monsoon two days delay ಭಾರತದಲ್ಲಿ ಈ ವರ್ಷ ಮುಂಗಾರು ಮಳೆಯು ಎರಡು ದಿನ (monsoon two days delay) ವಿಳಂಬವಾಗಲಿದೆ, ಯಾಸ್ ಮತ್ತು ತೌಕ್ತೆ ಚಂಡಮಾರುತದ ಪ್ರಭಾವದಿಂದ ಮೇ 31ರಂದು ಕರಾವಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಖೆ (IMD) ತಿಳಿಸಿತ್ತು. ದಕ್ಷಿಣ ಪಶ್ಚಿಮ ಮಾರುತಗಳು ಪ್ರಬಲಗೊಂಡಿರುವ ಹಿನ್ನೆಲೆ ಮಾನ್ಸೂನ್ ಪ್ರವೇಶದಲ್ಲಿ ಈಗ ಎರಡು ದಿನ ವಿಳಂಬವಾಗಲಿದೆ ಎಂದು ತಿಳಸಿದೆ. ಹೀಗಾಗಿ ಜೂನ್ 3 ರಂದು ಕೇರಳ ಕರಾವಳಿಗೆ ಮುಂಗಾರು (monsoon may hit kerala by june 3) ಪ್ರವೇಶಿಸಲಿದೆ.
ಇತ್ತೀಚಿನ ಹವಾಮಾನ (weather) ಸೂಚನೆಗಳ ಪ್ರಕಾರ, ನೈಋತ್ಯ ಮಾರುತಗಳು ಜೂನ್ 1ರ ಬಳಿಕ ಕ್ರಮೇಣ ಪ್ರಬಲವಾಗುವ ಸಾಧ್ಯತೆ ಇದೆ. ಇದರಿಂದ ಕೇರಳದಲ್ಲಿ ಕೇರಳ ಚಟುವಟಿಕೆ ವೃದ್ಧಿಸಲಿದೆ. ಕೇರಳದಲ್ಲಿ ಮುಂಗಾರು ಜೂನ್ 3ರಂದು ಪ್ರಬಲವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಕರಾವಳಿ ಕರ್ನಾಟಕದಲ್ಲಿ ಜೂನ್ 1-3ರವರೆಗೆ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೂನ್ 2 ಮತ್ತು 3ರಂದು ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1 ರಿಂದ ನೈಋತ್ಯ ಮಾರುತಗಳು ಕ್ರಮೇಣ ಮತ್ತಷ್ಟು ಪ್ರಬಲಗೊಳ್ಳುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಜೂನ್ 3ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈರುತ್ಯ ಮಾರುತಗಳು ತೀವ್ರಗೊಳ್ಳುತ್ತಿರುವ ಪರಿಣಾಮ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆ ಆಗುವ ಸಂಭವವಿದೆ. ಈ ಬಾರಿ ವಾಡಿಕೆಯಷ್ಟು ಮಳೆಯಾಗಲಿದೆ.
ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ. ಬೇಸಿಗೆಯ ಬೆಳೆಗಳಿಗೆ ಈ ಮಾನ್ಸೂನ್ ಮಳೆಯೇ ನಿರ್ಣಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆ, ಕೃಷಿ, ಉದ್ಯೋಗ, ಕೈಗಾರಿಕೆಗಳು ಹೀಗೆ ಪ್ರತಿಯೊಂದು ರಂಗದ ಮೇಲೂ ಈ ಮಾನ್ಸೂನ್ ಮಳೆಯು ಪರಿಣಾಮ ಬೀರಲಿದೆ.
ಇದನ್ನೂ ಓದಿ: ನಿಮ್ಮ ಗ್ರಾಮದ ಮಳೆ, ಗಾಳಿ, ಹವಾಮಾನ ಮಾಹಿತಿಗೆ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿ
ಕಳೆದ ಎರಡು ವಾರದಿಂದ ತೌಕ್ತೇ ಹಾಗೂ ಯಾಸ್ ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ. ಹಾಗಾಗಿ ಮುಂಗಾರು ಮಳೆಯ ಅನುಭವವಾಗುತ್ತಿದೆ. ಆದರೆ ರಭಸದ ಮಳೆ ಇನ್ನೂಆಗಿಲ್ಲ. ಕೆಲವು ಕಡೆ ಚದುರಿದ ಮಳೆ ಇನ್ನೂ ಕೆಲವು ಕಡೆ ಗುಡುಗು ಮಿಂಚಿನೊಂದಿಗೆ ಆರ್ಭಟದ ಮಳೆಯೂ ಆಗಿದೆ. ಹಾಗಾಗಿ ರಾಜ್ಯದಲ್ಲಿ ಕೆಲವು ಕಡೆ ತಂಪಾದ ಗಾಳಿ ಬೀಸುತ್ತಿದೆ.
ದೇಶದಲ್ಲಿ ಅರ್ಧದಷ್ಟು ಕೃಷಿ ಭೂಮಿಯ ರೈತರು ಜೂನ್-ಸೆಪ್ಟೆಂಬರ್ ಅವಧಿಯ ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಬಾರಿಯ ಮುಂಗಾರು ಮಳೆ ಸಹಜವಾಗಿರುವ ನಿರೀಕ್ಷೆಯಿದೆ ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ತಿಳಿಸಿತ್ತು.
ನೈರುತ್ಯ ಮಾರುತಗಳು ತೀವ್ರಗೊಳ್ಳುತ್ತಿರುವ ಪರಿಣಾಮ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಂಭವವಿದೆ.