ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಸಾಲಮನ್ನಾ ಪ್ರಕ್ರಿಕೆಯ ಸಂಪೂರ್ಣವಾಗಿ ಪೂರ್ಣಗೊಂಡಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

2018 ರಲ್ಲಿ ರೈತರ ಬೆಳೆ ಸಾಲಮನ್ನಾ ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ ಕೆಲವು ರೈತರಿಗೆ ಸಾಲಮನ್ನಾ ಆಗಿತ್ತು ಇನ್ನೂ ಕೆಲವು ರೈತರಿಗಾಗಿದ್ದಿಲ್ಲ. ತಾಂತ್ರಿಕ ದೋಷದಿಂದಾಗಿ ಕೆಲವು ರೈತರ ಹೆಸರನ್ನು ಸಾಲಮನ್ನಾ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು. ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಕೆಲವು ರೈತರಿಗೆ ಸಾಲಮನ್ನಾ ಮಾಡಲಾಗಿತ್ತು. ಆದರೂ ಸಹ ಇನ್ನೂ ಕೆಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿರಲಿಲ್ಲ. ಈಗ ಯಾವ ಯಾವ ರೈತರಿಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಯಾವ ರೈತರ ಸಾಲಲಮನ್ನಾ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check crop loan status)

ರೈತರು ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://clws.karnataka.gov.in/clws/bank/fsd_report/BANK_IFR.aspx/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ಸಾಲ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನೀವು ಯಾವ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದಿದ್ದೀರೋ ಆ ಬ್ಯಾಂಕಿನ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು Fetch Details ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಆಯ್ಕೆ ಮಾಡಿದ ಬ್ಯಾಂಕನಲ್ಲಿ ಯಾವ ಯಾವ ರೈತರು ಬೆಳೆ ಸಾಲ ಪಡೆದಿದ್ದಾರೆ  ಅವರ ಹೆಸರು ಮತ್ತು ತಂದೆಯ ಹೆಸರು ಕಾಣಿಸುತ್ತದೆ. ನಂತರ ನಿಮ್ಮ ಬೆಳೆ ಸಾಲ ಅಕೌಂಟ್ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ ಸಾಲ ಯಾವ ಪ್ರಕಾರದ್ದು, ಅದ ಮುಂದುಗಡೆ ನಿಮಗೆ ಬೆಳೆ ಸಾಲ ಮನ್ನಾ ಯಾವಾಗ ಪಡೆದಿದ್ದೀರಿ. ಎಷ್ಟು ಬೆಳೆ ಸಾಲ ಪಡೆದಿದ್ದೀರಿ.  ಬ್ಯಾಂಕ್ ಮ್ಯಾನೇಜರ್ ನಿಮ್ಮ ಬೆಳೆ ಸಾಲ ಅಪ್ರೂವಲ್ ಮಾಡಿದ್ದಾರೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹದು.

ಇದನ್ನೂ ಓದಿ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ನಂತರ ನಿಮ್ಮ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಜಮೀನಿನ ಸರ್ವೆ ನಂಬರ್ ಎಲ್ಲವೂ ಯಸ್ ಇರಬೇಕು. ಮುಖ್ಯವಾಗಿ ಬ್ಯಾಂಕ್ ಮ್ಯಾನೇಜರ್ ಅಪ್ರೂವಲ್ ಮಾಡಿದ್ದು ಯಸ್ ಇದ್ದರೆ ಮಾತ್ರ ನಿಮಗೆ ಬೆಳೆ ಸಾಲ ಮನ್ನಾ ಆಗಿದೆಯೆಂದರ್ಥ. ನೀವು ಸರ್ಕಾರಿ ನೌಕರರೋ, ತೆರಿಗೆ ಪಾವತಿಸುವವರಾಗಿದ್ದೀರೋ, 15 ಸಾವಿರಕ್ಕಿಂತ ಹೆಚ್ಚು ಪೆನ್ಶನ್ ಪಡೆಯುತ್ತಿದ್ದೀರೋ ಎಂಬಿತ್ಯಾದಿ ಮಾಹಿತಿ ಇರುತ್ತದೆ. ಕೊನೆಯದಾಗಿ 2018 ರ ಮೊದಲು ನೀವು ಬೆಳೆ ಸಾಲ ಪಡೆದಿದ್ದೀರೋ ಇಲ್ಲವೋ? 2018 ರ ಮೊದಲು ಸಾಲ ಪಡೆದಿದ್ದರೆ ಮಾತ್ರ ನಿಮಗೆ ಬೆಳೆ ಸಾಲ ಮನ್ನಾ ಆಗಿರುತ್ತದೆ.

ಚುನಾವಣೆ ಘೋಷಣೆ ಮೊದಲು ಸಾಲಮನ್ನಾ ಮಾಡಲು ರೈತ ಸಂಘಗಳ ಒತ್ತಾಯ

ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ರೈತರ  ಒತ್ತಾಯಕ್ಕೆ ಸರ್ಕಾರ ಮಣಿದು ಬೆಳೆ ಸಾಲ ಮನ್ನಾ ಮಾಡಿದರೆ ರೈತರಿಗೆ ದೊಡ್ಡ ಸಂತಸದ ಸುದ್ದಿಯಾಗಲಿದೆ.

ಏಕೆಂದರೆ ಇತ್ತೀಚೆಗೆ ಅತೀವೃಷ್ಟಿ, ಪ್ರವಾಹದಿಂದಾಗಿ ರೈತರ ಬೆಳೆ ಹಾಳಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಗಾಗಿ ಸರ್ಕಾರವು ರೈತರ ಬೆಳೆ ಸಾಲ ಮನ್ನಾ ಘೋಷಣೆ ಮಾಡಲಿ ಎಂಬುದು ನಮ್ಮ ಆಶಯವಾಗಿದೆ.

Leave a Reply

Your email address will not be published. Required fields are marked *