IPL Match schedule ಕ್ರಿಕೇಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದೇಸಿ ಕ್ರಿಕೇಟ್ ಟಿ20 ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. 65 ದಿನಗಳ ಕಾಲ ಕ್ರಿಕೇಟ್ ಅಭಿಮಾನಿಗಳಿಗೆ ಐಪಿಎಲ್ ರಸದೌತಣ ನೀಡಲಿದೆ. ಮಾರ್ಚ್ 26 ರಂದು ಮುಂಬೈನ ವಾಂಖೇಡ್ ಕ್ರೀಡಾಂಗಣದಲ್ಲಿಈ ಐಪಿಎಲ್ ಗೆ ಚಾಲನೆ ಸಿಗಲಿದೆ. ಮೊದಲ ದಿನ ಚೆನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಹಣಾಹಣಿ ನಡೆಯಲಿದೆ. ಮಾರ್ಚ್26 ಕ್ಕೆ ಆರಂಭವಾಗುವ ಈ ಟೂರ್ನಿ ಮೇ 29 ಕ್ಕೆ ಮುಕ್ತಾಯವಾಗಲಿದೆ.
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟೈನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಈ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ. ಒಟ್ಟು 10 ತಂಡಗಳಿಂದ ಕೂಡಿದ ಈ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ಹಾಗೂ ಪ್ಲೇ ಆಫ್ ಹಂತದಲ್ಲಿ 4 ಪಂದ್ಯಗಳು ಇರಲಿವೆ.
ಬಹುಮಾನದ ಮೊತ್ತ
ಈ ಬಾರಿ ಐಪಿಎಲ್ ಚಾಂಪಿಯನ್ ತಂಡಕ್ಕೆ 20 ಕೋಟಿ ರೂಪಾಯಿ ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
ಐಪಿಎಲ್ ತಂಡಗಳು
ಚೆನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಇಲೆವನ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈರರ್ಸ್ ಹೈದ್ರಾಬಾದ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಹೀಗೆ ಒಟ್ಟು ಈ ಬಾರಿ 10 ತಂಡುಗಳಿವೆ.
IPL Match schedule ಐಪಿಎಲ್ ವಿನ್ನರ್ ಹಾಗೂ ರನ್ನರ್ ಆಫ್ ತಂಡಗಳು
2008 ರಿಂದ ಆರಂಭವಾದ ಐಪಿಎಲ್ ಇಲ್ಲಿಯವರೆಗೆ 14 ಟೂರ್ನಿಗಳು ನಡಿದಿವೆ. ಈ ಟೂರ್ನಿಯಲ್ಲಿ ವಿಜೇತ ತಂಡ ಹಾಗೂ ರನ್ನರ್ ಅಪ್ ತಂಡಗಳ ಮಾಹಿತಿ ಇಲ್ಲಿದೆ.
ವರ್ಷ | ವಿಜೇತ ತಂಡ | ರನ್ನರ್ ಅಪ್ ತಂಡ |
2008 | ರಾಜಸ್ಥಾನ್ ರಾಯಲ್ಸ್ | ಚೆನೈ ಸೂಪರ್ ಕಿಂಗ್ಸ್ |
2009 | ಡೆಕ್ಕನ್ ಜಾರ್ಜರ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು |
2010 | ಚೆನೈ ಸೂಪರ್ ಕಿಂಗ್ಸ್ | ಮುಂಬೈ ಇಂಡಿಯನ್ಸ್ |
2011 | ಚೆನೈ ಸೂಪರ್ ಕಿಂಗ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು |
2012 | ಕೊಲ್ಕತ್ತಾ ನೈಟ್ ರೈಡರ್ಸ್ | ಚೆನೈ ಸೂಪರ್ ಕಿಂಗ್ಸ್ |
2013 | ಮುಂಬೈ ಇಂಡಿಯನ್ಸ್ | ಚೆನೈ ಸೂಪರ್ ಕಿಂಗ್ಸ್ |
2014 | ಕೊಲ್ಕತ್ತಾ ನೈಟ್ ರೈಡರ್ಸ್ | ಕಿಂಗ್ಸ್ XI ಪಂಜಾಬ್ |
2015 | ಮುಂಬೈ ಇಂಡಿಯನ್ಸ್ | ಚೆನೈ ಸೂಪರ್ ಕಿಂಗ್ಸ್ |
2016 | ಸನ್ ರೈಸರ್ಸ್ ಹೈದ್ರಾಬಾದ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು |
2017 | ಮುಂಬೈ ಇಂಡಿಯನ್ಸ್ | ರೈಸಿಂಗ್ ಪುಣೆ ಸೂಪರಗೇನ್ಸ್ |
2018 | ಚೆನೈ ಸೂಪರ್ ಕಿಂಗ್ಸ್ | ಸನ್ ರೈಸರ್ಸ್ ಹೈದ್ರಾಬಾದ್ |
2019 | ಮುಂಬೈ ಇಂಡಿಯನ್ಸ್ | ಚೆನೈ ಸೂಪರ್ ಕಿಂಗ್ಸ್ |
2020 | ಮುಂಬೈ ಇಂಡಿಯನ್ಸ್ | ದೆಲ್ಲಿ ಕ್ಯಾಪಿಟಲ್ಸ್ |
2021 | ಚೆನೈ ಸೂಪರ್ ಕಿಂಗ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ |
ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಈ ಬಾರಿ ಪಂದ್ಯಗಳನ್ನು ಮುಂಬೈಹಾಗೂ ಪುಣೆ ನಗರಗಳಲ್ಲಿ ಮಾತ್ರ ಆಡಲಾಗುತ್ತಿದೆ. ಈ ಬಾರಿಯ ಐಪಿಎಲ್ ನ ತಂಡಗಳಲ್ಲಿ ಭಾರಿ ಬದಲಾವಣೆಗಳಾಗಿದ್ದು, ಪ್ರಮುಖ ಆಟಗಾರರು ವಿವಿಧ ತಂಡಗಳಿಗೆ ಹಂಚಿ ಹೋಗಿದ್ದಾರೆ. ಜೊತೆಗೆ ಐಪಿಎಲ್ ಟೂರ್ನಿಯ ನಿಯಮಗಳಲ್ಲಿ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ
2022ನೇ ಸಾಲಿನಲ್ಲಿಯಾವ ತಂಡ ಫೈನಲ್ ಗೆ ತಲುಪುವುದೋ ಎಂಬ ಕುತೂಹಲ ಇದ್ದೇ ಇರುತ್ತದೆ. ಮ್ಯಾಜಿಕ್ ಮಾಡಿ ಹೊಸ ತಂಡಗಳು ಫೈನಲ್ ಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಹಿಂದೆ ರಾಜಸ್ಥಾನ ರಾಯಲ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡಗಳು ಐಪಿಎಲ್ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಸಾಲಿನ ಐಪಿಎಲ್ ಕ್ರಿಕೇಟ್ ಸಹ ಕಳೆದ ಸಾಲಿನಂತೆ ಕ್ರಿಕೇಟ್ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.