ಮಿನಿ ಟ್ರ್ಯಾಕ್ಟರ್, ಕೃಷಿ ಯಾಂತ್ರೀಕರಣ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ

Written by Ramlinganna

Published on:

Mini Tractor purchase subsidy :  2024-25ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ  ವರ್ಗದ ರೈತರಿಗೆ ಶೇ. 50 ರಷ್ಟು ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳು ಸಿಗಲಿದೆ

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಹೌದು, 2024-25ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದವರಿಗೆ ಶೇ. 50 ರ ರಿಯಾಯಿತಿ ದರದಲ್ಲಿಕೃಷಿ ಯಂತ್ರೋಪಕರಣಗಳು ಲಭ್ಯವಿರುತ್ತದೆ ಎಂದು ಸೋಮವಾರಪೇಟೆ ತಾಲೂಕು  ಸಹಾಯಕ ಕೃಷಿ ನಿರ್ದೇಶಕ ಕೆ.ಪಿ. ವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಿನಿ ಟ್ರ್ಯಾಕ್ಟರ್,  ಪವರ್ ಟಿಲ್ಲರ್, ಕಲ್ಟಿವೇಟರ್, ರೋಟಾವೆಟರ್, ಎಂ.ಬಿ. ಪ್ಲೋ, ಡಿಸ್ಕ್ ಫ್ಲೋ, ಕಳೆ ತೆಗೆಯುವ ಯಂತ್ರ, ಭತ್ತ ಕಟಾವು ಮಾಡುವ ಯಂತ್ರ, ಮೇವು ಕತ್ತಿರಿಸುವ ಯಂತ್ರ, ರಾಗಿ ಕ್ಲಿನಿಂಗ್ ಮಾಡುವ ಯಂತ್ರ, ಹಿಟ್ಟು ಮಾಡುವ ಯಂತ್ರ, ಮೆಣಸಿನ ಕಾಯಿ ಪುಡಿ ಮಾಡುವ ಯಂತ್ರಗಳಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು.

ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ರೈತರು ಸಬ್ಸಿಡಿಯಲ್ಲಿ ಈ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.

ಆಸಕ್ತರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯೊಂದಿಗೆ ಜಮೀನಿನ ಪಹಣಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಒಂದು ಭಾವ ಚಿತ್ರ ಹಾಗೂ 100 ರೂಪಾಯಿಗಳ ಛಾಪಾ ಕಾಗದದ ದಾಖಲಾತಿಗಳನ್ನು ಸಲ್ಲಿಸಿ ಇಲಾಖೆಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಸದುಪಯೋಗ  ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Mini Tractor purchase subsidy ಕೃಷಿ ಯಂತ್ರಧಾರೆ ಲೋಕಾರ್ಪಣೆ

ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯತ ರಾಜ್ ಮತ್ತು ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರವಿವಾರ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮೆಗಾ ಮ್ಯಾಕ್ರೋ ಅನುದಾನದಲ್ಲಿ ಜಿಲ್ಲೆಯಾದ್ಯಂತ 9 ಕೃಷಿ ಯಂತ್ರಧಾರೆ ಯಂತ್ರೋಪರಣ ಕೇಂದ್ರಗಳು ಹಾಗೂ 4 ಕೃಷಿ ಡ್ರೋಣ ಸಿಂಪರಣಾ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿದರು.

ನವೀನ ತಂತ್ರಜ್ಞಾನ ಬಳಸಿ ಕಲಬುರಗಿ ಜಿಲ್ಲೆಯ ರೈತರ ಸಾಗುವಳಿ ವೆಚ್ಚ ಕಡಿಮೆ ಮಾಡುವುದಲ್ಲದೆ ರೈತರ ಅದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಒಟ್ಟಾರೆ 445 ಲಕ್ಷ ರೂ. ವೆಚ್ಚದಲ್ಲಿ ಹಸರಗುಂಡಗಿ, ಸರಸಂಬಾ, ಅರಣಕಲ್,  ತಾಜ ಸುಲ್ತಾನಪೂರ,  ಕೆಲ್ಲೂರ, ಮಹಾಗಾಂವ, ನಾಲವಾರ, ಚಿತ್ತಾಪೂರ ಟೌನ್ ಹಾಗೂ ಮೋತಕಪಲ್ಲಿ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳು ತೆರೆಯಲಾಗಿದ್ದು, ಇಲ್ಲಿ ರೈತರಿಗೆ ಬಾಡಿಗೆ ಆಧಾರದ ಮೇಲೆ ಕಡಿಮೆ ಬೆಲೆಯಲ್ಲಿ 143 ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ ಸರ್ವೆ ನಂಬರ್ ಹಾಕಿ ಜಮೀನಿನ ಮುಟೇಶನ್ ಚೆಕ್ ಮಾಡಿ

ಅದೇ ರೀತಿಯಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಯ ರೇವೂರ.ಬಿ, ಉಡಗಿ, ನಾಲವಾರ ಹಾಗೂ ಕಮಲಾಪೂರ ಹೋಬಳಿ ಮಟ್ಟದಲ್ಲಿ ಒಟ್ಟಾರೆ 197 ಲಕ್ಷ ರೂ. ವೆಚ್ಚದಲ್ಲಿ 4 ಕೃಷಿ ಡ್ರೋಣ ಸಿಂಪರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಗೆ 16 ಡ್ರೋಣ ಸಿಂಪರಣಾಯAತ್ರ, 15 ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ ಹಾಗೂ 3 ಜನರೇಟರಗಳು ಸೇರಿ ಒಟ್ಟಾರೆ 34 ಸಿಂಪರಣಾ ಯಂತ್ರಗಳು ಪೂರೈಸಲಾಗಿದೆ. ಕೀಟನಾಶಕ, ರಸಗೊಬ್ಬರ ಹಾಗೂ ಕಳೆನಾಶಕಗಳ ಸಿಂಪರಣೆಗೆ ಇದು ರೈತರಿಗೆ ನೆರವಾಗಲಿದೆ.

245.92 ಕೋಟಿ ರೂ. ವೆಚ್ಚದ ಹಾರ್ವೇಸ್ಟರ್ ಯಂತ್ರ ವಿತರಣೆ: ಇದಲ್ಲದೆ ಕೃಷಿ ಇಲಾಖೆಯಿಂದ 2024-25ನೇ ಸಾಲಿನ ಹೈಟೆಕ್ ಹಾರ್ವೇಸ್ಟರ್ ಹಬ್ ಯೋಜನೆಯಡಿ ಒಟ್ಟು 5 ಜನ ಫಲಾನುಭವಿಗಳಿಗೆ ಶುಗರ್ ಕೇನ್ ಹಾರ್ವೇಸ್ಟರ್ ಮತ್ತು ಇಬ್ಬರಿಗೆ ಕಂಬೈAಡ್ ಹಾರ್ವೇಸ್ಟರ್ ಯಂತ್ರಗಳು ಸೇರಿ ಒಟ್ಟಾರೆ 7 ಜನ ಫಲಾನುಭವಿಗಳಿಗೆ 245.92 ಕೋಟಿ ರೂ. ಸಹಾಯಧನದ ಹಾರ್ವೇಸ್ಟರ್ ಯಂತ್ರಗಳನ್ನು ವಿತರಿಸಲಾಯಿತು.

ಇನ್ನು ಮೀನುಗಾರಿಕೆ ಇಲಾಖೆಯಿಂದ ಫಲಾನುಭವಿಗಳಿಗೆ ಇ-ರಿಕ್ಷಾ ಮತ್ತು ಮತ್ಸö್ಯ ಆಶ್ರಯ ಯೋಜನೆಯಡಿ ಕಾರ್ಯಾದೇಶ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ ಗ್ರಾಮೀಣ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು.

Leave a Comment