ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಈಗ ಯಾರ ಸಹಾಯವೂ ಬೇಕಾಗಿಲ್ಲ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ಗೂಗಲ್ ಮ್ಯಾಪ್ ಬಳಸಿ ಸುಲಭವಾಗಿ ನೀವು ಅಂದುಕೊಂಡ ಸ್ಥಳಕ್ಕೆ ಅಥವಾ ನಿಮ್ಮ ಮಿತ್ರ, ಬಂಧುಬಳಗದವರ ಮನೆಗೆ ಸರಳವಾಗಿ ಯಾವುದೇ ಕಷ್ಟವಿಲ್ಲದೆ ಹೋಗಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ಗೂಗಲ್ ಮ್ಯಾಪ್ ಈಗ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವುವವರಿಗೆ ಆಪ್ತಮಿತ್ರವಾಗಿದೆ. ಮನೆಯಲ್ಲಿಯೇ ಕುಳಿತು ಗೂಗಲ್ ಮ್ಯಾಪ್ ಸಹಾಯದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳದ ದೂರ, ರಸ್ತೆ, ನಿಮ್ಮ ಹತ್ತಿರದಲ್ಲಿರುವ ಎಟಿಎಂಗಳು, ಪೆಟ್ರೋಲ್ ಬಂಕ್ ಗಳು, ಹೋಟೇಲುಗಳ ಮಾಹಿತಿ ಪಡೆಯಬಹುದು.
ಗೂಗಲ್ ಮ್ಯಾಪ್ ಕೇವಲ ರೂಟ್ ಮ್ಯಾಪ್ ತೋರಿಸುವುದಷ್ಟೇ ಅಲ್ಲ ಮಾಹಿತಿಯನ್ನೂ ನೀಡುತ್ತದೆ. ಉದಾಹರಣೆಗೆ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಯಾವ ಕಡೆ ತಿರಗುಬೇಕು. ಅಕ್ಕಪಕ್ಕದ ಹೋಟೇಲ್, ಕಚೇರಿಗಳ ಮಾಹಿತಿಯನ್ನು ನೀಡುತ್ತದೆ. ಗೂಗಲ್ ಮ್ಯಾಪ್ ಮೇಲೆ ಕ್ಲಿಕ್ ಮಾಡಿದರೆ ನ್ಯಾವಿಗೇಷನ್ ಮ್ಯಾಪ್ ಸಹ ತೋರಿಸುತ್ತದೆ.
ಲೋಕೇಷನ್ ಶೇರ್ ಮಾಡಿ ಪ್ರಯಾಣಿಸಿ
ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾಂವ್ ಸೇರಿದಂತೆ ಬೇರೆ ಬೇರೆ ನಗರದಲ್ಲಿ ವಿಳಾಸಗಳನ್ನು ಪತ್ತೆ ಮಾಡುವುದು ಸಾಹಸದ ಕೆಲಸವಾಗಿರುತ್ತದೆ. ಈ ಕಷ್ಟವನ್ನು ನಿವಾರಿಸಲು ಈ ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಈಗ ಗೂಗಲ್ ಲೋಕೇಷನ್ ಶೇರಿಂಗ್ ಎಂಬ ಹೊಸ ಫೀಚರ್ ಸೇರ್ಪಡೆಯಾಗಿದ್ದು, ಅದು ನೀವು ನಿಮ್ಮ ಸ್ನೇಹಿತರಿಗೆ, ಬಂಧುಬಳಗದವರಿಗೆ ಶೇರ್ ಮಾಡಬಹುದು. ನೀವು ಎಲ್ಲಿದ್ದೀರಿ ಎಂಬುದನ್ನು ಅಥವಾ ನಿಮ್ಮ ಮನೆಯ ವಿಳಾಸವನ್ನು ಪೂರ್ತಿಯಾಗಿ ನಿಮ್ಮ ಸ್ನೇಹಿತರಿಗೆ ವವರಿಸಲು ಈ ಫೀಚರ್ ಸಹಾಯ ಮಾಡುತ್ತದೆ.
ನಿಮ್ಮ ಲೈವ್ ಲೋಕೇಷನ್ ನಿಮ್ಮ ಸಂಬಂಧಿಕರು, ಬಂಧು ಬಳಗ, ಅಥವಾ ನಿಮ್ಮ ಗೆಳೆಯರಿಗೆ ಕಳುಹಿಸಬೇಕಾದರೆ ವ್ಯಾಟ್ಸ್ ಅಪ್ ಆನ್ ಮಾಡಬೇಕು. ಯಾರಿಗೆ ಲೈವ್ ಲೋಕೇಷನ್ ಕಳಿಸಬೇಕೆಂದುಕೊಂಡಿದ್ದೀರೋ ಅವರ ಹೆಸರು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಕೆಳಗಡೆ ಫೈಲ್ ಆಪಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕೆಲವು ಐಕಾನ್ ಕಾಣುತ್ತದೆ. ಅಲ್ಲಿ ಲೊಕೇಷನ್ ಆಯ್ಕೆ ಮಾಡಿಕೊಳ್ಳಬೇಕು.ನಂತರ send your current location ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಇದ್ದ ಸ್ಥಳ ನಿಮ್ಮ ಗೆಳೆಯರಿಗೆ ತಲುಪುತ್ತದೆ. ಆಗ ಅವರು ಸುಲಭವಾಗಿ ನೀವಿದ್ದ ಸ್ಥಳಕ್ಕೆ ಯಾರ ಸಹಾಯವೂ ಇಲ್ಲದೆ ಬರುತ್ತಾರೆ.
ಗೂಗಲ್ ಮ್ಯಾಪ್ ಬಳಸುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ ಲೋಕೇಷನ್ ಆನ್ ಮಾಡಿಕೊಳ್ಳಬೇಕು. ನಂತರ ಗೂಗಲ್ ಮ್ಯಾಪ್ಸ್ ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.ಆಗ ನೀವು ಇದ್ದ ಸ್ಥಳದ ಪಾಯಿಂಟ್ ನಿಮ್ಮ ಸುತ್ತಮುತ್ತಲಿರುವ ಸ್ಥಳದ ಮಾಹಿತಿ ಅಲ್ಲಿರುತ್ತದೆ. ನೀವು ಎಲ್ಲಿಗೆ ಹೋಗಬೇಕು ಎಂಬ ಸ್ಥಳವನ್ನು ಮೇಲ್ಗಡೆ ಸರ್ಚ್ ಹಿಯರ್ ನಲ್ಲಿ ಬರೆಯಬೇಕು. ನಂತರ Directions ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕೆಂದುಕೊಂಡಿದ್ದೀರೋ ಎಂಬ ಮಾಹಿತಿಯು ಬ್ಲೂ ಲೈನ್ ನಲ್ಲಿ ತೋರಿಸಲಾಗುತ್ತದೆ. ಆ ದೂರವು ಎಷ್ಟು ಕಿ.ಮೀ ಇದೆ. ಅಲ್ಲಿಗೆ ಹೋಗಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿಯೂ ಅಲ್ಲಿರುತ್ತದೆ. ನೀವು ಹೋಗುವ ಮಾರ್ಗದಲ್ಲಿ ಟೋಲ್ ನಾಕಾ ಇದ್ದರೆ ಅದನ್ನು ಸಹ ಗೂಗಲ್ ಮ್ಯಾಪ್ ತೋರಿಸುತ್ತದೆ.
ಇದನ್ನೂ ಓದಿ : ಮೊಬೈಲ್ ನಲ್ಲಿಯೇ ಪಡೆಯಿರಿ ಊರಿನ ಮ್ಯಾಪ್… ಇಲ್ಲಿದೆ ಸಂಪೂರ್ಣ ಮಾಹಿತಿ
ಬೈಕ್, ಕಾರ್, ಅಥವಾ ಟ್ರೇನ್ ಮೂಲಕ ಪ್ರಯಾಣಿಸುವವರಿಗೂ ಅಲ್ಲಿ ಮಾಹಿತಿ ನೀಡಲಾಗಿರುತ್ತದೆ. ಉದಾಹರಣೆಗೆ ಬೈಕ್ ಮೂಲಕ ಪ್ರಯಾಣಿಸುತ್ತಿದ್ದರೆ ಟೂ ವೀಲರ್ ಮೇಲೆ, ಕಾರ್ ಮೂಲಕ ಪ್ರಯಾಣಿಸುತ್ತಿದ್ದರೆ ಕಾರ್ ಮೇಲೆ ಕ್ಲಿಕ್ ಮಾಡಿ ಸಂಚರಿಸಬಹುದು.
ನೀವು ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇದ್ದರೆ ಅದನ್ನು ರೆಡ್ ಕಲರ್ ನಲ್ಲಿ ನಮೂದಿಸಲಾಗಿರುತ್ತದೆ. ನೀವು ಗೂಗಲ್ ಮ್ಯಾಪ್ ಸಹಾಯದಿಂದ ಅಂದುಕೊಂಡ ಸ್ಥಳಕ್ಕೆ ತೆರಳಬೇಕಾದರೆ ಅಲ್ಲಿ ಕಾಣುವ Start ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಹೋಗುವ ರಸ್ತೆಯನ್ನು ತೋರಿಸುತ್ತದೆ. ನೀವು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರೆ ನಿಮ್ಮ ಮುಂದೆ ಇಟ್ಟು ಯಾರ ಸಹಾಯವೂ ಇಲ್ಲದೆ ಪ್ರಯಾಣಿಸಬಹುದು.
ಸ್ಟೇಪ್ಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಯಾವ ಕಡೆ ತಿರುಗಬೇಕು. ಯಾವ ಕಡೆ ತಿರುಗಿದರೆ ಯಾವ ಮಾರ್ಗವಿದೆ ಎಂಬ ಮಾಹಿತಿ ನೀಡಲಾಗಿರುತ್ತದೆ. ಒಂದು ವೇಳೆ ನಿಮಗೆ ಮೊಬೈಲ್ ನಾವಿಗೇಷನ್ ಆನ್ ಮಾಡಿ ಹೋಗಲು ಕಷ್ಟವಾಗುತ್ತಿದ್ದರೆ ಸ್ಥಳವನ್ನು ಉಚ್ಚಾರ ಮಾಡುವ ಮೂಲಕ ಮಾಹಿತಿ ನೀಡುವ ಅವಕಾಶವನ್ನು ಸಹ ನೀಡಲಾಗಿದೆ. ಎಲ್ಲಾ ಅಂಡ್ರಾಯ್ಡ್ ಫೋನ್ ಗಳಲ್ಲಿ ಈ ಸೌಲಭ್ಯವಿದೆ. ಗೂಗಲ್ ಮ್ಯಾಪ್ ನಲ್ಲಿ ರೂಟ್, ವಾಯ್ಸ್ ಗೈಡ್ (ದ್ವನಿ) ನೇವಿಗೇಷನ್ ಮತ್ತು ಲ್ಯಾಂಡ್ ಮಾರ್ಕ್ ನ್ಯಾವಿಗೇಷನ್ ಕೂಡ ಲಭ್ಯವಿದೆ.