ಈ ದಿನಾಂಕದೊಳಗೆ ಬೆಳೆಗಳಿಗೆ ವಿಮೆ ಮಾಡಿಸಿ – ಇಲ್ಲಿದೆ ಮಾಹಿತಿ

Written by Ramlinganna

Updated on:

ಹಿಂಗಾರು ಬೆಳೆಗಳ ವಿಮೆ ಮಾಡಿಸುವ ಪ್ರಕ್ರಿಯೆ ಆರಂಭವಾಗಿದೆ. ಹೌದು, ಮುಂಗಾರು ಹಂಗಾಮಿನ ಬೆಳೆಗಳ ವಿಮೆಯಂತೆ ಹಿಂಗಾರು ಬೆಳೆಗಳಿಗೂ ವಿಮೆ ಮಾಡಿಸಬಹುದು. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? crop insurance last date ಯಾವುದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಹಾಗೂ crop insurance last date? ಯಾವುದು ? ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಹಿಂಗಾರು ಬೆಳೆಗಳ ವಿಮೆಗೆ ಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಮಾಹಿತಿ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು View cut off Dates ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ಕೆಳಗಡೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅಧರ ಎದುರುಗಡೆ ಯಾವ ದಿನಾಂಕಕ್ಕೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕೊನೆಯ ದಿನಾಂಕ ಯಾವುದು? ಬೆಳೆ ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿ ಉಳಿದಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯವರಾಗಿದ್ದರೆ ಗೋಧಿ, ಕಡಲೆ, ಜೋಳ, ಕುಸುಮೆ, ಭತ್ತ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ವಿಮೆ ಮಾಡಿಸಬಹುದು.

ಇದನ್ನೂ ಓದಿ ಹಿಂಗಾರು ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆ- ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮೂರಿನ ಬೆಳೆಗಳ ಲಿಸ್ಟ್

ನೀವು ಬಾಗಲಕೋಟೆ ಜಿಲ್ಲೆಯವರಾಗಿದ್ದರೆ ಕಡಲೆ, ಮುಸುಕಿನ ಜೋಳ, ಈರುಳ್ಳಿ, ಗೋಧಿ, ಸೂರ್ಯಕಾಂತಿ, ಹುರುಳಿ, ಅಗಸೆ, ಕುಸುಮೆ  ಬೆಳೆಗಳಿಗೆ ವಿಮೆ ಮಾಡಿಸಬಹುದು. ಇದೇ ರೀತಿ ನೀವು ನಿಮ್ಮಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಜಮೆಯಾಗಿರುವ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ಫಾರ್ಮರ್ಸ್ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿನೀಮಗೆ ಋತು ಆಯ್ಕೆ Rabi ಬದಲಾಗಿ ನೀವು Khariff ಆಯ್ಕೆ ಮಾಡಿಕೊಳ್ಳಬೇಕು.ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ Check status ಮೇಲೆ ಕ್ಲಿಕ್ ಮಾಡಬೇಕು.  ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮಗೆ ಮುಂಗಾರು ಹಂಗಾಮಿಗೆ ಹಣ ಜಮೆಯಾಗಿದ್ದರೆ ಮಾಹಿತಿ ಕಾಣಿಸುತ್ತದೆ.ಇಲ್ಲದಿದ್ದರೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

Leave a Comment