ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪಾಸಾದ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ, ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅರ್ಜಿ ಕರೆಯಲಾಗಿದೆ.
ಹೌದು, ಕಲಬುರಗಿ ಜಿಲ್ಲೆಯ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಭಾಗವಹಿಸಲಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಪ್ಲಿಪ್ ಕಾರ್ಟ್ ದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ 30 ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 45 ವಯೋಮಾನದೊಳಗಿರಬೇಕು. ಪುರುಷ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಮತ್ತು ಬೈಕ್ ಹೊಂದಿರಬೇಕು.
ಕಲಬುರಗಿ ನಗರದ ಭಾರತ್ ಫೈನಾನ್ಸಿಯಲ್ ಇನಕ್ಯೂಜನ್ ಪ್ರೈವೆಟ್ ಲಿಮಿಟೆಡ್ ಫೀಲ್ಡ್ ಅಸಿಸ್ಟೆಂಟ್ 30 ಹುದ್ದೆಗಳಿಗೆ ಎಸ್.ಎಸ್ಎಲ್ಸಿ ಮತ್ತು ಪಿಯುಸಿ ಪಾಸಾಗಿರಬೇಕು. ಅದೇ ರೀತಿ ಲೋನ್ ಆಫಿಸರ್ 20 ಹುದ್ದೆಗಳಿಗೆ ಪಿಯುಸಿ ಹಾಗೂ ಪದವೀಧರ ವಿದ್ಯಾರ್ಹತೆ ಹೊಂದಿರಬೇಕು. ಭಾರತ ಮನಿ ಆಫಿಸರ್ 10 ಹುದ್ದೆಗಳಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪಾಸಾಗಿರಬೇಕು. ವಯೋಮಿತಿ 21 ರಿಂದ 28 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಕಲಬುರಗಿ ಎಸ್.ಬಿ.ಐ ಲೈಫ್ ಇನ್ಸುರೆನ್ಸ್ ನಲ್ಲಿ ಸೇಲ್ಸ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ 40 ವರ್ಷದೊಳಗಿರಬೇಕು. ಬಿಸಿನೆಸ್ ಪಾರ್ಟನರ್/ಲೈನ್ ಮಿತ್ರ ಹುದ್ದೆಗೆ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.30 ರಿಂದ 60 ವರ್ಷದೊಳಗಿರಬೇಕು.
ಟೆಲಿಕಾಲರ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಯುನಿಟ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ35 ವರ್ಷದೊಳಗಿರಬೇಕು.
ಕಲಬುರಗಿಯ ಹಿಂದುಸ್ತಾನ್ ಮೈಕ್ರೋ ಫೈನಾನ್ಸ್ ದಲ್ಲಿ ಕಸ್ಟಮರ್ ಸರ್ವಿಸ್ ಪ್ರೋವೈಡರ್ ಹುದ್ದೆಗೆ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು. ಕ್ರೆಡಿಟ್ ಆಫಿಸರ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ36 ವರ್ಷದೊಳಗೆ ಇರಬೇಕು.
ಇದನ್ನೂ ಓದಿ : ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ರೂ.ವರಿಗೆ ಪ್ರೋತ್ಸಹ ಧನ ನೀಡಲು ಅರ್ಜಿ ಆಹ್ವಾನ
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್ ) ಬಯೋಡಾಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಫೋಟೋದೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬೇಕು. ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.
ಹೆಚ್ಚನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846 ಗೆ ಸಂಪರ್ಕಿಸಲ ಕೋರಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳ ಝರಾಕ್ಸ್ ಪ್ರತಿ ಒಂದು ಸೆಟ್ ಮಾಡಿಕೊಳ್ಳಬಹುದು. ಇದರೊಂದಿಗೆ ಒರಿಜಿನಲ್ ಪ್ರಮಾಣ ಪತ್ರಗಳು ಹೊಂದಿರಬೇಕು. ಯಾವ ಹುದ್ದೆಗೆ ಅರ್ಜಿ ಸಲ್ಲಿಸಬಯುಸುತ್ತೀರೋ ಅದನ್ನು ನಮೂದಿಸಿ ಒಂದು ಅರ್ಜಿ ತಯಾರಿಸಿಕೊಳ್ಳಬಹುದು. ಒಂದು ವೇಳೆ ಎರಡು ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಪ್ರತ್ಯೇಕವಾಗಿ ಅರ್ಜಿ ಬರೆಯಬಹುದು. ಸಂದರ್ಶನದ ಸಮಯಕ್ಕೆ ಮೊದಲು ಬಂದು ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ಸಂದರ್ಶನಕ್ಕೆ ಭಾಗವಹಿಸಬಹುದು.