ಕೊನೆಗೂ ಪಿಎಂ ಕಿಸಾನ್ ಯೋಜನೆಯ ಎಂಟನೇ ಕಂತಿನ ಹಣ ರೈತರ ಖಾತೆಗೆ (pm kisan fund released) ಜಮೆಯಾಯಿತು. ಏಪ್ರೀಲ್ ತಿಂಗಳ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರ ರೈತರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ವಾರಗಳ ನಂತರ ಫಲಾನುಭವಿಗಳ  ಖಾತೆಗೆ ಹಣ ಜಮೆಯಾಗಿದೆ.

ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗೆ  7ನೇ ಕಂತಿನ ಹಣ ಕಳೆದ ವರ್ಷ ಡಿಸೆಂಬರ್ 25 ರಂದು ಜಮೆ ಮಾಡಲಾಗಿತ್ತು. ಈಗ 8ನೇ ಕಂತಿನ ಶುಕ್ರವಾರ 9.5 ಕೋಟಿಗಿಂತ ಹೆಚ್ಚಿನ ರೈತರ ಖಾತೆಗೆ  ಬಸವ ಜಯಂತಿ, ರಂಜಾನ್ ಹಾಗೂ ಅಕ್ಷಯ ತೃತೀಯ ದಿನದಂದು ಜಮೆ ಮಾಡಿದ್ದಾರೆ. ನಿಮ್ಮ ಖಾತೆಗೆ  ಪಿಎಂ ಕಿಸಾನ್ ಯೋಜನೆಯ (PM kisan scheme)  8ನೇ ಕಂತಿನಹಣ ಜಮೆಯಾಗಿರುವ  ಸ್ಟೇಟಸ್ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು.

ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ. ಸ್ಟೇಟಸ್ ನೋಡಲು ಈ ಮುಂದಿನ ಲಿಂಕ್  https://pmkisan.gov.in/beneficiarystatus.aspx  ಮೇಲೆ ಕ್ಲಿಕ್ ಮಾಡಿದರೆ ಸಾಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿ ಮೊಬೈಲ್ ನಂಬರ್ ನಮೂದಿಸಿ ಗೋ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಸ್ಟೇಟಸ್ ನೋಡಬಹುದು.

ನಿಮ್ಮ ಖಾತೆಗೆ ಹಣ ಜಮೆಯಾಗಿದ್ದಲ್ಲವೆಂದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು. ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: [email protected] ಗೆ ಮೇಲ್ ಮಾಡಬಹುದು.

Leave a Reply

Your email address will not be published. Required fields are marked *