karnataka-assembly election 2023 ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಹೌದು, ಮೇ ತಿಂಗಳ 10 ರಂದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಮೇ 13 ಕ್ಕೆ ಫಲಿತಾಂಶ ಹೊರಬೀಳಲಿದೆ. 2018 ರಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿತ್ತು, ಯಾವ ಶಾಸಕರು ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇ 10 ರಂದು ನಡೆಯುವ ಚುನಾವಣೆಗೆ ಏಪ್ರೀಲ್ 13 ರಂದು ಚುನಾವಣೆಗೆ ಅಧಿಸೂಚನೆ ಆರಂಭವಾಗಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಏಪ್ರೀಲ್್ 20 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರೀಲ್ 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ರಾಜ್ಯದಲ್ಲಿ 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ : ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ಚುನಾವಣಾ ಆಯೋಗದ ಆ್ಯಪ್ ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಲಭ್ಯವಿರಲಿದೆ. ಅಭ್ಯರ್ಥಿಯ ಅಫಿಡಿವಿಟ್ ಕೂಡ ಆ್ಯಪ್ನಲ್ಲಿ ಲಭ್ಯವಿರಲಿದೆ. ಚುನಾವಣಾ ಅಕ್ರಮದ ಬಗ್ಗೆ ಆ್ಯಪ್ ನಲ್ಲೇ ಮತದಾರರು ದೂರು ಸಲ್ಲಿಸಬಹುದು. ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ.
2018 ರಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿತ್ತು?
ಕಳೆದ ಬಾರಿ ಅಂದರೆ 2018 ರಲ್ಲಿ 222 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ರಾಜರಾಜೇಶ್ವರಿ ಕ್ಷೇತ್ರಕ್ಕೆ ಮೇ 28 ರಂದು ಹಾಗೂ ಜಯನಗರ ಕ್ಷೇತ್ರಕ್ಕೆ ಜೂನ್11 ರಂದು ಚುನಾವಣೆ ನಡೆದಿತ್ತು. 2018 ರಲ್ಲಿ ಬಿಜೆಪಿ ಒಟ್ಟು 104 ಕ್ಷೇತ್ರಗಳ್ಲಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷ 80 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅದೇ ರೀತಿ ಜೆಡಿಎಸ್ ಪಕ್ಷ 37 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಒಂದು ಕ್ಷೇತ್ರದಲ್ಲಿ ಬಿಎಸ್.ಪಿ ಹಾಗೂ ಒಂದು ಕ್ಷೇತ್ರದಲ್ಲಿಕೆಪಿಜಿಪಿ ಮತ್ತೊಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರು.
karnataka-assembly election 2023 ಯಾರು ಎಷ್ಟು ಮತಗಳಿಂದ ಯಾರ ವಿರುದ್ಧ ಜಯಗಳಿಸಿದ್ದರು?
ವಿಧಾನಸಭಾ ಕ್ಷೇತ್ರ | ಆಯ್ಕೆಯಾದವರು | ಪಕ್ಷ | ಮತಗಳು | ಹತ್ತಿರದ ಸ್ಪರ್ಧಿ | ಪಕ್ಷ | ಮತಗಳು |
ನಿಪ್ಪಾಣಿ | ಶಶಿಕಲಾ ಜೊಲ್ಲೆ | ಬಿಜೆಪಿ | 87006 | ಕಾಕಾಸೂ ಪಾಟೀಲ್ | ಕಾಂಗ್ರೆಸ್ | 78500 |
ಚಿಕ್ಕೋಡಿ | ಗಣೇಶ ಹುಕ್ಕೇರಿ | ಕಾಂಗ್ರೆಸ್ | 91467 | ಅಣ್ಣಾಸಾಹೇಬ್ ಜೊಲ್ಲೆ | ಬಿಜೆಪಿ | 80898 |
ಅಥಣಿ | ಮಹೇಶ ಕುಮಟಳ್ಳಿ | ಕಾಂಗ್ರೆಸ್ | 82094 | ಲಕ್ಷ್ಮಣ ಸವದಿ | ಬಿಜೆಪಿ | 79763 |
ಕಾಗವಾಡ | ಶ್ರೀಮಂತ ಪಾಟೀಲ್ | ಕಾಂಗ್ರೆಸ್ | 83060 | ಭರಮಗೌಡ ಕಾಗೆ | ಬಿಜೆಪಿ | 50118 |
ಕುಡಚಿ | ಪಿ. ರಾಜೀವ್ | ಬಿಜೆಪಿ | 67781 | ಅಮಿತ ಘಾಟಗೆ | ಕಾಂಗ್ರೆಸ್ | 52773 |
ರಾಯಬಾಗ | ದುರ್ಯೋಧನ ಐಹೋಳೆ | ಬಿಜೆಪಿ | 67502 | ಪ್ರದೀಪಕುಮಾರ ಮಾಳಗೆ | ಕಾಂಗ್ರೆಸ್ | 50954 |
ಹುಕ್ಕೇರಿ | ಉಮೇಶ ಕತ್ತಿ | ಬಿಜೆಪಿ | 83588 | ಎ.ಬಿ. ಪಾಟೀಲ್ | ಕಾಂಗ್ರೆಸ್ | 68203 |
ಅರಬಾವಿ | ಬಾಲಚಂದ್ರ ಜಾರಕಿಹೊಳಿ | ಬಿಜೆಪಿ | 96144 | ಭೀಮಪ್ಪ ಗಡಾದ | ಕಾಂಗ್ರೆಸ್ | 48816 |
ಗೋಕಾಕ | ರಮೇಶ ಜಾರಕಿಹೊಳಿ | ಕಾಂಗ್ರೆಸ್ | 90249 | ಅಶೋಕ ಪೂಜಾರಿ | ಬಿಜೆಪಿ | 75969 |
ಯಮಕನಮರಡಿ | ಸತೀಶ ಜಾರಕಿಹೊಳಿ | ಕಾಂಗ್ರೆಸ್ | 73512 | ಮಾರುತಿ ಅಸ್ಟಗಿ | ಬಿಜೆಪಿ | 70662 |
ಬೆಳಗಾವಿ ಉತ್ತರ | ಅನಿಲ ಬೆನಕೆ | ಬಿಜೆಪಿ | 79060 | ಫಿರೋಜ್ ಸೇಠ್ | ಕಾಂಗ್ರೆಸ್ | 61793 |
ಬೆಳಗಾವಿ ದಕ್ಷಿಣ | ಅಭಯ ಪಾಟೀಲ್ | ಬಿಜೆಪಿ | 84498 | M.ಲಕ್ಷ್ಮೀನಾರಾಯಣ | ಕಾಂಗ್ರೆಸ್ | 25806 |
ಬೆಳಗಾವಿ ಗ್ರಾಮೀ | ಲಕ್ಷ್ಮೀ ಹೆಬ್ಬಾಳಕರ | ಕಾಂಗ್ರೆಸ್ | 102040 | ಸಂಜಯಪಾಟೀಲ್ | ಬಿಜೆಪಿ | 50316 |
ಖಾನಾಪುರ | ಡಾ. ಅಂಜಲಿನಿಂಬಾಳ್ಕರ | ಕಾಂಗ್ರೆಸ್ | 36649 | ವಿಠ್ಠಲ ಹಲಗೇಕರ | ಬಿಜೆಪಿ | 31516 |
ಕಿತ್ತೂರ | ಎಮ್. ದೊಡ್ಡಗೌಡರ | ಬಿಜೆಪಿ | 73155 | ಡಿ.ಬಿ. ಇನಾಂದಾರ | ಕಾಂಗ್ರೆಸ್ | 40293 |
ಬೈಲಹೊಂಗಲ | ಎಮ್. ಕೌಜಲಗಿ | ಕಾಂಗ್ರೆಸ್ | 47040 | ಜಗದೀಶ ಮೆಟಿಗುಡ್ಡ | ಪಕ್ಷೇತರ | 41918 |
ಸವದತ್ತಿಯಲ್ಲಮ್ಮ | ವಿಶ್ವನಾಥ ಮಾಮನಿ | ಬಿಜೆಪಿ | 62480 | ಆನಂದ ಛೋಪ್ರಾ | ಪಕ್ಷೇತರ | 56189 |
ರಾಮದುರ್ಗ | ಎಮ್. ಯಾದವಾಡ | ಬಿಜೆಪಿ | 68348 | ಅಶೋಕ ಪಟ್ಟಣ | ಕಾಂಗ್ರೆಸ್ | 65474 |
ಮುಧೋಳ | ಗೋವಿಂದ ಕಾರಜೋಳ | ಬಿಜೆಪಿ | 76431 | ಸತೀಶ ಬಂಡಿವಡ್ಡರ | ಕಾಂಗ್ರೆಸ್ | 60949 |
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆೆೆೆೆೆೆ ಯಲ್ಲಿ ವಿಿಿಿಿಿಿಜೇತರಾದ ಅಭ್ಯರ್ಥಿಗಳ ಪಟ್ಟಿ ಓಪನ್ ಆಗುತ್ತದೆ.