Karnataka first kisan train ಕರ್ನಾಟಕದಿಂದ ಕೋಲಾರ ಪ್ರಾಂತ್ಯದಲ್ಲಿ ಬೆಳೆದಿರುವ 250 ಟನ್ ಮಾವಿನ ಹಣ್ಣು ಹೊತ್ತ ಕರ್ನಾಟಕದ ಮೊದಲ ಕಿಸಾನ್ ರೈಲಿಗೆ (Karnataka first kisan train) ಚಾಲನೆ ನೀಡಲಾಯಿತು. ಕೊಲಾರ ಜಿಲ್ಲೆಯ ದೊಡ್ಡನತ್ತ (ಚಿಂತಾಮಣಿ ಸಮೀಪ) ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಈ ರೈಲಿಗೆ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಕೃಷಿ ಹಾಗೂ ರೈಲ್ವೆ ಇಲಾಖೆ ಜಂಟಿ ಸಹಯೋಗದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಆರಂಭಿಸಿದ ಕಿಸಾನ್ ಸ್ಪೇಷಲ್ ಪಾರ್ಸೆಲ್ ರೈಲು ಆರಂಭಕ್ಕೆ ದೊಡ್ಡನತ್ತ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಕೋಲಾರ, ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಈ ಮಾವನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡಿ ಬೇಡಿಕೆ ಹೆಚ್ಚಿಸಿಕೊಳ್ಳುವುದಲ್ಲದೆ ಮಾರುಕ್ಟಟೆಯನ್ನು ವಿಸ್ತರಿಸಬೇಕೆಂಬು ಬಹುದಿನಗಳ ಬೇಡಿಕೆ ಈಡೇರಿದೆ. ಈಗ ರೈತರು ಬೆಳೆದ ಮಾವನ್ನು ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸರಬರಾಜು ಮಾಡುವ ಮಹತ್ವದ ಯೋಜನೆಗೆ ಚಾಲನೆ ಸಿಕ್ಕಂತಾಗಿದೆ.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ರೈತರು ಬೆಳೆದ ಮಾವು ಹಗೂ ತರಕಾರಿಗಳನ್ನು ಉತ್ತರ ಭಾರತಕ್ಕೆ ಸರಬರಾಜು ಮಾಡಲು ರೈಲು ಸಂಪರ್ಕ ಕಲ್ಪಿಸಬೇಕೆಂದು ಈ ಭಾಗದ ರೈತರು ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ಬೇಡಿಕೆಯಿಟ್ಟಿದ್ದರು. ಈಗ ಕೇಂದ್ರ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿದೆ.
ದೊಡ್ಡನತ್ತ ಗ್ರಾಮದ ರೈಲು ನಿಲ್ದಾಣದಿಂದ ಹೊರಡುವ ಕಿಸಾನ್ ರೈಲು ಕೇವಲ 40 ಗಂಟೆಗಳಲ್ಲಿ ದೆಹಲಿಯ ಆದರ್ಶನಗರಕ್ಕೆ ತಲುಪಲಿದೆ. ಈ ಮುಂಚೆ ರಸ್ತೆ ಮೂಲಕ ತರಕಾರಿ, ಹಣ್ಣುಗಳನ್ನು ದೆಹಲಿಗಗೆ ಸಾಗಿಸಲು 80 ಗಂಟೆಗಳ ಕಾಲ ಸಮಯ ಬೇಕಾಗುತ್ತಿತ್ತು. ಈಗ ಅರ್ಧ ಸಮಯ ಕಡಿತವಾಗಿದೆ. ಜೊತೆಗೆ ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದೆ. ಒಂದು ಕೆಜಿಗೆ 2.80 ಪೈಸೆ ವೆಚ್ಚ ತಗುಲಲಿದೆ. ಇದೇ ರಸ್ತೆ ಮೂಲಕ ಕೆಜಿಗೆ 7 ರಿಂದ 8 ರೂಪಾಯಿ ತಗಲುತ್ತಿತ್ತು.
ಇದನ್ನೂ ಓದಿ ಮುದ್ರಾ ಯೋಜನೆಯಡಿ ಸಿಗಲಿದೆ 10 ಲಕ್ಷ ರೂಪಾಯಿಯವರೆಗೆ ಸಾಲ
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮಾವು ಬೆಳೆಗಾರರಿಗೆ ಶ್ರೀನೀವಾಸಪುರದ ಮಾರುಕಟ್ಟೆ ಒಂದೇ ಆಗಿತ್ತು. ಇದರಿಂದಾಗಿ ರೈತರಿಗೆ ಸಮಸ್ಯೆಯಾಗಿತ್ತು. ಈ ಮಾರುಕಟ್ಟೆಗೆ ರಾಜ್ಯದ ವಿವಿಧೆಡೆಗಳಿಂದ ಮಾವು ಪೂರೈಕೆ ಆಗುತ್ತಿದ್ದು, ಇಲ್ಲಿಂದ ದೇಶದ ವಿವಿಧ ಕಡೆಗಳಿಗೆ ಸಾಗಿಸಲು ಕಷ್ಟವಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಕಿಸಾನ್ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ,
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಎ,ಟು ಮಾವು ಪೂರೈಕೆಗೆ ಬೇಡಿಕೆ ಬರುತ್ತದೆಯೋ ಅದಕ್ಕೆ ಅನುಗುಣವಾಗಿ ರೈಲು ಸಂಚರಿಸಲಿದೆ. ರೈತರ ಉತ್ಪಾದನಗಳು ದೆಹಲಿಯವರೆಗೆ ತಲುಪಲು ಅವರ ಉತ್ಪಾದನೆಗಳಿಗೆ ಉತ್ತಮ ಬೆಲೆ ಸಿಗಲಿದೆ. ರೈತರ ಆದಾಯ ಹೆಚ್ಚಾಗಲಿದೆ. ರೈತರ ಉತ್ಪನ್ಗಗಳು ದೇಶದ ಎಲ್ಲಾ ಭಾಗಗಳಲ್ಲಿ ತಲುಪುುವುದರಿಂದ ಪ್ರಸಿದ್ಧಿ ಹೊಂದುವುದರಲ್ಲದೆ ಉತ್ತಮ ಆದಾಯವೂ ಸಿಗಲಿದೆ.