ಶೇ. 75 ರಷ್ಟು ರಿಯಾಯಿತಿ ದರದಲ್ಲಿ ಭತ್ತ ವಿತರಿಸಲು ರೈತರಿಂದ ಅರ್ಜಿ ಆಹ್ವಾನ

Written by By: janajagran

Published on:

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವ್ಯಾಪ್ತಿಯ ರೈತರಿಗೆ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಸಬಾ ಹೋಬಳಿಯ ರೈತರಿಗೆ ಟಿಎಪಿಸಿಎಂಎಸ್,ಕಸಬಾ, ಕೆರೆತೊಣ್ಣೂರು, ಕ್ಯಾತನಹಳ್ಳಿ, ಕೆ. ಬೆಟ್ಟಹಳ್ಳಿ, ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ, ಚಿನಕುರಳಿ ವ್ಯಾಪ್ತಿಯ ರೈತರಿಗೆ ಚಿನಕುರಳಿ, ಹರವು ಹಾಗೂ ಚಿಕ್ಕಯಾರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ  ಸಂಘ ಮತ್ತು ಮೇಲುಕೋಟೆ ಹೋಬಳಿಯ ರೈತರಿಗೆ ಜಕ್ಕನಹಳ್ಳಿ, ಸುಂಕಾತೊಣ್ಣೂರು,  ಲಕ್ಷ್ಮೀಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಿತರಿಸಲಾಗುವುದು.

ಸಾಮಾನ್ಯ ರೈತರಿಗೆ ಶೇ| 50 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 75 ರಷ್ಟು ಸಹಾಯಧನದಲ್ಲಿ ಎಂಟಿಯು-1001, ಐಆರ್-64, ಜೆಜಿಎಲ್-1798, ತನು ಭತ್ತದ ತಳಿಗಳ ರಾಜ್ಯ ಬೀಜ ನಿಗಮದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತ ಬಾಂಧವರು ತಮ್ಮ ಜಮೀನಿನ ಆರ್ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಪ್ರತಿ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ನೀಡಿ ಪಡೆಯಬಹುದು. ರೈತರು ಇದರ ಸದುಪಯೋಗ ಬಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

Leave a comment