ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ಶನಿವಾರದಿಂದ ರೈತರ ಮನೆ ಬಾಗಿಲಿಗೆ ಉಚಿತವಾಗಿ ಪಹಣಿ, ಅಟ್ಲಾಸ್ ಮ್ಯಾಪ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಹೌದು ಈ ಯೋಜನೆಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರೈತರ ಮನೆಗೆ ಈ ದಾಖಲೆಗಳನ್ನು ಕಳುಹಿಸಲಾಗುವುದು.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಾಯಿಸಿದಎಲ್ಲಾರೈತರೊಂದಿಗೆ ಉಳಿದ ರೈತರಿಗೂ ಈ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುವುದು. ರೈತರ ಮನೆಯ ವಿಳಾಸಕ್ಕೆ ಪ್ಲಾಸ್ಟಿಕ್ ಕವರ್ ರಕ್ಷೆಯೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮನೆ ಬಾಗಿಲಿಗೆ ಹೋಗಿ ವಿತರಿಸಲಿದ್ದಾರೆ.
ಪಹಣಿ, ಅಟ್ಲಾಸ್ ಮ್ಯಾಪ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೆಮ್ಮದಿ ಕೇಂದ್ರಗಳಲ್ಲಿ ಪಡೆಯಲು ಸುಮಾರು 100 ರೂಪಾಯಿ ತಗಲುತ್ತದೆ. ಆದರೆ ಸರ್ಕಾರ ಈ ಯೋಜನೆಯಡಿಯಲ್ಲಿ ರೈತರಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ.
ದೇಶದ ಬಹುತೇಕ ರೈತರಿಗೆ ಇನ್ನೂ ಸರಿಯಾಗಿ ಅವರಿಗೆ ತಮ್ಮ ಜಮೀನಿನ ದಾಖಲೆ ಬಗ್ಗೆ ಗೊತ್ತಿರುವುದಿಲ್ಲ. ತಮ್ಮ ದಾಖಲೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಆಸ್ತಿ ಮಾರಾಟ, ವರ್ಗಾವಣೆ ಸಂದರ್ಭದಲ್ಲಿ ಹಲವಾರು ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದ 50 ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಜಾತಿ, ಆದಾಯಪ್ರಮಾಣ ಪತ್ರ, ಪಹಣಿ ದಾಖಲೆಗಳನ್ನ ಉಚಿತವಾಗಿ ತಲಪಿಸುವ ಈ ಕಾರ್ಯಕ್ರಮ ಮಾರ್ಚ್ 12 ರಿಂದ ರಾಜ್ಯಾದ್ಯಂತ ಆಯೋಜಿಸಲಾಗಿದೆ. ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಲ್ಲಿ ದೋಷಗಳಿದ್ದರೆ ಗಳಿದ್ದರೆ ಸರಿಪಡಿಸಲು ಅವಕಾಶವಿದೆ. ಮದ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತ ಮನೆ ಬಾಗಿಲಿಗೆ ತಲುಪಿಸು ವಿನೂತನ ಕಾರ್ಯಕ್ರಮ ಶನಿವಾರದಿಂದ ರಾಜ್ಯಾದ್ಯಂತ ಆರಂಭವಾಗಲಿದೆ.
ಇದನ್ನೂ ಓದಿ : ಮೊಬೈಲ್ ನಲ್ಲೇ ಜಮೀನಿನ ಅಳತೆ ಮಾಡುವುದು ಹೇಗೆ? ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ
ಕಂದಾಯ ದಾಖಲೆಗಳಾದ ಪಹಣಿ, ಅಟ್ಲಾಸ್ ಗಳು ಭೂಮಿ ಮತ್ತುಮೋಜಿನಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಇ-ಕ್ಷಣ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ಸದರಿ ತಂತ್ರಾಂಶಗಳಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕುಟುಂಬವಾರು ಪಡೆದು ಸದರಿ ದಾಖಲೆಗಳನ್ನು ಲಕೋಟಿಯಲ್ಲಿರಿಸಿ ರೈತರ ಮನೆ ಬಾಗಿಲಿಗೆ ವಿತರಿಸಲಾಗುವುದು.
ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ರೈತರ ಮನೆ ಬಾಗಿಲಿದೆ- ಆರ್. ಅಶೋಕ
ಕಂದಾಯ ದಾಖಲೆಗಳಾದ ಆರ್.ಟಿ.ಸಿ, (ಪಹಣಿ), ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯಾದ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ್ 12 ಕ್ಕೆ ಚಾಲನೆ ನೀಡಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗಿರ್ಲಹಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಇದನ್ನೂ ಓದಿ : ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ
ಅದೇ ರೀತಿ ರಾಜ್ಯಾದ್ಯಂತ ಸುಮಾರು 50 ಲಕ್ಷಕ್ಕೂ ಹೆಚ್ಚು ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿದೆ ತಲುಪಿಸಲಾಗುವುದು. ರೈತರ ಜಮೀನಿಗೆ ಸಂಬಂಧಿಸಿದ ಭೂ ದಾಖಲೆಗಳನ್ನು ರೈತನ ಮನೆ ಬಾಗಿಲಿಗೆ ತಲುಪಿಸುವುದು ಒಂದು ಅತ್ಯುತ್ತಮ ಸೇವೆಯಾಗಿದೆ. ಜಮೀನಿನ ಈ ದಾಖಲೆಗಳು ರೈತರಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಆಧಾರದ ಮೇಲೆ ನಾಗರಿಕರು ಶೈಕ್ಷಣಿಕ, ಉದ್ಯೋಗ ಹಾಗೂ ಇತರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲವಾಗುತ್ತದೆ ಎಂದರು.