ರಾಜ್ಯದ ಈ12 ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆ

Written by By: janajagran

Updated on:

ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದಾಗಿ ಮೇ 5ರಿಂದ 7 ರವರೆಗೆ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೋಲಾರ, ತಮುಕೂರು, ಮೈಸೂರು, ಕೊಡಗು, ಹಾಸನ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು, ಚಾಮರಾಜನಗರ  ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 5 ಹಾಗೂ 6 ರಂದು ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್  ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಈಗಾಗಲೇ ಬಂಗಾಳಕೊಲ್ಲಿಯಲ್ಲಿಉಂಟಾಗಿರುವ ಮೈಲ್ಮೈ ಸುಳಿಗಾಳಿಯಿಂದ ಮಳೆಯಾಗುತ್ತಿದೆ. ಇನ್ನೂ ಮೂರು ದಿನಗಳ ಕಾಲ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರ ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆಯಾಗುತ್ತಿದೆ. ಗಾಳಿಯ ಆರ್ಭಟಕ್ಕೆ ವಿವಿಧೆಡೆ ಮರಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.  ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಇನ್ನೂ ಮೂರುದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ.

ಬುಧವಾರ ಬೆಂಗಳೂರಿನಲ್ಲಿ ಬಹುತೇಕ ಕಡೆ ಮಳೆಯಲಾಗಿದೆ. ಜೋರಾಗಿ ಬೀಸಿದ ಗಾಳಿಯಿಂದಾಗಿ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಾಹನ ಸವಾರರಿಗೆ ಸಂಚಾರಕ್ಕೆಅಡಚಣೆ ಉಂಟಾಗಿದೆ. ಬುಧವಾರ ಸಾಯಂಕಾಲ ವಿವಿಧೆಡೆ ಜೋರು ಮಳೆಯಾಯಿತು. ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಆಗಸದಲ್ಲಿ ಕಾರ್ಮೋಡ ದಟೈಸಿತ್ತು. ಬಳಿಕ ಧಾರಾಕಾರ ಮಳೆಯಾಗಿದ್ದರಿಂದ ರಸ್ತೆಗಳು ಹೊಳೆಯಂತಾಗಿದ್ದವು. ಅರ್ಧ ಗಂಟೆಗೂ ಅಧಿಕಕಾಲ ಮಳೆ ಸುರಿಯಿತು.  ಇದೇ ರೀತಿ ಇನ್ನೂ ಮೂರು ದಿನಗಳ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಿಡಿಲಿನಿಂದ ತಪ್ಪಿಸಲು ಈ ಕೆಳಗಿನ ಉಪಾಯಗಳನ್ನು ಅನುಸರಿಸಿ

ಸಿಡಿಲಿನ ಆರ್ಭಟ ಹೆಚ್ಚಾದಾಗ ರೈತರು, ಸಾರ್ವಜನಿಕರು ಎಚ್ಚರವಾಗಿರಬೇಕು. ಮಳೆಯೊಂದಿಗೆ ಗುಡುಗು ಸಿಡಿಲಿನ ಅಬ್ಬರ ಉಂಟಾದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಮರದ ಕೆಳಗಡೆ ನಿಲ್ಲಬಾರದು. ಸಿಡಿಲು ಭೂಮಿಗೆ ಹರಿಯುವಾಗ ಮರದಂತಹಹಸಿ ಸಾವಯವ ವಸ್ತುವಿನತ್ತ ಆಕರ್ಶಿತವಾಗುತ್ತದೆ. ಲೋಹದ ವಸ್ತುಗಳನ್ನು ದೂರವಿರಿಸಿ. ಕೆರೆಯಲ್ಲಿ ಈಜುವುದು, ಸ್ನಾನ ಮಾಡಬಾರದು. ವಿದ್ಯುತ್ ಕಂಬ, ಎಲೆಕ್ಟ್ರಿಕ್ ಟವರ್, ಮೊಬೈಲ್ ಟವರ್, ಟ್ರಾನ್ಸಫಾರ್ಮರ್ ತಂತಿಬೇಲಿ, ಬಟ್ಟೆ ಒಣಗುವ ತಂತಿಯಿಂದ ದೂರವಿರಬೇಕು.  ಗುಡುಗು ಮಿಂಚು ಇದ್ದಾಗ ಸಿಡಿಲಿನ ಸೀನ್ ನೋಡಲು ಮನೆಯ ಟೆರಿಸ್ ಮೇಲೆ ಬರಬಾರದು.

ಮಳೆಗಾಲದಲ್ಲಿ ರೈತರು ಮತ್ತು ಸಾರ್ಜನಿಕರು ಸಿಡಿಲಿನಿಂದ ಸಾವಿಗೀಡಾಗುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಕೆಲವು ಸಲಹೆಗಳನ್ನು ನೀಡಿದೆ. ಗುಡುಗು ಮಿಂಚು ಬರುವುದು ಗೊತ್ತಾದರೆ ಕೂಡಲೇ ಬಯಲಿನಲ್ಲಿದ್ದವರು ತಗ್ಗು ಪ್ರದೇಶಗಳಿಗೆ ಹೋಗಿ ಕುಳಿತುಕೊಳ್ಳಬೇಕು. ಗುಡುಗು ಮತ್ತು ಸಿಡಿಲು ಹಸಿ ವಸ್ತುಗಳಿಗೆ ಹೆಚ್ಚು  ಆಕರ್ಶಿತಗೊಳ್ಳುತ್ತೆ. ಹೀಗಾಗಿ ಮರಗಳ ಕೆಳಗಡೆ ನಿಲ್ಲುವುದು ಸುರಕ್ಷಿತವಲ್ಲ.

ರೈತರು ಕುರಿ ಮಂದೆ ಅಥವಾ ದನಗಳ ಮಧ್ಯೆ ಇದ್ದರೆ, ಅವುಗಳ ಸಂದಿಯಲ್ಲಿ ಕುಳಿತುಕೊಳ್ಳಬೇಕು. ಎದ್ದು ನಿಂತರೆ ಎತ್ತರ ಇರುವ ವ್ಯಕ್ತಿಗೆ ಮೊದಲು ಸಿಡಿಲು ಬಡಿಯುತ್ತದೆ.  ಮನೆಯ ಕಿಟಕಿ ಪಕ್ಕದಲ್ಲಿ ನಿಲ್ಲುವುದರ ಬದಲು ಮನೆಯ ಮಧ್ಯದಲ್ಲಿ ಇರಬೇಕು.

Leave a comment