ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ತೀವ್ರಗತಿಯಲ್ಲಿ ಏರುತ್ತಲೇ ಇದೆ. ಕೌರೋನಾ ನಿಯಂತ್ರಣಕ್ಕೆ ಬರದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಸರ್ಕಾರಕ್ಕೆ ಚಿಂತಿಗೀಡುಮಾಡಿದೆ. ರಾಜ್ಯಾದ್ಯಂತ ಅಧಿಕೃತವಾಗಿ (Karnataka Lockdown) ಲಾಕ್ಡೌನ್ ಹೇರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಇಂದು ನಡೆಯುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುವಸಂಪುಟದಲ್ಲಿ ನಿರ್ಧಾರವಾಗಲಿದೆ. ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಬೇಕು ಅಥವಾ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಲಾಕ್ಡೌನ್ ಹೇರಬೇಕೋ ಎಂಬುದು ನಿರ್ಧಾರವಾಗಲಿದೆ.
ನಾಗಲೋಟದಲ್ಲಿ ಸಾಗುತ್ತಿರುವ ಕೊರೊನಾ ಎರಡನೇ ಅಲೆಯ ಸರಪಣಿ ಕಟ್ ಮಾಡಲು ವೀಕೆಂಡ್ ಕರ್ಫ್ಯೂ ಮಾದರಿಯ ಕ್ರಮ ವಾರದ ಎಲ್ಲ ದಿನವೂ ಇರಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಅಭಿಪ್ರಾಯವೂ ಇದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆ ಬಂದ್ ಮಾಡಿಸಬೇಕು. ಕೆಲ ದಿನಗಳ ಕಾಲ ವಾರದ ಎಲ್ಲ ದಿನವೂ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದ್ದರೆ ಜನ ಗುಂಪು ಸೇರಲು ಆಸ್ಪದ ಇರುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಲಿದೆ.
ಕಳೆದ ವರ್ಷ ಲಾಕ್ಡೌನ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿ ಹೋಗಿತ್ತು. ಈ ಮತ್ತೆ ‘ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಮತ್ತೆ ಹದಗೆಡಲಿದೆ. ಕೊರೊನಾ ಮೊದಲ ಅಲೆಯಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಇದರ ಮಧ್ಯೆ ಮತ್ತೊಮ್ಮೆ ಲಾಕ್‌ಡೌನ್ ಜಾರಿಯಾದರೆ ಬಹಳ ಕಷ್ಟ. ಈಗಾಗಲೇ ಕರ್ಫ್ಯೂ ಮೂಲಕ ಅಘೋಷಿತ ಲಾಕ್‌ಡೌನ್ ಜಾರಿಯಲ್ಲಿದೆ,” ಎಂದು ವಾಣಿಜ್ಯ ವಲಯದವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇಂದು ನಡೆಯುವ ಸಭೆಯಲ್ಲಿ ಸಂಪೂರ್ಣ ಲಾಕ್ಡೌನೋ ಅಥವಾ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಲಾಕ್ಡೌನ್ ಹೇರಲಾಗುತ್ತೋ ಎಂಬುದು ಗೊತ್ತಾಗುತ್ತದೆ.