ಪಿಯುಸಿ, ಡಿಗ್ರಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನಿತ ಯೋನೆಯಾದ ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಯಾದ ಶ್ರೀ ಗೋಪಾಲ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳಿಸಲು ಸರ್ಕಾರದಿಂದ ಮಂಜೂರಾತಿ ನೀಡಲಾಗಿರುತ್ತದೆ.
ಈ ಕೆಳಕಂಡ ವಿವಿಧ ಹುದ್ದೆಗಳನ್ನು ಜಿಲ್ಲಾ ಸಮಿತಿ ಮೂಲಕ ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹುದ್ದೆಗಳ ವಿವರ ಇಂತಿದೆ
ಅಕೌಂಟೆಂಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್ ಹುದ್ದೆಗೆ ಬಿಕಾಂ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ) ಹುದ್ದೆಗೆ ದ್ವಿತೀಯ ಪಿಯುಸಿ ಮತ್ತು ಕಂಪ್ಯೂಟರ್ ತರಬೇತಿ ಹೊಂದಿರಬೇಕು.
ಕಚೇರಿ ಸೇವಕ ಹುದ್ದೆಗೆ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಕೃತಕಾಂಗ ಜೋಡಣೆಂ (ಪಿ.ಆ್ಯಂಡ್ ಒ) ಅಭಿಯಂತರ ಹುದ್ದೆಗೆ ಪಿ.ಆ್ಯಂಡ್ ಒ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾದೊಂದಿಗೆ 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು. ಲೆದರ್ ವರ್ಕ್ ಅಥವಾ ಶೂ ಮೇಕರ್ ಹುದ್ದೆಗೆ ಪ್ರಮಾಣ ಪತ್ರದೊಂದಿಗೆ 2 ವರ್ಷಗಳ ಅನುಭವ ಹೊಂದಿರಬೇಕು.
ಸ್ವೀಚ್ ಥೆರಾಪಿಸ್ಟ್ ಮತ್ತು ಆಡಿಯೋಲಾಡಿಸ್ಟ್ ಹುದ್ದೆಗೆ ಬಿ.ಎಸ್.ಸಿ ಇನ್ ಸ್ವಿಚ್ ಆ್ಯಂಡ್ ಅಡಿಯೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಫಿಸಿಯೋಥಾರೆಪಿಸ್ಟ್ ಆಥವಾ ಅಕ್ಯುಪೇಶನಲ್ ಥೆರಾಪಿಸ್ಟ್ ಹುದ್ದಗೆ ಫಿಸಿಯೋಥೆರಾಪಿಸ್ಟ್ ಅಕ್ಯುಪೇಶನಲ್ ಥೆರಾಪಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಮೊಬಿಲಿಟಿ ಇನ್ಸಟ್ರಕ್ಟರ್ ಹುದ್ದಿಗೆ ಒ ಆ್ಯಂಡ್ ಎಮ್ ಪ್ರಮಾಣಿತ ತರಬೇತಿ ಹೊಂದಿರಬೇಕು. ಇಯರ್ ಮೋಲ್ಡ್ ಟೆಕ್ನಿಶಿಯನ್ ಹುದ್ದೆಗೆಇಯರ್ ಮೋಲ್ಡ್ ಪ್ರಮಾಣಿತರ ತರಬೇತಿ ಹೊಂದಿರಬೇಕು. ಕೀಲು ಮತ್ತು ಮೋಳೆ ತಜ್ಞರು (ಪ್ರತಿ ಭೇಟಿಗೆ 1000 ರೂಪಾಯಿಯಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಇನ್ ಅರ್ಥೋಪೆಡಿಕ್ ವಿದ್ಯಾರ್ಹತೆ ಹೊಂದಿರಬೇಕು
ಇದನ್ನೂ ಓದಿ : ಪಿಎಂ ಕಿಸಾನ್ ಹಣ ಜಮೆಯಾಗಲು ಇಕೆವೈಸಿ ಕಡ್ಡಾಯ- ಇಕೆವೈಸಿ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ
ಅಪ್ತಾಲ್ಮೋಲಾಜಿಸ್ಟ್ (ಪ್ರತಿ ಭೇಟಿಗೆ 1000 ರೂಪಾಯಿಯಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ೋಮಾ ಇನ್ ಅಪ್ತಾಲ್ಮೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಇ.ಇನ್.ಟಿ ಸ್ಪೆಶಾಲಿಸ್ಟ್ ( ಪ್ರತಿ ಭೇಟಿಗೆ 1000 ರೂಪಾಯಿ ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಇನ್ ಇ.ಎನ್..ಟಿ ವಿದ್ಯಾರ್ಹತೆ ಹೊಂದಿರಬೇಕು. ಸೈಕಿಯಾಸ್ಟ್ರಿಕ್ (ಪ್ರತಿ ಭೇಟಿಗೆ 1000 ರೂಪಾಯಿಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಇನ್ ಸೈಕಿಯಾಟ್ರಿಕ್ ಮೆಡಿಸಿನ್ ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತಿಯುಳ್ಳ ಅರ್ಹ ಅರ್ಜಿದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳ್ನು ಲಗತ್ತಿಸಿ ಜೂನ್ 15 ರ ಸಂಜೆ 5.30 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ 08472 235222 , 254575 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಜೂನ್ 2 ರಂದು ನೇರ ಸಂದರ್ಶನ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂನ್ 2 ರಂದು ಬೆಳಗ್ಗೆ 10.30 ಗಂಟೆಗೆ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ನಗರದ ಎಮ್.ಎಸ್.ಕೆ ಮಿಲ್ ರಸ್ತೆಯಲ್ಲಿರುವ ಜಿಲ್ಲಾಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕದಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಹುದ್ದಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 21 ರಿಂದ 25 ವರ್ಷದೊಳಗಿರಬೇಕು. ಆಸಕ್ತರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08472 274846 ಹಾಗೂ ಮೊಬೈಲ್ ಸಂಖ್ಯೆ 9620096270 ಗೆ ಸಂಪರ್ಕಿಸಲು ಕೋರಲಾಗಿದೆ.