ಶಿಕ್ಷಕರ ಹುದ್ದೆಗಾಗಿ ಕಾಯುತ್ತಿರುವ ಬಿಇಡಿ, ಎಮ್.ಇಡಿ ಮುಗಿಸಿದ ಅಭ್ಯರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಬುಡಕಟ್ಟು ಸಂಬಂಧಿ ಸಚಿವಾಲಯವು, ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್‌ಎಸ್) ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಪ್ರೋಸ್ಟ್ ಗ್ರಾಜುಯೇಟ್ ಟೀಚರ್, ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಸೇರಿದಂತೆ ಒಟ್ಟು 3479 ಹುದ್ದೆಗಳ ಭರ್ತಿಗೆ (Recruitment )ಆರ್ಜಿ ಆಹ್ವಾನಿಸಿದೆ.
ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತೆಗಳು, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಏಪ್ರೀಲ್ 1 ರಿಂದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಏಪ್ರೀಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಜೂನ್ ಮೊದಲ ವಾರದಲ್ಲಿ ನಡೆಯಲಿವೆ. ಇನ್ನೇಕೆ ತಡ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ನಿಮ್ಮ ಕನಸು ನನಸು ಮಾಡಿಕೊಳ್ಳಿ.
ಹುದ್ದೆಗಳ ವಿವರ
ಪ್ರಾಂಶುಪಾಲರು | 175 |
ಉಪಪ್ರಾಂಶುಪಾಲರು | 116 |
ಪಿಜಿಟಿ ಹುದ್ದೆಗಳು : | 1244 |
ಟಿಜಿಟಿ ಹುದ್ದೆಗಳು | 1944 |
ಒಟ್ಟು ಹುದ್ದೆಗಳ ಸಂಖ್ಯೆ | 3479 |
ಈ ಮೇಲಿನ ಹುದ್ದೆಗಳನ್ನು ದೇಶದಲ್ಲಿರುವ ಆಯಾ ರಾಜ್ಯದ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಬುಡಕಟ್ಟು ಸಂಬಂಧಿ ಸಚಿವಾಲಯದ ವತಿಯಿಂದ ನೇಮಕ ಮಾಡಲಾಗುತ್ತದೆ.
ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ / ಪದವಿ / ಸ್ನಾತಕೋತ್ತರ ಪದವಿ / ಬಿ.ಇಡಿ / ಎಂ.ಇಡಿ ಉತ್ತೀರ್ಣರಾಗಿರಬೇಕು. ವಯೋಮಾನ, ವೇತನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://recruitment.nta.nic.in ಗೆ ಭೇಟಿ ನೀಡಬಹುದು.
ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂಪಾಯಿ, ಓಬಿಸಿ ಅಭ್ಯರ್ಥಿಗಳಿಗೆ 800 ಹಾಗೂ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ 600 ರೂಪಾಯಿ ಇದೆ.
https://testservices.nic.in/examSys21/root/home.aspx?enc=Ei4cajBkK1gZSfgr53ImFTyOQQk3IFqbRiK7+ipevCT6bMOHqSlYJszo9K2ETsWz ಈ ಲಿಂಕ್ ಮೇಲೆ ಕ್ಲೀಕ್ ಮಾಡಿದರೆ ನೇರವಾಗಿ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನ್ಯೂ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಬಹುದು.