ಈ ಜಿಲ್ಲೆಯಲ್ಲಿ 19 ರವರೆಗೆ ಮಳೆ ಸಾಧ್ಯತೆ

Written by Ramlinganna

Updated on:

till 19th rain alert ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ119 ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಅಲ್ಲಲ್ಲಿ ಮಳೆ ಬರುವ ಸಾಧ್ಯತೆಯಿದೆ.

ದೀರ್ಘಾವಧಿ ಮುನ್ಸೂಚನೆಯಂತೆ ಆಗಸ್ಟ್ 18 ರಿಂದ 24 ರವರೆಗೆ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಭತ್ತ ನಾಟಿಗೆ ತಯಾರಿ ಮಾಡಿಕೊಳ್ಳಬಹುದು. ಕಬ್ಬಿಗೆ ಮೇಲುಗೊಬ್ಬರ ಮತ್ತು ಅಂತರ ಬೇಸಾಯ ಪದ್ದತಿ ಅನುಸರಿಸಬೇಕು. ಅವರೆ ಮತ್ತು ಅಲಸಂಧೆಗೆ ಸಸ್ಯಹೇನು ರೋಗ, ಅಲಸಂಧೆಗೆ ಹಳದಿ ನಂಜು ರೋಗ, ತೊಗರಿಗೆ ಫ್ಲೂಸೆರಿಯಂ ಸೊರಗು ರೋಗ, ಎಲೆಕೋಸು ಮತ್ತು ಹೂ ಕೋಸಿಗೆ ವಜ್ರ ಗುರುತಿನ ಬೆನ್ನಿನ ಪತಂಗ ರೋಗ ಕಾಡುವ ಸಾಧ್ಯತೆಯಿದೆ.

ಟೊಮ್ಯಾಟೋ, ಮೆಣಸಿನಕಾಯಿ ಮತ್ತು ಬದನೆ ಸಸಿಗಳನ್ನು ಉಪಚರಿಸಬೇಕು. ಹೆಚ್ಚಿನ ಮಾಹಿತಿಗಾಗೆ ರೈತರು ನಾಗನಹಳ್ಳಿ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ಕ್ಷೇತ್ರ ಅಧೀಕ್ಷಕಡಾ. ಸಿ. ರಾಮಚಂದ್ರ ಅವರ ಮೊಬೈಲ್ ನಂಬರ್ 94491 37362 ಅಥವಾ ಸಹ ಸಂಶೋಧಕ ಡಾ. ಜಿ. ಸುಮಂತಕುಮಾರ ಮೊಬೈಲ್ ನಂಬರ್ 95353 45814 ಗೆ ಸಂಪರ್ಕಿಸಬಹುದು.

 till 19th rain alert ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಊರಿನಲ್ಲಿ ಮಳೆ ಯಾವಾಗ ಆಗುತ್ತದೆ?

ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಊರಿನಲ್ಲಿ ಮಳೆ ಯಾವಾಗ ಆಗುತ್ತದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದು. ಹೌದು, ಕರ್ನಾಟಕದ ಜನತೆ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ವರುಣಮಿತ್ರ ಸಹಾಯವಾಣಿ  92433 45433 ಗೆ ಕರೆ ಮಾಡಿದರೆ ಸಾಕು,

ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಇದುಕೊಳ್ಳಬೇಕು. ನೀವು ಕರೆ ಮಾಡಿದಾಗ ನಿಮ್ಮ ಜಿಲ್ಲೆ ಕೇಳಲಾಗುತ್ತದೆ. ನಿಮ್ಮ ತಾಲೂಕು ಕೇಳಲಾಗುತ್ತದೆ ನಂತರ ಮಳೆಯ ಮಾಹಿತಿ ಪಡೆದುಕೊಳ್ಳಬಹುದು.ಇದು ಸಂಪೂರ್ಣ ಉಚಿತವಾಗಿರುತ್ತದೆ.

ದಿನದ 24 ಗಂಟೆಗಳ ಕಾರ್ಯ ನಿರ್ವಹಿಸುವ ಈ ಉಚಿತ ಸಹಾಯವಾಣಿಯಿಂದ ರಾಜ್ಯದ ಜನರು ಹವಾಮಾನದ ವರದಿ ಪಡೆದುಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಕರೆಗಳು ಹೆಚ್ಚು ಬರುತ್ತಿದೆ.

ಇದನ್ನೂ ಓದಿ ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ ಇಲ್ಲಿಯವರೆಗೆ ಮಳೆಯಾಗದೆ ಇರುವುದರಿಂದ ಬೆಳೆ ಕಮರಿಹೋಗುತ್ತಿದೆ. ಕಳೆದ ತಿಂಗಳು ನಿರಂತರವಾಗಿ ಸುರಿದ ಮಳೆಯಿಂದ ಸಂಕ ಷ್ಟಕ್ಕೊಳಗಾದ ರೈತರು ಈಗ ಮಳೆಯ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಿಮಾಚಲದಲ್ಲಿ ಮತ್ತಂ ಮಳೆ, ಮೇಘಸ್ಪೋಟ 50 ಕ್ಕೂ ಹೆಚ್ಚು ಜನ ಸಾವು

ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಭಾರಿ ಅನುಹುತ ಸೃ ಷ್ಟಿಸಿದ್ದ ಮುಂಗಾರು ಮಳೆ ಮತ್ತೆ ಅಬ್ಬರಿಸಿದೆ.

ಧಾರಾಕಾರ ಮಳೆ ಹಾಗೂ ಮೇಘಸ್ಪೋಟದಿಂದ ಭಾನುವಾರ ರಾತ್ರಿಯಿಂದಿಚಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದೇ ವೇಳೆ ಉತ್ತರಾಖಂಡದಲ್ಲೂ ಭಾರಿ ಮಳೆ ಸುರಿದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಹೀಗಾಗಿ ಚಾರ್ ಧಾಮ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ನಡುವೆ ಮಂಗಳವಾರ ಹಿಮಾಚಲದ 8 ಹಾಗೂ ಉತ್ತರಾಖಂಡದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 1 ಜಿಲ್ಲೆಗೆ ಆರೇಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಶನಿವಾರ ಸಂಜೆಯಿಂದ ಹಿಮಾಚಲದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆಸ್ತಿಪಾಸ್ತಿಗೂ ಹಾನಿಯಾಗಿದೆ.

ಉತ್ತಾರಖಂಡದಲ್ಲಿ ಭಾರಿ ಮಳೆಯಾಗಿದ್ದರಿಂದ ಹೃಷಿಕೇಶದಲ್ಲಿ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಮೂವರು ಸಾವನ್ನಪ್ಪಿ ಐವರು ನಾಪತ್ತೆಯಾಗಿದ್ದಾರೆ.

ಪ್ರಖ್ಯಾತ ಯಾತ್ರಾ ಸ್ಥಳಗಳಾದ ಬದರಿನಾಥ, ಕೇದರಿನಾಥ ಹಾಗೂ ಗಂಗೋತ್ರಿಯನ್ನು ಸಂಪರ್ಕಿಸುವ ರಾ ಷ್ಟ್ರೀಯ ಹೆದ್ದಾರಿಯಲ್ಲೂ ಭೂ ಕುಸಿತ ಉಂಟಾಗಿದೆ. ಹಾಗಾಗಿ ಚಾರ್ ಧಾಮ್ ಯಾತ್ರೆಯನ್ನು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಪೌರಿ ಜಿಲ್ಲೆಯಲ್ಲಿ 45 ಜನರು ನಾಪತ್ತೆಯಾಗಿದ್ದಾರೆ. ಹಲವು ನಗರಗಳಲ್ಲಿ ನದಿಗಳು ಉಕ್ಕೇರಿ ಹರಿದು ಜನವಸತಿ ಪ್ರದೇಶಗಳು ಮತ್ತು ಕಟ್ಟಡದೊಳಗೆ ಪ್ರವೇಶ ಮಾಡಿರುವ ಕಾರಣ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

Leave a Comment