿಗೆ ಐಡಿ ಕಾರ್ಡ್ ಫ್ರೂಟ್ ಐಡಿಯಾಗಿದೆ. Farmer Registration and Unified beneficiary information system (fruits) ಐಡಿಯು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ನಂತೆ ಫ್ರೂಟ್ಸ್ ಐಡಿಗೂ ನಂಬರ್ ಇರುತ್ತದೆ.ಇದು ರೈತರಿಗೆ ಪರ್ಮನೆಂಟ್ ನಂಬರ್ ಆಗಿರುತ್ತದೆ. ಈ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಮುಂದೆ ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದಿದ್ದರೆ ಅವರು ಮುಂದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ.
ಮೊಬೈಲ್ ನಲ್ಲಿ ರೈತರು ಫ್ರೂಟ್ಸ್ ಐಡಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು? (How to register for FRUITS id)
ಪ್ರೂಟ್ಸ್ ಐಡಿಗಾಗಿ ರೈತರು ಅರ್ಜಿ ಸಲ್ಲಿಸಲು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ ಐಡಿ ಓಪನ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಒಂದು ವೇಳೆ ನೋಂದಣಿ ಮಾಡಿಸಿದ್ದರೆ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ತಮ್ಮ ಫ್ರೂಟ್ಸ್ ಐಡಿ ಚೆಕ್ ಮಾಡಬಹುದು. ಪಾಸ್ವರ್ಡ್ ಮರೆತಿದ್ದರೆ Reset Password ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಬೇಕು. ನಂತರ ನೀವು ಪಾಸ್ವರ್ಡ್ ಕ್ರಿಯೆಟ್ ಮಾಡಿ ಲಾಗಿನ್ ಆಗಬಹುದು.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ಒಂದು ವೇಳೆ ನೀವು ಫ್ರೂಟ್ಸ್ ಐಡಿಗೆ ನಿಮ್ಮಹೆಸರು ಹೊಸದಾಗಿ ನೋಂದಣಿ ಮಾಡಿಸುತ್ತಿದ್ದರೆ citizen Registration ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ಹಾಕಬೇಕು. ಐ ಅಗ್ರಿ ಬಾಕ್ಸ್ ಆಯ್ಕೆಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಕಬೇಕು. ನಿಮ್ಮ ಮೇಲ್ ಐಡಿಯಿದ್ದರೆ ಯಸ್ ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ಆಮೇಲೆ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಕೇಳಲಾದ ಮಾಹಿತಿ ಭರ್ತಿಮಾಡಿ ಫ್ರೂಟ್ಸ್ ಐಡಿ ಪಡೆದುಕೊಳ್ಳಬಹುದು.
ಫ್ರೂಟ್ಸ್ ಐಡಿ ರೈತರಿಗೇಕೆ ಬೇಕು?
ರೈತರಿಗೆ ಬಿತ್ತನೆಯಿಂದ ಕೊಯ್ಲುವರೆಗೆ ಬೇಕಾಗುವ ಉಪಕರಣಗಳಿಗೆ ಫ್ರೂಟ್ಸ್ ಐಡಿ ಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಯ ವತಿಯಿಂದ ಸಬ್ಸಿಡಿ ಪಡೆಯಲು ಫ್ರೂಟ್ಸ್ ಐಡಿ ಬೇಕಾಗುತ್ತದೆ. ಬೆಂಬಲ ಬೆಲೆಯಲ್ಲಿ ರೈತರ ಬೆಳೆ ಮಾರಾಟ ಮಾರಾಟ ಮಾಡಲು, ವಿದ್ಯಾ ನಿಧಿ ಯೋಜನೆಯಡಿಯಲ್ಲಿ ರೈತರ ಮಕ್ಕಳು ಶಿಷ್ಯವೇತನ ಪಡೆಯಲು ಫ್ರೂಟ್ಸ್ ಐಡಿ ಬೇಕು.
ಫ್ರೂಟ್ಸ್ ಐಡಿ ಪಡೆಯಲು ರೈತರಿಗೆ ಯಾವ ಯಾವ ದಾಖಲೆ ಬೇಕು? (Documents for FRUITS ID)
ರೈತರು ಫ್ರೂಟ್ಸ್ ಐಡಿ ಪಡೆಯಲು ಆಧಾರ್ ಕಾರ್ಡ್ ಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಜಮೀನಿನ ಪಹಣಿ (ಆರ್.ಟಿಸಿ ) ಇರಬೇಕು. ಒಂದು ವೇಳೆ ರೈತರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.