ವಿಶೇಷ ಲಕ್ಷಣ ಹೊಂದಿರುವ 35 ಬೆಳ ತಳಿಗಳ ಲೋಕಾರ್ಪಣೆ

Written by By: janajagran

Updated on:

launches 35 crop varieties ದೇಶದ ರೈತರಿಗೆ ಸಂತಸದ ಸುದ್ದಿ. ಪ್ರಧಾನಿ ನರೇಂದ್ರ ಮೋದಿಯವರು ಇಂದು 35 ವಿಶೇಷ ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.  ಹೌದು, ಹವಾಮಾನ ಬದಲಾವಣೆ ಮತ್ತು ಅಪೌಷ್ಠಿಕತೆಯನ್ನು ಪರಿಹರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧ ಪಡಿಸಿದ ವಿಶೇಷ ಬೆಳೆ ತಳಿಗಳನ್ನು ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು.

. ಈ ಬೆಳೆ ಪ್ರಭೇದಗಳು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶಗಳ ಅಂಶದಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಈ ತಳಿಗಳಿಂದ ರೈತರಿಗೆ ಲಾಭವಾಗುವುದರೊಂದಿಗೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿವೆ. ರೈತರು ವಿಶೇಷ ತಳಿಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದ್ದಾರೆ.

ಇಂದು ಬಿಡುಗಡೆಯಾಗಿರುವ ಬೆಳೆಗಳ ತಳಿಗಳು ಕಡಿಮೆ ಬೆಲೆಯಲ್ಲಿ ಹಾಗೂ ಉಪ್ಪು ನೀರಿನಲ್ಲಿಯೂ ಬೆಳೆಯಬಹುದು. ರೈತರಿಗೆ ಹೆಚ್ಚಿನ ಖರ್ಚು ಬರದೆ ಅತೀ ಕಡಿಮೆ ನೀರಿನಲ್ಲಿ ಬೆಳೆದು ಹೆಚ್ಚು ಇಳುವರಿ ಪಡೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿವೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.  ಸಣ್ಣ ರೈತರೂ ಸಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

launches 35 crop varieties ಹಾಗಾದರೆ 35 ವಿಶೇಷ ತಳಿಗಳು ಯಾವುವು?

ಕಡಲೆ, ಬೇಗನೆ ಪಕ್ವಗೊಳ್ಳುವ ವಿವಿಧ ಸೋಯಾಬಿನ್, ರೋಗ ನಿರೋಧಕ ತಳಿಯ ಭತ್ತ, ಜೈವಿಕ ಬಲವರ್ದಿತ ಗೋದಿ, ಮುತ್ತಿನ ನವಣೆ, ಮೆಕ್ಕೆಜೋಳ,  ಮಿಲ್ಟ್, ಕ್ರಿಮಿನಾಶಕ ಮೊಸಾಯಿಕ್ ನಿರೋಧಕ ಪಾರಿವಾಳಬಟಾಣೆ, , ಕ್ವಿನೋವಾ, ಬಕ್ ವೀಟ್, ರೆಕ್ಕೆಯ ಬೀನ್, ಫವಾ ಬೀನ್.

ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ

ಹವಾಮಾನ ಬದಲಾವಣೆಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಕೃಷಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಮುಂದಾಗಿದ್ದು, ಇದಕ್ಕಾಗಿ ದೊಡ್ಡಮಟ್ಟದಲ್ಲಿ ಪ್ರಯತ್ನ ನಡೆಯಿದೆ. ಈ ನಿಟ್ಟಿನಲ್ಲಿ ವಿಶೇಷ ಲಕ್ಷಣಗಳನ್ನು ಹೊಂದಿರುವ 35 ಬೆಳೆಗಳ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.

ಎರೆಹುಳು ಘಟಕ ನಿರ್ಮಿಸುವುದು ಹೇಗೆ?

ಚಪ್ಪಡಿ ಕಲ್ಲು, ಇಟ್ಟಿಗೆ ಅಥವಾ ಸಿಮೆಂಟಿನಿಂದ ತೊಟ್ಟಿಯನ್ನು ನೆಲದ ಮೇಲೆ ನಿರ್ಮಿಸಬಹುದು. ಸುಮಾರು 8x4x3 ತ್ಯಾಜ್ಯ ತುಂಬಿದ ತೊಟ್ಟಿಯಲ್ಲಿ 4-5 ಕೆಜಿ.ಹುಳುಗಳನ್ನು ಬಿಡಬೇಕು. ಮಳೆ ಹಾಗೂ ಬಿಸಿಲಿನಿಂದ ಕಾಪಾಡಲು ತೊಟ್ಟಿಯ ಮೇಲೆ ಚಪ್ಪರ ಹಾಕಬೇಕು. ಕಳೆ, ಕೂಳೆ, ಹೊಟ್ಟು, ನಾರಿನಪುಡಿ, ಕಬ್ಬಿನ ಸಿಪ್ಪೆ, ಹಸಿರೆಲೆ, ತರಗು, ಮುತಾದಗವುಗಳನ್ನು ಶೇಖರಿಸಿ ತೇವಾಂಶವಿರುವಂತೆ ಮಾಡಿ 2-3 ವಾರ ಇಡಬೇಕು.

ಈ ಸಮಯದಲ್ಲಿ 2 – 3 ಬಾರಿ ಮಿಶ್ರಣವನ್ನು ತಿರುವಿ ಹಾಕಬೇಕು. ಅನಂತರ ತೊಟ್ಟಿಗೆ ತುಂಬಿ ಎರೆಹುಳುಗಳನ್ನು ಬಿಡಬೇಕು.  ಎರೆಹುಳುಗಳು ಕಸವನ್ನು ತಿನ್ನುತ್ತಾ ಮೇಲ್ಪದರದಿಂದ ಒಳಹೋಗುತೊಡಗುತ್ತವೆ. ಹಾಗೆ ಹೋಗುವಾಗ ಅವುಗಳ ಹಿಕ್ಕೆಯ ಮೇಲ್ಪದರದಲ್ಲಿಶೇಖರಣವಾಗುತ್ತದೆ.

Leave a Comment