ರೈತರು ಕೃಷಿ ಸೌಲಭ್ಯ ಪಡೆಯಲು ಕೆ ಕಿಸಾನ್ ತಂತ್ರಾಂಶದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಹೌದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಡಿ ಸೌಲಭ್ಯ ಪಡೆಯಲು ಕೆ ಕಿಸಾನ್ ನಲ್ಲಿ ನೋಂದಣಿ ಕಡ್ಡಾಯವಾಗಿದೆ. ಏನಿದು ಕೆ ಕಿಸಾನ್? ಕ ಕಿಸಾನ್ ನಲ್ಲಿ ನೋಂದಣಿ ಮಾಡುವುದು ಹೇಗೆ? ಯಾವ ಯಾವ ದಾಖಲೆ ಬೇಕು? ಯಾವ ಯಾವ ಸೌಲಭ್ಯಗಳು ಸಿಗುತ್ತವೆ? ಎಂಬಿತ್ಯಾದಿ ಮಾಹಿತಿಗಳ ಸಂಗ್ರಹ ಇಲ್ಲಿದೆ.

ಕೆ ಕಿಸಾನ್ ನಲ್ಲಿ ನೋಂದಣಿ ಏಕೆ ಮಾಡಿಸಬೇಕು? (why should farmer Register in k kisan)

ಕೆ ಕಿಸಾನ್ ನಲ್ಲಿ ನೋಂದಣಿ ಮಾಡಿಸುವುದರಿಂದ ರೈತರು ಮತ್ತೆ ಮತ್ತೆ ದಾಖಲೆ ನೀಡುವುದು ತಪ್ಪುತ್ತದೆ. ಇಲಾಖೆಯಲ್ಲಿನ ಸೌಲಭ್ಯ ವಿತರಣೆಯಲ್ಲಿ ಆಗುವ ತಾರತಮ್ಯ, ಸೌಲಭ್ಯಗಳ ದುರ್ಬಳಕೆ ತಡೆಯಲು ಕೆ ಕಿಸಾನ್ ನೋಂದಣಿ ಸಹಕರಿಸುತ್ತದೆ. ರೈತರ ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಮತ್ತೇ ಮತ್ತೇ ದಾಖಲೆ ನೀಡಬೇಕಿಲ್ಲ.  ಕೇವಲ ರೈತರ ಆಧಾರ್ ಕಾರ್ಡ್ ನೀಡಿದರೆ ಸಾಕು, ರೈತರ ಎಲ್ಲಾ ದಾಖಲೆಗಳು ಕೃಷಿ ಇಲಾಖೆಗೆ ಸಿಗುತ್ತದೆ.

ಕೆ ಕಿಸಾನ್ ಎಂದರೇನು? (what is k kisan)

ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಲ ತಾಣ ಯೋಜನೆ (ಕೆ-ಕಿಸಾನ್) ಯಡಿ ತಂತ್ರಾಂಶ ರೂಪುಗೊಳಿಸಲಾಗಿದೆ. ಇದರಲ್ಲಿ ರೈತ ಕುಟುಂಬದ ಸದಸ್ಯರ ಹೆಸರು, ತಮ್ಮ ಜಮೀನಿನಲ್ಲಿ ಯಾವ ಬೆಳೆಗಳನ್ನು ಬಿತ್ತಲಾಗಿದೆ ಎಂಬ ಬೆಳೆ ಮಾಹಿತಿ ಸೇರಿಸಲಾಗುವುದು.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವ ರೈತರಿಗಷ್ಟೇ ಪಿಎಂ ಕಿಸಾನ್ ಹಣ ಜಮೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ರೈತರ ಸರ್ವೆ ನಂಬರ್, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡಿಟೇಲ್. ರೈತರು ಜಮೀನಿನ ಮಣ್ಣನ ಗುಣಮಟ್ಟ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕಲೆ ಹಾಕಿ ರೈತರ ಉಪಯೋಗಕ್ಕಾಗಿ ಅಪ್ಲೌಡ್ ಮಾಡುವುದನ್ನು ಕೆ ಕಿಸಾನ್ ಎನ್ನುವರು.

ಕೆ ಕಿಸಾನ್ ನಲ್ಲಿ ನೋಂದಣಿ ಮಾಡಿಸಲುಯಾವ ಯಾವ ದಾಖಲೆ ಬೇಕು? (what are document need for k kisan registration)

ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೆ ಕಿಸಾನ್ ತಂತ್ರಾಂಶದಲ್ಲಿ ರೈತರ ಹೆಸರುಗಳನ್ನು ನೋಂದಣಿ ಮಾಡಲಾಗುವುದು. ಹೌದು, ರೈತರು ತಮ್ಮ ಜಮೀನಿನ ಪಹಣಿ (ಆರ್.ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಇತ್ತೀಚಿನ ಫೋಟೋ, ರೈತರ ಬಳಿ ಎರಡುಮೂರು ಸರ್ವೆ ನಂಬರ್ ಗಳಿದ್ದರೆ ಪ್ರತ್ಯೇಕ ಪಹಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದ ದಾಖಲೆಗಳೊಂದಿಗೆ ರೈತ ಸಂಪರ್ಕ್ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಬೇಕು.

ಕೆ ಕಿಸಾನ್ ನಲ್ಲಿ ನೋಂದಣಿ ಮಾಡಿಸುವುದು ಹೇಗೆ? (How to Register in k kisan)

ಕೆ ಕಿಸಾನ್ ನಲ್ಲಿ ನೋಂದಣಿ ಮಾಡಿಸಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಕಾಣಿಸುತ್ತದೆ. ಅಲ್ಲಿ ರೈತರು citizen Registration ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ರೈತರು ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಬೇಕು ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಐ ಅಗ್ರಿ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ.ಓಟಿಪಿ ಹಾಕಿದ ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

2 Replies to “ಕೃಷಿ ಸೌಲಭ್ಯ ಪಡೆಯಲು K-Kisan ನೋಂದಣಿ ಕಡ್ಡಾಯ – ಮೊಬೈಲ್ ನಲ್ಲಿ ಹೀಗೆ ನೋಂದಣಿ ಮಾಡಿಸಿ”

  1. ಇನ್ನು ಕೃಷಿ ಮಾಡುವ ಜನಗಳಿಗೆ ಸಹಾಯ ಆಗಲಿ

Leave a Reply

Your email address will not be published. Required fields are marked *