ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮೂರು ದಿನಗಳ ಕಾಲ (three days rain alert in karnataka) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಾರ್ಚ್ 29 ರಿಂದ 31ರವರೆಗೆ ಗುಡುಗುಸಿಡಿಲು ಸಹಿತ ಮಳೆಯಾಗಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಮಾರ್ಚ್ 29 ರಂದು ಸಾಧಾರಣ ಮಳೆಯಾಗಲಿದೆ.
ಹಲೆವೆಡೆ ಮಳೆ
ಬಿರು ಬಿಸಿಲಿನಿಂದ ಕೆಂಡವಾಗಿದ್ದ ರಾಜ್ಯಕ್ಕೆ ಹಲವೆಡೆ ಭಾನುವಾರ ಅಕಾಲಿಕ ಮಳೆ ಸುರಿದಿದೆ. ಉತ್ತರ ಕನ್ನಡದ ಯಲ್ಲಾಪುರ, ದಾಂಡೇಲಿ, ಜೋಯಾಡಾ ತಾಲೂಕಿನಲ್ಲಿ ಎರಡು ಗಂಟೆಗೂ ಹೆಚ್ಚು ಮಳೆಯಾಗಿದೆ. ಯಲ್ಲಾಪುರ ತಾಲೂಕಿನ ಮಾದೆಕೊಪ್ಪದಲ್ಲಿ 20ಕ್ಕೂ ಹೆಚ್ಚು ಮನೆಯ ಛಾವಣೆ ತಗಡು ಹಾರಿಹೋಗಿದೆ.
ಹಾವೇರಿ ಜಿಲ್ಲೆಯ ಹಿರೇಕೇರೂರ, ತಾವರಗಿ, ಚೋಗಿಹಳ್ಳಿಯಲ್ಲಿ ಮಳೆಯಾಗಿದೆ. ಶಿವಮೊಗ್ಗದ ಆಯನೂರಿನಲ್ಲಿ ಸಿಡಿಲು ಬಡಿದು ಅದಿಲ್ (18) ವರ್ಷದ ಯುವಕ ಮೃಪಟ್ಟಿದ್ದಾನೆ.
ನದಿ ಸುತ್ತಲಿನ ಜನರಿಗೆ ಸೂಚನೆ
ಕಾರಂಜಾ ಜಲಾಶಯದಿಂದ ಭಾಲ್ಕಿ, ಔರಾದ್ ಹಾಗೂ ಕಮಲನಗರ ಪಟ್ಟಣಗಳಿಗೆ ಮಾರ್ಚ್ 28 ರಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದ್ದರಿಂದ ನೀರು ಬಿಡುವ ಪ್ರಯುಕ್ತ ಜಲಾಶಯದ ಕೆಳ ಪಾತ್ರ, ಸುತ್ತಲಿನ ಜನರು ನದಿಪಾತ್ರಕ್ಕೆ ಇಳಿಯಬಾರದು ಎಂದು ಕಾರಂಜಾ ಜಲಾಶಯದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.