2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ರೈತರು ತಮ್ಮ ಸ್ವಂತ ಜಮೀನಿನಲ್ಲಿ ನಿಂತು ಬೆಳೆಯ ವಿವರವನ್ನು ದಾಖಲಿಸಬಹುದು.
ಹೌದು, ರೈತರು ಬೆಳೆದ ಹಿಂಗಾರು ಬೆಳೆಯ ಮಾಹಿತಿಯನ್ನು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ವರ್ಷದ ಹಿಂಗಾರು ಬೆಳೆಗಳನ್ನು Farmer Rabi Crop Survey Karnataka 20221-22 ಎಂಬ ಆ್ಯಪ್ ನಲ್ಲಿ ಸುಲಭವಾಗಿ ದಾಖಲಿಸಬಹುದು. ಸಮೀಕ್ಷೆ ಮಾಡಲು ಈಗ ಮೊದಲಿನಂತೆ ಅಧಿಕಾರಿಗಳಿಗಾಗಿ ಕಾಯುವ ಅಗತ್ಯವಿಲ್ಲ. ಸ್ಮಾರ್ಟ್ ಫೋನ್ ಇದ್ದರೆ ಸಾಕು, ರೈತರು ತಮ್ಮ ಜಮೀನಿನಲ್ಲಿ ನಿಂತು ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡಬಹುದು.
ಸಮೀಕ್ಷೆ ಮಾಡಿದ ನಂತರ ಬೆಳೆ ಮಾಹಿತಿಯನ್ನು ಮೇಲ್ವಿಚಾರಕರ ಮೂಲಕ ಅನುಮೋದನೆ ಪಡೆದ ನಂತರ ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆಗಾಗಿ, ಪ್ರಕೃತ್ತಿ ವಿಕೋಪದಿಂದ ಬೆಳೆ ನಷ್ಟ ಪರಿಹಾರ ಪಡೆಯುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ.
ಹಿಂಗಾರು ಬೆಳೆ ಸಮೀಕ್ಷೆ ಮಾಡುವುದು ಹೇಗೆ? How to survey Rabi Crop?
ರೈತರು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ https://play.google.com/store/apps/details?id=com.csk.RabiCropfarmer_21.cropsurvey
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಹಿಂಗಾರು ರೈತರ ಬೆಳೆ ಸಮೀಕ್ಷೆ ಮಾಡಲು Allow ಮೇಲೆ ಕ್ಲಿಕ್ ಮಾಡಬೇಕು. 2021-221, ಹಿಂಗಾರು, ಇರುತ್ತದೆ. ಸರಿ ಮೇಲೆ ಕ್ಲಿಕ್ ಮಾಡಬೇಕು. ಫೋನ್ ಕಾಲ್ ಅಲೋ ಆಯ್ಕೆ ಮಾಡಿಕೊಂಡ ನಂತರ ಋತು ಹಾಗೂ ಹಿಂಗಾರಿ ಸರಿಯಾಗಿದೆಯೇ ಎಂಬ ಸಂದೇಶ ಕಾಣುತ್ತದೆ ಆಗ ಹೌದು ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಆಧಾರ್ ವಿವರ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬೇಕು. ಆಗ ರೈತರ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಯನ್ನು ನಮೂದಿಸಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ ನಂಬರ್, ರೈತನ ಹೆಸರು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಗಡಿರೇಖೆಯೊಳಗೆ ನಿಂತು ವಿವರ ದಾಖಲಿಸಬೇಕು.
ರೈತರು ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಈಗಾಗಲೇ ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರಗಳನ್ನು ಸಹ ದಾಖಲಿಸಬೇಕು. ಬೆಳೆಯ ವಿಸ್ತೀರ್ಣದ ಜೊತೆಗೆ ಬೆಳೆಯ 2 ಫೋಟೋಗಳನ್ನು ತೆಗೆದು ಅಪ್ಲೋಡ್ ಮಾಡಬೇಕು. ನಂತರ ಅಪ್ಲೋಡ್ ಮಾಡಿದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ. ಒಂದು ವೇಳೆ ರೈತರ ಹತ್ತಿರ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಫೋನ್ ನಿಂದಲೂ ಸಮೀಕ್ಷೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕ ಕಚೇರಿ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಬೆಳೆ ಸಮೀಕ್ಷೆ ಸಹಾಯವಾಣಿ 8448447715 ಗೆ ಸಂಪರ್ಕಿಸಬಹುದು.
ಬೆಳೆ ಸಮೀಕ್ಷೆ ಏಕೆ ಮಾಡಿಸಬೇಕು? why do crop survey?
ಎನ್.ಡಿಆರ್.ಎಫ್ ತಂಡ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟದ ಪರಿಹಾರ ವಿತರಿಸಲು ಸಹಾಯವಾಗುತ್ತದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಬೆಳೆ ವಿಮೆ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು ಸಹಾಯವಾಗುತ್ತದೆ. ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬೇಕಾಗುತ್ತದೆ.