Monsoon weather rain ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

Written by Ramlinganna

Published on:

Monsoon weather rain ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್1 ಶ ಶನಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು.ಇದಾದ ಕೇವಲ ಐದು ದಿನದಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಈ ಮೂಲಕ ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ವ್ಯಾಪಿಸಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ?

ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ ಹಾಗೂ ತುಮಕೂರು  ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ  74 ಕೋಟಿ ಬರ ಪರಿಹಾರ ಜಮೆ: ನಿಮಗೆಷ್ಟು ಜಮೆ ಇಲ್ಲೇ ಚೆಕ್ ಮಾಡಿ

ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಮಳೆ ಪ್ರಮಾಣ ಕಡಮೆಯಾಗಿದ್ದು, ಜೂನ್ 9 ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಮುಂದಿನ ಎರಡ್ಮೂರು ದಿನ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆಯಿದೆ ಇದೆ. ಉಳಿದಂತೆ ರಾಜ್ಯದಲ್ಲಿ ಜೂನ್ 13 ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Monsoon weather rain ಇಂದಿನಿಂದ ಐದು ದಿನ ಬೆಂಗಳೂರಿನಲ್ಲಿ ಮಳೆ

ಬೆಂಗಳೂರು ನಗರದಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ.ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿ.ಸೆ ಹಾಗೂ 23 ಡಿ.ಸೆ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ?  ಇಲ್ಲಿ ಕರೆ ಮಾಡಿ ತಿಳಿದುಕೊಳ್ಳಿ

ನಿಮ್ಮೂರಿನಲ್ಲಿ ಹಾಗೂ ನಿಮ್ಮರಿನ ಸುತ್ತಮುತ್ತಲಿರುವ ಊರುಗಳಲ್ಲಿಮಳೆ ಯಾವಾಗ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲು ವರುಣಮಿತ್ರ ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹೌದು, 9243345433 ಗೆ ಕರೆ ಮಾಡಿದರೆ ಸಾಕು, ನಿಮಗೆ ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಇನ್ನೂ ಮುಂದೆ ಸಿಡಿಲು ಬೀಳುವ ಮೊದಲೇ ಮೊಬೈಲಿಗೆ ಮುನ್ಸೂಚನೆ ನೀಡಲಿದೆ sidilu app

ಸಿಡಿಲು ಆ್ಯಪ್ ಬಳಕೆದಾರ ಇರುವ ಜಾಗದಿಂದ ಎಷ್ಚು ಕಿಲೋ ಮೀಟರ್ ಅಥವಾ ಮೀಟರ್ ದೂರದಲ್ಲಿ ಸಿಡಿಲು, ಗುಡುಗು ಕಂಡು ಬರುತ್ತಿದೆ ಹಾಗೂ ಮಳೆಯ ಮಾಹಿತಿ ನೀಡುತ್ತದೆ ಈ ಸಿಡಿಲು ಆ್ಯಪ್.

ಸಿಡಿಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? (How to install Sidilu App)

ಸಿಡಿಲು ಎಂಬ ಆ್ಯಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಲು ಈ

https://play.google.com/store/apps/details?id=com.moserptech.sidilu&hl=en&gl=US&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು  ಅಲ್ಲಿ ಕಾಣುವ install ಮೇಲೆ ಕ್ಲಿಕ್ ಮಾಡಬೇಕು.ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. Allow Sidilu to access this devices location  ಕೆಳಕಡೆ While using the App ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಇದ್ದ ಸ್ಥಳದ ಸುತ್ತಮುತ್ತ ಎಲ್ಲಲ್ಲಿ ಸಿಡಿಲು ಬಡಿಯುವ ಸಾಧ್ಯತೆಯಿದೆ ಎಂಬು ಕಾಣಿಸುತ್ತದೆ.

ಒಂದು ವೇಳೆ ನಿಮ್ಮ ಸುತ್ತಮುತ್ತ ಸಿಡಿಲು ಬಡಿಯುವ ಸಾಧ್ಯತೆಯಿಲ್ಲದಿದ್ದಲ್ಲಿ No lightning activity in your area  ಎಂಬ ಮೆಸೇಜ್ ಗೋಚರಿಸುತ್ತದೆ. ನೀವು ಇದ್ದ ಸ್ಥಳ ತೋರಿಸಲಾಗಿರುತ್ತದೆ. ನಿಮ್ಮ ಸುತ್ತಮುತ್ತ 1 ಕಿ.ಮೀ ದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಸಿಡುಲು ಬೀಳುವ ಸಾಧ್ಯತೆಯಿದ್ದರೆ ಅಲ್ಲಿ ನಿಮಗೆ ಮೆಸೇಜ್ ಗೋಚರಿಸುತ್ತದೆ

Leave a Comment