ರಾಜ್ಯದ ಸುಮಾರು 62.85 ಲಕ್ಷ ರೈತರಿಗೆ ಪಹಣಿ, ಸರ್ವೆನಕ್ಷೆ,  ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಯೋಜನೆಯನ್ನು ಜನವರಿ 26 ರಂದು ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ಜನವರಿ 26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕುಮಟ್ಟದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.

ರೈತರು ಪಹಣಿ, ಜಮೀನಿನ ಸರ್ವೆ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ನಾಡಕಚೇರಿ, ತಹಶೀಲ್ ಕಚೇರಿಳಿಗೆ ಅಲೆಯುತ್ತಿದ್ದರು. ರೈತರ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ರೈತರ ಮನೆಬಾಗಿಲಿದೆ ಉಚಿತವಾಗಿ ಪಹಣಿ, ಜಾತಿ ಮತ್ತು ಆದಾಯಪ್ರಮಾಣಪತ್ರವನ್ನು ನೀಡುವ ಯೋಜನೆಗೆ ಚಾಲನೆ ನೀಡಲಿದೆ. ರಾಜ್ಯ 62.85 ಲಕ್ಷ ರೈತರಿಗೆ ಪಹಣಿ, (ಹಿಸ್ಸಾ ಸ್ಕೆಚ್),  ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಅವರವರ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಯೋಜನೆ ಇದಾಗಿದೆ. ಪಹಣಿ, ಜಾತಿ ಆದಾಯ ಪ್ರಮಾಣ ಪತ್ರಗಳನ್ನು ಪ್ಲಾಸ್ಟಿಕ್ ಲಕೋಟೆಯಲ್ಲಿರಿಸಿ ಪ್ರತಿ ರೈತ ಕುಟುಂಬದ ಮನೆ ಬಾಗಿಲಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶವು ಪಹಣಿ ಮತ್ತು ಸರ್ವೆ ನಕ್ಷೆಯನ್ನು ಹಾಗೂ ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯವು  ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕುಟುಂಬವಾರು ಮುದಿಸಿಲು ಅನುಕೂಲವಾಗುವಂತೆ ಪಿಡಿಎಫ್ ನಮೂನೆಯಲ್ಲಿ ಸಿದ್ದಪಡಿಸಿಕೊಳ್ಳಬೇಕು. ಈ ಪಿಡಿಎಫ್ ದಾಖಲೆಯನ್ನು ಜಿಲ್ಲೆಯಲ್ಲಿ ಮುದ್ರಿಸಲು ಅನುಕೂಲವಾಗುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಜನವರಿ 15 ರೊಳಗೆ ಕಳುಹಿಸಬೇಕೆಂದು ಅವರು ಸೂಚಿಸಿದ್ದಾರೆ.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾಧಿಕಾರಿಗಳು ಪಿಡಿಎಫ್ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಮುದ್ರಿಸಲು ಸಾಮರ್ಥ್ಯವಿರುವ ಮುದ್ರಣಾಲಯವನ್ನು ಜಿಲ್ಲೆಯಲ್ಲಿ ಗುರುತಿಸಬೇಕು. ಮುದ್ರಣವಾದ ದಾಖಲೆಗಳನ್ನು ಇಡಲು ಅಗತ್ಯ ಸಂಖ್ಯೆಯ ಲಕೋಟೆಯನ್ನು ಭೂಮಾಪನ ಇಲಾಖೆಯ ಆಯುಕ್ತರು ಜಿಲ್ಲೆಗಳಿಗೆ ಒದಗಿಸಬೇಕು. ಮುದ್ರಿತವಾದ ದಾಖಲೆಗಳನ್ನು ಜನವರಿ 26 ರಂದೇ ರಾಜ್ಯದ ಎಲ್ಲಾ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ,

ರಾಜ್ಯದ 62 ಲಕ್ಷಕ್ಕೂ ಹೆಚ್ಚಿನ ರೈತರಿಗೆ 1,74,71,807 ಪಹಣಿಗಳು, 4,93,30,889 ಜಾತಿ ಪ್ರಮಾಣ ಪತ್ರ ಹಾಗೂ 2,76,56,058 ಆದಾಯ ಪ್ರಮಾಣ ಪತ್ರಗಳನ್ನು ನೀಡಲಾಗುವುದು.  ಇ-ಆಡಳಿತ ಇಲಾಖೆಯಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕುಟುಂಬವಾರು ಪಡೆದು ಮತ್ತು ಮೋಜಣಿ ತಂತ್ರಾಂಶದಿಂದ ಸರ್ವೆ ನಕ್ಷೆ/ ಅಟ್ಲಾಸ್  ಮುದ್ರಣಗೊಳಿಸಿ ಪಹಣಿ, ಅಟ್ಲಾಸ್/ ಹಿಸ್ಸಾ ಸ್ಕೆಚ್, ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಗ್ರಾಮವಾರು ಲಕೋಟೆಗಳ ಸಾಗಣೆ ಮತ್ತು ವಿತರಣೆ ಪ್ರಕ್ರಿಯೆಯ ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾವಾರು ಅಪರ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ ತಿಳಿಸಿದ್ದಾರೆ.

Leave a Reply

Your email address will not be published. Required fields are marked *