ಅತೀ ಮಳೆ ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ರೈತರಿಗೆ ಶೀಘ್ರ ಪರಿಹಾರ ನೀಡವುದಕ್ಕಾಗಿ ಸರ್ಕಾರವು ಪರಿಹಾರ ಎಂಬ ತಂತ್ರಾಂಶ ಆರಂಭಿಸಿದೆ. ಈ ಇದರಲ್ಲಿ ಬೆಳೆನಷ್ಟವಾದ ರೈತರ ಕುರಿತು ಮಾಹಿತಿ ಅಪ್ಲೋಡ್ ಆದ 24 ಗಂಟೆಯೊಳಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳೆನಷ್ಟವಾದ ಪ್ರದೇಶಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸ್ಥಳದಿಂದಲೇ ವಿವರಗಳನ್ನು ಅಪ್ಲೋಡ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಬೆಳೆನಾಶದ ಸಮೀಕ್ಷೆ ಮಾಡುವುದು, ಅದನ್ನು ಅಪ್ಲೋಡ್ ಮಾಡುವುದು ವಿಳಂಬವಾಗುತ್ತದೆ. ಈ ಬಾರಿ ವಿಳಂಬ ಆಗಬಾರದು. ಕೂಡಲೇ ಸರ್ವೆ ಆರಂಭಿಸಿ, ಆಯಾ ದಿನದ ಸರ್ವೆ ಮಾಹಿತಿ ಅಂದೇ ಪರಿಹಾರ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿದರೆ 24 ಗಂಟೆಯಲ್ಲೇ ಪರಿಹಾರ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಬೆಳೆನಷ್ಟಕ್ಕೊಳಗಾಗಿರುವ ಕೊಲಾರ ಜಿಲ್ಲೆಯ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಏನಿದು ಪರಿಹಾರ ಆ್ಯಪ್? (What is parihara)
ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರಿಗೆ ಪರಿಹಾರ ನೀಡವುದುಕ್ಕಾಗಿ ರಾಜ್ಯ ಸರ್ಕಾರವು ಪರಿಹಾರ ಎಂಬ ತಂತ್ರಾಂಶವನ್ನು ಆರಂಭಿಸಿದೆ. ಇದರಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರ ಬೆಳೆ ಹಾನಿಯಾದ ಕುರಿತು ಮಾಹಿತಿ ಅಪ್ಲೋಡ್ ಮಾಡುತ್ತದೆ. ನಂತರ ಸರ್ಕಾರವು ಯಾವ ಬೆಳೆಗೆ ಎಷ್ಟು, ಎಕರೆಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತದೆ.
ಪರಿಹಾರ ಸ್ಟೇಟಸ್ ನೋಡುವುದು ಹೇಗೆ? (How to check parihara status)
ರೈತರು ಬೆಳೆ ನಷ್ಟವಾದ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು. ರೈತರು ಈ https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ವಿಪತ್ತು (calamity Type) ಕಾಲಂನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.ವರ್ಷದಲ್ಲಿ 2021-22 ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಳೆದ ವರ್ಷದ ಪರಿಹಾರ ಣ ನಿಮ್ಮ ಖಾತೆಗೆ ಜಮೆಯಾಗಿದೆಯೇ ಎಂಬುದನ್ನು ನೋಡಬೇಕಾದರೆ 2020-21 ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನ್ನು ಪಕ್ಕದಲ್ಲಿ ತಿಳಿಸಿದಂತೆ ನಮೂದಿಸಿ ವಿವರಗಳನ್ನು ಪಡೆಯಬಹುದು.
ಇದನ್ನು ಓದಿ: ಪಂಚಮಿತ್ರದಲ್ಲಿ ಅಡಗಿದೆ ಗ್ರಾಮ ಪಂಚಾಯತಿಯ ಸರ್ವ ಮಾಹಿತಿ…. ಮೊಬೈಲ್ ನಲ್ಲಿಯೇ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ