ಭಾರತೀಯ ರೈತರ ಜೀವನಾಡಿ ಎಂದು ಕರೆಯಲ್ಪಡುವ ನೈಋರುತ್ಯ ಮಾನ್ಸೂನ್ (ಮುಂಗಾರು ಮಳೆ) ಈವರ್ಷ ತೌಕ್ತೆ, ಯಾಸ್ ಚಂಡಮಾರುತದಪರಿಣಾಮವಾಗಿ ನಾಲ್ಕು ದಿನಗಳ ಮುಂಚಿತವಾಗಿಯೇ ರಾಜ್ಯಕ್ಕೆ ಮುಂಗಾರು (Monsoon) ಪ್ರವೇಶಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು ಪ್ರತಿವರ್ಷ ಕೇರಳದ ಕಡೆಯಿಂದ ನೈಋತ್ಯ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸಿಸುತ್ತಿತ್ತು. ಆದರೆ ಈ ವರ್ಷ ತೌಕ್ತೆ ಮತ್ತು ಯಾಸ್ ಚಂಡಮಾರುತದ ಪರಿಣಾಮವಾಗಿ ನಾಲ್ಕು ದಿನಗಳ ಮೊದಲೇ ರಾಜ್ಯಕ್ಕೆ ಪ್ರವೇಶಿಸಲಿದೆ.
ಸಾಮಾನ್ಯವಾಗಿ ಮುಂಗಾರು ಕಾಲದಲ್ಲಿ ಗುಡುಗು, ಸಿಡಲಿನ ಆರ್ಭಟ ಹೆಚ್ಚು ಇರುವುದಿಲ್ಲ. ಆದರೆ ತೌಕ್ತೆ ಮತ್ತು ಯಾಸ್ ತಂಡಮಾರುತದ ಪರಿಣಾಮವಾಗಿ ಅಬ್ಬರದ ಮಳೆಯಾಗಲಿದೆ.
ರೈತರು ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿರುವುದರಿಂದ ಜೂನ್ ಮೊದಲ ಎರಡು ವಾರಗಳಲ್ಲಿ ದೇಶದ ಅರ್ಧ ಭಾಗದಲ್ಲಿ ಮುಂಗಾರು ಚುರುಕುಗೊಂಡು ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯಲಿದೆ. ಲಾಕ್‌ಡೌನ್‌ನಿಂದ ಬಹುತೇಕ ವಲಸೆ ಕಾರ್ಮಿಕರು ಮಹಾನಗರಗಳಿಂದ ಹಳ್ಳಿಗಳಿಗೆ ವಾಪಸ್ ಹೋಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಭಾರತವು ನಾಲ್ಕು ತಿಂಗಳ ಮಳೆಗಾಲದಲ್ಲಿ ತನ್ನ ವಾರ್ಷಿಕ ಮಳೆಯ ಸುಮಾರು 70% ಮುಂಗಾರು ಮಳೆಯ ಮೇಲೆ ಆಧಾರವಾಗಿರುತ್ತದೆ. ದೇಶದಲ್ಲಿ ಈಗಲೂ ಸಹ ಶೇ. 50 ರಷ್ಟು ರೈತರು ಮುಂಗಾರು ಮೇಲೆಯೇ ಅವಲಂಬನೆಯಾಗಿರುತ್ತಾರೆ. ಮಳೆಯ ಮೇಲೆಯೇ ಅವಲಂಬಿತ ಕೃಷಿಕರ ಕೃಷಿ ಆರ್ಥಿಕತೆಗೆ ನಿರ್ಣಾಯಕವಾಗಿದೆ.
ಜೂನ್ ೧ ರ ಸುಮಾರಿಗೆ ಕೇರಳಕ್ಕೆ ಅಪ್ಪಳಿಸುವ ಮತ್ತು ಜುಲೈ ಮಧ್ಯಭಾಗದಲ್ಲಿ ದೇಶದ ಉಳಿದ ಭಾಗಗಳನ್ನು ಆವರಿಸುವ ಸಾಮಾನ್ಯ ಮಾನ್ಸೂನ್ ಕೃಷಿ ವಲಯಕ್ಕೆ, ವಿಶೇಷವಾಗಿ ಈ ವರ್ಷ ಅನಿವಾರ್ಯವಾಗಿದೆ. ಕೊರೋನಾದಿಂದ ಸಂಕಷ್ಟದಲ್ಲಿರುವ ರೈತರಿಗೆ ಮುಂಗಾರು ಮಳೆಯೇ ಜೀವನಾಧಾರವಾಗಿದೆ.