land khata ಜಮೀನಿನ ಖಾತೆ ಎಂದರೇನು? ಇಲ್ಲಿದೆ ಮಾಹಿತಿ

Written by By: janajagran

Updated on:

land khata ಸಾಮಾನ್ಯವಾಗಿ ರೈತರಿಗೆ ಜಮೀನಿನ ಸರ್ವೆನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಗೊತ್ತಿರುವುದಿಲ್ಲ. ಮೊಬೈಲ್ ನಲ್ಲಿಯೇ ಖಾತಾ ಸಂಖ್ಯೆಯನ್ನು ಸರ್ವೆ ನಂಬರ್ ಸಹಾಯದಿಂದ ನೋಡಬಹುದು. ಹೌದು,  ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ಪ್ರತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ. ಖಾತೆಯ ನಂಬರ್ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.

ಹಿಂದೆ ಹಿರಿಯರು ಆಡುಬಾಷೆಯಲ್ಲಿ ಯಾವುದೇ ಜಮೀನು ಖರೀದಿ ಮಾಡಿದರೆ ಜಮೀನು ಪಟ್ಟಾ ಆಗಿದೆಯೇ ಎಂದು ಕೇಳುತ್ತಿದ್ದರು. ಅಂದರೆ ಜಮೀನಿಗೆ ಖಾತೆ ಸಂಖ್ಯೆ ಬಂದಿದೆಯೇ ಎಂದು ಕೇಳುತ್ತಿದ್ದರು. ಜಮೀನಿಗೆ ಖಾತೆ ಸಂಖ್ಯೆಯಿಂದ ತೆರಿಗೆ ಕಟ್ಟಲು ಸಹಾಯವಾಗುತ್ತದೆ.

land khata ಏನಿದು ಖಾತಾ ಅಥವಾ ಪಟ್ಟಾ?

ಯಾವುದೇ ಜಮೀನು ಖರೀದಿ ಮಾಡಿದ ನಂತರ ಖಾತಾ ಸಂಖ್ಯೆ ಅತೀ ಮುಖ್ಯವಾಗಿರುತ್ತದೆ. ಜಮೀನು ಖರೀದಿಗೆ ಸೇಲ್ ಡೀಡ್ ಮಾಡಿದ ಮಾತ್ರಕ್ಕೆ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆಯಾಗುವುದಿಲ್ಲ. ತೆರಿಗೆಯಲ್ಲಿ ನಿಮ್ಮ ಹೆಸರು ಬರಲು ಖಾತಾ ಸಂಖ್ಯೆ ಅತೀ ಅವಶ್ಯಕೆ. ಜಮೀನು ಖರೀದಿ ಮಾಡಿದ ಮೇಲೆ ನಿಮ್ಮ ಹೆಸರಿಗೆ ಮುಟೇಷನ್ ಮಾಡಿದ ನಂತರ ಖಾತಾ ಬರುತ್ತದೆ. ಈ ಖಾತಾ ಸಂಖ್ಯೆಯಿಂದಲೇ ನೀವು ನಿಮ್ಮ ಹೆಸರಿನ ಮೇಲೆ ಜಮೀನಿನ ತೆರಿಗೆ ಪಾವತಿಸಬೇಕಾಗುತ್ತದೆ.

ಪಹಣಿಯಂತೆ ಖಾತೆಯಲ್ಲಿಯೂ ಸಹ ಸರ್ವೆ ನಂಬರ್, ರೈತರ ಹೆಸರು, ಜಮೀನಿನ ವಿಸ್ತೀರ್ಣ, ಆಕಾರ, ಕರ ಅಂದರೆ ಟ್ಯಾಕ್ಸ್ ಎಷ್ಟು ಕಟ್ಟಬೇಕೆಂಬ ಸಂಪೂರ್ಣ ಮಾಹಿತಿ ಇರುತ್ತದೆ. ನಿಮ್ಮ ಜಮೀನಿನ ಖಾತೆ ಅಥವಾ ಪಟ್ಟಾ ಪುಸ್ತಕದ ಪ್ರತಿ ನೋಡಲು ಈ  https://landrecords.karnataka.gov.in/service2/RTC.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆದ ಒಂದು ಪೇಜ್ ಓಪನ್ ಆಗುತ್ತದೆ. ಮೇಲ್ಗಡೆ Khata Extract ಮೇಲೆ ಕ್ಲಿಕ್ ಮಾಡಬೇಕು.  ನಿಮಗೆ ಖಾತಾ ನಂಬರ್ ಗೊತ್ತಿದ್ದರೆ search by kahta number ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಖಾತಾ ನಂಬರ್ ನಮೂದಿಸಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತಾ ಪ್ರತಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಹೆಸರು, ಸರ್ವೆ ನಂಬರ್, ಹಿಸ್ಸಾನ ನಂಬರ್, ಜಮೀನಿನ ವಿಸ್ತೀರ್ಣ, ಆಕಾರ, ಟ್ಯಾಕ್ಸ್ ಮಾಹಿತಿ ಕಾಣುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಒಂದು ವೇಳೆ ನಿಮಗೆ ಖಾತಾ ಸಂಖ್ಯೆ ಗೊತ್ತಿಲ್ಲದಿದ್ದರೆ search by survey number ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ select sumoc ನಲ್ಲಿ * ಸೆಲೆಕ್ಟ್ ಮಾಡಿದ ನಂತರ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು.

ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದಾಗ ರೈತರ ಜಮೀನಿನ ಸರ್ವೆ ನಂಬರ್, ರೈತರ ಹೆಸರು, ವಿಸ್ತೀರ್ಣ ಹಾಗೂ ಖಾತೆ ನಂಬರ್ ಕಾಣಿಸುತ್ತದೆ. ಈ ಖಾತೆ ನಂಬರ್ ನೀವು ನೆನಪಿಟ್ಟುಕೊಳ್ಳಬೇಕು. ಅಥವಾ ಬರೆದಿಟ್ಟುಕೊಂಡ ನಂತರ ಈ https://landrecords.karnataka.gov.in/service64/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಖಾತಾ ನಂಬರ್ ನಮೂದಿಸಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಖಾತಾ ಪ್ರತಿ ಓಪನ್ ಆಗುತ್ತದೆ. ಅಲ್ಲಿ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು.  ಇಲ್ಲಿ ಸರ್ವೆ ನಂಬರ್, ರೈತರ ಹೆಸರು, ಒಟ್ಟು ಜಮೀನಿನ ವಿಸ್ತೀರ್ಣ, ಆಕಾರ, ಒಟ್ಟು ಕರ ಎಂಬ ಮಾಹಿತಿ ಕಾಣುತ್ತದೆ. 15 ರೂಪಾಯಿ ಪಾವತಿಸಿ ಪ್ರಿಂಟ್ ಸಹ ತೆಗೆದಕೊಳ್ಳಬಹುದು.

Leave a Comment