Mini job fair : ಮಾರ್ಚ್ 6 ರಂದು ಮಿನಿ ಉದ್ಯೋಗ ಮೇಳ

Written by Ramlinganna

Published on:

Mini job fair : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಮಾರ್ಚ್ 6 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ  ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಟ್ಯಾಲಿ ಸಲ್ಯುಶನ್ದಲ್ಲಿ ಬಿಜಿನೆಸ್ ಕನ್ಸಲೆಂಟ್ಸ್ ಹಾಗೂ ಟೆಲಿಕಾಲರ್ಸ್ ಹುದ್ದೆಗಳಿಗೆ ಪಿಯುಸಿ, ಬಿಬಿಎ, ಬಿಕಾಂ, ಬಿಬಿಎಮ್ , ಎಮ್.ಬಿ.ಎ, ಎಂಕಾಂ, ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು. ಪ್ಲಿಪ್ ಕಾರ್ಟ್ ದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಐಟಿಐ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ಡೆರಿಂಗ್ ಐ ಸೆಕ್ಯೂರಿಟಿ ಆ್ಯಂಟ್ ಹೆಚ್.ಆರ್. ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ದಲ್ಲಿ ಸೆಕ್ಯೂರಿಟಿಗಾರ್ಡ್ ಹಾಗೂ ಹೌಸ್ ಕೀಪಿಂಗ್  ಹುದ್ದೆಗೆ 7 ನೇ ತರಗತಿಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು. ಮುತ್ತೂಟ್ ಫೈನಾನ್ಸ್ ದಲ್ಲಿ ಇನಟರ್ನ್ ಎಕ್ಸಿಕ್ಯೂಟಿವ್ ಹುದ್ದೆಗೆ ಯಾವುದೇ ಪದವಿ ಹಾಗೂ ಪ್ರೋಬೆಶನರಿ ಆಫೀಸರ್ ಹುದ್ದೆಗೆ ಎಮ್.ಬಿ.ಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ30 ವಯೋಮಾನದೊಳಗಿರಬೇಕು.

ಇದನ್ನೂ ಓದಿನಿಮ್ಮ ಜಮೀನಿನ ಹಳೆಯ ಪಹಣಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಕಿಯಾ ಮೋಟಾರ್ಸ್ ದಲ್ಲಿ ಕಸ್ಟಮರ್ಕೇರ್ ಎಕ್ಸಿಕ್ಯೂಟಿವ್ / ಮ್ಯಾನೇಜರ್, ಸೇಲ್ಸ್  ಮ್ಯಾನೇಜರ್ , ಸೇಲ್ಸ್ ಕನ್ಸಲೆಂಟ್, ಜನರಲ್ ಮ್ಯಾನೇಜರ್ ಸರ್ವಿಸ್ ಹುದ್ದೆಗೆ ಯಾವುದೇ ಪದವಿ ಹಾಗೂ ಪ್ರೊಬೆಶನರಿ ಆಫೀಸರ್ ಹುದ್ದೆಗೆ ಎಮ್.ಬಿ.ಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು.

ಕಿಯಾ ಮೋಟಾರ್ಸ್ ದಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, ಸೇಲ್ಸ್ ಕನ್ಸಲೆಂಟ್, ಜನರಲ್ ಮ್ಯಾನೇಜರ್ ಸರ್ವೀಸ್ ಹುದ್ದೆಗಳಿಗೆ ಪಿಯುಸಿ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.ಹೆಚ್.ಆರ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಮ್.ಬಿಎ, ಫೈನಾನ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಬಿಕಾಂ, ಎಮ್.ಕಾಂ, ಸರ್ವೀಸ್ ಮ್ಯಾನೇಜರ್ ಸರ್ವೀಸ್ ಅಡ್ವೈಸರ್ ಹುದ್ದೆಗೆ ಬಿಇ, ಬಿಟೆಕ್, ಐಟಿಐ, ಡಿಪ್ಲೋಮಾ (ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನಿಶಿಯನ್ ಹುದ್ದೆಗೆ ಐಟಿಐ (ಯಾವುದೇ ಟ್ರೇಡ್)ವಿದ್ಯಾರ್ಹತೆ ಹೊಂದಿರಬೇಕು.  ವಯೋಮಿತಿ18 ರಿಂದ 30 ವಯೋಮಾನದೊಳಗಿರಬೇಕು.

ಇದನ್ನೂ ಓದಿ : ಪಿಎಂ ಕಿಸಾನ್ ಜಮೆ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ವಿದ್ಯಾರ್ಹತೆ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳುಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯು: ವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನುಹಾಗೂ 08472 274846 ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

Mini job fair ಕಲಬುರಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿಯಿರುವ ನಿರುದ್ಯೋಗಿಗಳು ತಮ್ಮ ಎಲ್ಲಾದಾಖಲೆಗಳನ್ನು ಸರಿಯಾಗಿ ಜೋಡಿಸಿಕೊಳ್ಳಭೇಕು. ಮಿನಿ ಉದ್ಯೋಗ ಮೇಳಕ್ಕೆ ಬರುವಾಗ ತಮ್ಮ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ನಂತರ ಅವರು ಕೇಳುವ ಪ್ರಶ್ನೆಗಳಿಗೆ ಅಂಜದೆ ಅಳುಕದೆ ಉತ್ತರ ನೀಡಬೇಕು. ನಿಮ್ಮ ಸರಿಯಾದ ಉತ್ತರಗಳಿಂದಲೇ ನೀವು ಆಯ್ಕೆಯಾಗುತ್ತೀರಿ. ಹಾಗಾಗಿ ಯಾವ ಹುದ್ದೆಗೆ ನೀವು ಅರ್ಜಿ ಸಲ್ಲಿಸಲಿಚ್ಚಿಸುತ್ತೀರೋ ಆ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಕಂಪನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಹ ಕೇಳಬಹುದು. ಹಾಗಾಗಿ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಿಚ್ಚಿಸುತ್ತಿದ್ದಾರೋ ಆ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಮಹತ್ವದ್ದಾಗಿದೆ.

Leave a Comment