ಇಂದಿನಿಂದ ಎರಡು ದಿನ ಭಾರಿ ಮಳೆ ಸಾಧ್ಯತೆ

Written by Ramlinganna

Updated on:

two days rain ರಾಜ್ಯದಲ್ಲಿ ಎರಡು ದಿನ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು,ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಂಗಳವಾರ ಹಾಗೂ ಬುಧವಾರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಯಾಗಲಿದೆ. ಅದೇ ರೀತಿ ದಕ್ಷಿಣ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರುನಗರ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಕೋಲಾರ, ಮೈಸೂರು, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ, ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಶನಿವಾರದಂದು ರಾತ್ರಿ ವೇಳೆ ಧಾರಾಕಾರ ಮಳೆಯಾಗಿದ್ದು, ಕೃಷಿಕರು ತೊಂದರೆಗೆ ಒಳಗಾಗಿದ್ದಾರೆ. ಕಾಫಿ ಕೊಯ್ಲು, ಭತ್ತ ಹಾಗೂ ರಾಗಿ ಪೈರಿನ ಕಟಾವಿಗೂ ಸಮಸ್ಯೆಯಾಗಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆಯಲ್ಲಿ ತೊಯ್ದು ಹೋಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ಭಾನುವಾರ ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವುಕಡೆ ಮಳೆಯಾಗಿದೆ.

ಸೋಮವಾರ ಬೆಳಗ್ಗೆ 8.30 ಅವಧಿಯಲ್ಲಿ,  ಧರ್ಮಸ್ಥಳದಲ್ಲಿ 10 ಸೆಂ. ಮೀ. ಬೆಳ್ತಂಗಡಿಯಲ್ಲಿ 4, ಪಣಂಬೂರು, ಚಿಕ್ಕಮಗಳೂರಿನಲ್ಲಿ 3, ಮಂಗಳೂರು, ಉಡುಪಿಯ ಸಿದ್ದಾಪುರದಲ್ಲಿ 2, ಚಾಮರಾಜನಗರದ ಕೆವಿಕೆ ವ್ಯಾಪ್ತಿ ಹಾಗೂ ಕೊಡಗಿನ ಕುಶಾಲನಗರದಲ್ಲಿ 1 ಸೆಂ.ಮೀ ಮಳೆ ಸುರಿದಿದೆ.

ಇದನ್ನು ಓದಿ ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ಶೃಂಗೇರಿ ತಾಲೂಕಿನ ಕೆಲ ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಮಳೆ ಬಿರುಗಾಳಿ, ಆಲಿಕಲ್ಲು ಸಹಿತ ಅಕಾಲಿಕ ಮಳೆಯಾಗಿದ್ದು, ಮೆಣಸೆಯಲ್ಲಿ ಅಂಗಡಿ, ಸರ್ಕಾರಿ ಶಾಲೆ ಮೇಲ್ಛಾವಣಿಗೆ ಹಾನಿಯಾಗಿದೆ.

ಅಕಾಲಿಕ ಮಳೆಯಿಂದಾಗಿ ರೈತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ, ಅಡಕೆ ಕೊಯ್ಲು, ಭತ್ತದ ಕಟಾವು ಆರಂಭವಾಗಿದ್ದು, ಕೆಲವೆಡೆ ಕೊಯ್ಲು ಮುಗಿದಿದೆ. ಭತ್ತದ ಪೈರು ಗಾಳಿಗೆ ನೆಲಕ್ಕೊರಗಿದ್ದು, ಕೆಸರಿನಲ್ಲಿ ಮುಳುಗಿದೆ.

two days rain ಇಂದು ಯಾವ ಯಾವ ಊರಲ್ಲಿ ಮಳೆಯಾಗಲಿದೆ?

ಇಂದು ಯಾವ ಯಾವ ಊರಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಬೇಕೇ? ಹಾಗಾದರೆ ವರುಣಮಿತ್ರ ಸಹಾಯವಾಣಿ 92433 45433 ಗೆ ಕರೆ ಮಾಡಿ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಉಚಿತ ಸಹಾಯವಾಣಿಯಿಂದ ನೀವು ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದು ಸಂಪೂರ್ಣ ಉಚಿತವಾಗಿರುತ್ತದೆ. ಹೌದು, ಇದಕ್ಕಾಗಿ ಸಾರ್ವಜನಿಕರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.  ಇನ್ನೇಕೆ ತಡ ಈಗಲೇ ಕರೆ ಮಾಡಿ ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

Leave a Comment