ರೈತರು ಕೃಷಿ ಸೌಲಭ್ಯ ಪಡೆಯಬೇಕಾದರೆ ಕೆ-ಕಿಸಾನ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ರೈತರಿಗೆ ಸರ್ಕಾರದ ವತಿಯಿಂದ ಸಹಾಯಧನದಲ್ಲಿ ಒದಗಿಸುವ ನಾನಾ ಕೃಷಿ ಪರಿಕರಗಳು, ಯಂತ್ರೋಪಕರಣಗಳು ಮತ್ತು ಇತರೆ ಸೌಲಭ್ಯ ಪಡೆಯುವುದಕ್ಕಾಗಿ ಕೆ-ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ರೈತರಿಗೆ ಪಾರದರ್ಶಕವಾಗಿ ಸೌಲಭ್ಯ ಒದಗಿಸುವುದಕ್ಕಾಗಿ ಕೃಷಿ ಇಲಾಖೆಯು ಕೆ-ಕಿಸಾನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಸಿದೆ.

ರೈತರು ಕೃಷಿ ಸೌಲಭ್ಯ ಪಡೆಯಲು ಪದೇ ಪದೇ ದಾಖಲೆ ನೀಡವುದು, ಹಾಗೂ ಕೃಷಿ ಇಲಾಖೆ ಕಚೇರಿಗೆ ಅಲೆಯಬೇಕಾಗುತ್ತಿತ್ತು. ರೈತರ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಹಾಗೂ ಇಲಾಖೆಯ ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ನಿವಾರಣೆ, ದುರ್ಬಳಕೆ ತಡೆಯುವುದಕ್ಕಾಗಿ ಕೆ-ಕಿಸಾನ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಏನಿದು ಕೆ-ಕಿಸಾನ್?

ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಾಲ ತಾಣ ಯೋಜನೆಯಡಿ ಕೆ-ಕಿಸಾನ್ ತಂತ್ರಾಂಶವನ್ನು ರೂಪಿಸಲಾಗಿದೆ. ರೈತರ ಕುಟುಂಬದ ಸದಸ್ಯರ ಹೆಸರು, ಜಮೀನಿನ ಮಾಹಿತಿ, ಬೆಳೆ ಮಾಹಿತಿ, ಆಧಾರ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಅಪ್ಲೋಡ್ ಮಾಡಲಾಗಿರುತ್ತದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿದ ರೈತರು ಈ ಸೌಲಭ್ಯ ಪಡೆಯಬಹುದು. ಇದರಲ್ಲಿ ರೈತರ ಫ್ರೂಟ್ಸ್ ಐಡಿಯೂ ಸಹ ನಮೂದಾಗಿರುತ್ತದೆ.

ಕೆ-ಕಿಸಾನ್ ನಲ್ಲಿ ನೋಂದಣಿ ಮಾಡಿಸುವುದು ಹೇಗೆ?

ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಜಮೀನಿನ ಆರ್.ಟಿ.ಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ.  ರೈತರು ತಮ್ಮ ಹೆಸರನ್ನು ಒಮ್ಮೆ  ನೋಂದಾಯಿಸಿಕೊಂಡರೆ ಸಾಕು, ಮತ್ತೆ ಮತ್ತೆ ನೋಂದಾಯಿಸುಕೊಳ್ಳುವ ಅಗತ್ಯವಿಲ್ಲ.

ಕೆ-ಕಿಸಾನ್ ನಲ್ಲಿ ನೋಂದಾಯಿಸಿಕೊಂಡರೆ ಏನೇನು ಸಿಗುತ್ತದೆ?

ರೈತರಿಗೆ ಬೇಕಾದ ಬಿತ್ತನೆ ಬೀಜ, ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್ ಸಲ್ಫೇಟ್, ಬೋರಾನ್, ಹಸಿರೆಲೆ ಗೊಬ್ಬರದ ಬೀಜಗಳು, ಕೃಷಿ ಯಂತ್ರೋಪಕರಣಗಳು, ತೋಟಗಾರಿಕೆಗಾಗಿ ಬೇಕಾಗುವ ಸ್ಪ್ರಿಂಕ್ಲರ್ ಸೇರಿದಂತೆ ಇನ್ನಿತರ ಉಪಕರಣಗಳು ಸಹಾಯಧನದಲ್ಲಿ ಪಡೆಯಬಹುದು.

ಮೊಬೈಲ್ ನಲ್ಲಿಯೇ ಕೆ ಕಿಸಾನ್ ನಲ್ಲಿ ನೋಂದಣಿ ಮಾಡಿಸುವುದು ಹೇಗೆ?

ಕೆ-ಕಿಸಾನ್ ನಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಬೇಕಾದರೆ ಈ  https://kkisan.karnataka.gov.in/Home.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೆ-ಕಿಸಾನ್  ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ Farmer Registration /ರೈತರ ನೋಂದಣಿ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರ ಐಡಿ ಕ್ರಿಯೇಟ್ ಮಾಡಲು ಸರ್ಕಾರದ ಫ್ರೂಟ್ಸ್ ತಂತ್ರಾಂಶದ ಪೇಜ್ ಓಪನ್ ಆಗುತ್ತದೆ. ಅಲ್ಲಿ ಸಿಟಿಜನ್ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ Citizen Registration ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಿಕೊಳ್ಳಬೇಕು.ಆಗ ರೈತರ ಹೆಸರಿನ ಮೇಲೆ ಎಫ್ಐಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಂತೆ ಎಫ್ಐಡಿ ಕಾರ್ಡ್ ನಂಬರ್ ಬರುತ್ತದೆ. ಎಫ್ಐಡಿ ನಂಬರ್ ಸಹಾಯದಿಂದ ಕೆ-ಕಿಸಾನ್ ತಂತ್ರಾಂಶ ಓಪನ್ ಮಾಡಿ ನಿಮಗೆ ಬೇಕಾದ ಕೃಷಿ ಉಪಕರಣಗಳಿಗಾಗಿ ಆನ್ಲೈನ್ ನಲ್ಲೇ ಅರ್ಜಿ ಹಾಕಬಹುದು.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *