ಈ ಜಿಲ್ಲೆಗಳಲ್ಲಿ ಅಕ್ಟೋಬರ್ 19 ಹಾಗೂ 20 ರಂದು ಉದ್ಯೋಗ ಮೇಳ

Written by Ramlinganna

Updated on:

Job fair two days ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಹಾಗೂ ಪದವಿ ಪಾಸಾದವರಿಗೆ ಎರಡು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹೌದು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಅಕ್ಟೋಬರ್ 19 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹಾಗೂ ಟೀಮ್ ಲೀಡರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ವಿ5 ಗ್ಲೋಬಲ್ ಸರ್ವೆಸೆಸ್ ಪ್ರೈವೆಟ್ ಲಿಮಿಟೆಡ್ (ಗ್ಲೇನ್ ಮಾರ್ಕ್ ಆ್ಯಂಡ್ ಮಾರ್ಕ್ ಸನ್ಸ್ ಫಾರ್ಮಾ) ದಲ್ಲಿ ಅಸೋಸಿಯೇಟ್ ಟ್ರೇನಿ ಹುದ್ದೆಗೆ ಐಟಿಐ, ಡಿಪ್ಲೋಮಾ, (ಯಾವುದೇ ಟ್ರೇಡ್) ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ಎಲ್ಐಸಿ ದಲ್ಲಿ ಎಲ್ಐಸಿ ಏಜೆಂಟ್ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು. ಬಿವರೇಜ್ ಇನ್ಸುರೆನ್ಸ್ ದಲ್ಲಿ ಅಪ್ರೆಂಟಿಸ್ ಟ್ರೇನಿ ಹುದ್ದೆಗೆ ಐಟಿಐ ಎಲೆಕ್ಟ್ರಿಶಿಯನ್ ಅಥವಾ ಫಿಟ್ಟರ್ ವಿದ್ಯಾರ್ಹತೆ ಹೊಂದಿರಬೇಕು ವಯೋಮಿತಿ 18 ರಿಂದ 24 ವಯೋಮಾನದೊಳಗಿರಬೇಕು.

ನವಭಾರತ ಫರ್ಟಿಲೇಸರ್ಸ್ ದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 45 ವಯೋಮಾನದೊಳಗಿರಬೇಕು.

ಇದನ್ನೂಓದಿ ಅನ್ನಭಾಗ್ಯ ಹಣ ಬಿಡುಗಡೆ: ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಎಡಿಇಸಿಓ ಇಂಡಿಯಾ ಪ್ರೈ. ಲಿಮಿಟೆಡ್ ದಲ್ಲಿ ಟೆಕ್ನಿಕಲ್ ಆಪರೇಟರ್ ಹುದ್ದೆಗೆ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಅಥವಾ ಐಟಿಐ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.ವಯೋಮಿತಿ 18 ರಿಂದ 24 ವಯೋಮಾನದೊಳಗಿರಬೇಕು. ಫ್ಯೂಚರ್ ರೂಲ್ ಇನ್ಸುರೆನ್ಸ್ ದಲ್ಲಿ ಟೀಚರ್ಸ್, ಮಲ್ಚಿಪಲ್ ಓಪನಿಂಗ್ ಹುದ್ದೆಗೆ ಎಸ್.ಎಸ್.ಎಲ್.ಸಿ ಪಿಯುಸಿ, ಅಥವಾ ಯಾವುದೇ ಪದವಿ ಮತ್ತು ಬಿಇಡಿ ವಿದ್ಯಾರ್ಹತೆ ಹೊಂದಿರಬೇಕು.

ವಿಎಸ್ಎಸ್ ಟೆಕ್ ಸೆಲ್ಯೂಶನ್ ಪ್ರೈವೆಟ್ ಲಿಮಿಟೆಡ್ ದಲ್ಲಿಮಲ್ಟಿಪಲ್ ಓಪನಿಂಗ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ಆದ್ದರಿಂದ ಆಸಕ್ತ ಅಭ್ಯರ್ಥಿಗಲು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆಯ ಅರ್ಹ ಮತ್ತು ಅನರ್ಹರ ಪಟ್ಟಿ ಬಿಡುಗಡೆ- ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, 8003343944 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Job fair two days 20 ರಂದು ತುಮಕೂರಿನಲ್ಲಿ ಉದ್ಯೋಗ ಮೇಳ

ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾದರಿ ವೃತ್ತಿ ಕೇಂದ್ರ ತುಮಕೂರಿನಲ್ಲಿ ಅಕ್ಟೋಬರ್ 20 ರಂದು ಬೆಳಗ್ಗೆ 10 ಗಂಟೆಗೆ ಮಿನಿ ಉದ್ಯೋಗ ಮೇಳ ನಡೆಯಲಿದೆ.

ಉದ್ಯೋಗ ಮೇಳಕ್ಕೆ ತುಮಕೂರಿನ ಹೆಸರಾಂತ ಕಂಪನಿಗಳು ಭಾಗವಹಿಸುತ್ತಿವೆ ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ ಮತ್ತು ಐಟಿಐ (ಎಲ್ಲಾ ಟ್ರೇಡ್) ಹಾಗೂ ಡಿಪ್ಲೋಮಾ ಪಾಸಾದ 18 ರಿಂದ 35 ವಯೋಮಾನದೊಳಗಿನ ಅಭ್ಯರ್ಥಿಗಳು ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 20 ರಂದು ಬೆಳಗ್ಗೆ10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ತುಮಕೂರು ಇಲ್ಲಿ ತಮ್ಮ ಬಯೋಡಾಟಾ ಹಾಗೂ ಗುರುತಿನ ಚೀಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816 227848 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment