ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಇಚ್ಚಯುಳ್ಳವರಿಗೆ ಇಲ್ಲಿದೆ ಸಂತಸದ ಸುದ್ದಿ. ಹೌದು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ದೇಶಾದ್ಯಂತ (IBPS, rrb recruitment 2021)ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ ಆಫೀಸರ್ ಮತ್ತು ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪೋಸ್) 10,447 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಮಲ್ಟಿಪರ್ಪಸ್ ಹಾಗೂ ಐಟಿ, ಕೃಷಿ, ಕಾನೂನು, ಎಚ್ಆರ್, ಮಾರ್ಕೇಟಿಂಗ್ ಹಾಗೂ ರಾಜಭಾಷೆ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಖಾಲಿಯಿರುವ ಹುದ್ದೆಗಳು:

ಆಫೀಸ್ ಅಸಿಸ್ಟೇಂಟ್ -5096 ಹುದ್ದೆಗಳು

ಆಫೀಸ್ ಸ್ಕೇಲ್ (1)-4119 ಹುದ್ದೆಗಳು

ಆಫೀಸರ್ ಸ್ಕೇಲ್ (2) -1232

ವಯೋಮಾನ: ಜೂನ್ 2021ಕ್ಕೆ ಅನ್ವಯವಾಗುವಂತೆ 20ರಿಂದ 30 ವರ್ಷದೊಳಗಿರಬೇಕು. (ಮೀಸಲಾತಿ ನಿಯಮ ಅನ್ವಯಿಸುತ್ತದೆ)

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಸಂದರ್ಶನ ಪ್ರಕ್ರಿಯೆ: ಲಿಖಿತ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿ ಪದವಿ, ಎಂಬಿಎ, ಸಿಎ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 850 ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175 ರೂಪಾಯಿ ಶುಲ್ಕವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-06-2021, ಅರ್ಜಿ ಸಲ್ಲಿಸಲು ಆರಂಬಿಕ ದಿನ 8-6-2021)

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಈ ಲಿಂಕ್ https://www.ibps.in/ ಮೇಲೆ ಕ್ಲಿಕ್ ಮಾಡಬೇಕು.

ಪೂರ್ವಭಾವಿ ಪರೀಕ್ಷೆಯು ಆಗಸ್ಟ್ 2021ಕ್ಕೆ ನಡೆಯಲಿದೆ. ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021 ರಲ್ಲಿ ನಡೆಯಲಿದೆ.

ಹುದ್ದೆಗಳ ವಿವರ, ವಿದ್ಯಾರ್ಹತೆ, ಮೀಸಲಾತಿ, ಇನ್ನಿತರ ಮಾಹಿತಿಗಾಗಿ ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. https://www.ibps.in/wp-content/uploads/Advt-_CRP-RRB-X_final_final.pdf

Leave a Reply

Your email address will not be published. Required fields are marked *