ಪ್ರತಿಯೊಂದು ಜಮೀನಿನ ಸುತ್ತಮುತ್ತ ಅ ಖರಾಬು ಮತ್ತು ಬ ಖರಾಬು ಜಮೀನು ಇದ್ದೇ ಇರುತ್ತದೆ. ಆದರೆ ಅ ಖರಾಬು ಜಮೀನು ಯಾವುದು ಮತ್ತು ಬ ಖರಾಬು ಜಮೀನು ಯಾವುದೆಂಬುದು ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಅಷ್ಟೇ ಅಲ್ಲ ಅ ಖರಾಬು ಜಮೀನನ್ನು ರೈತರು ಸಕ್ರಮಗೊಳಿಸಿ ಪಹಣಿಯಲ್ಲಿ ಸೇರಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ..ಇಲ್ಲಿದೆ ಸಂಪೂರ್ಣ ಮಾಹಿತಿ.
ಖರಾಬು ಜಮೀನು ಸಕ್ರಮಗೊಳಿಸುವುದಕ್ಕಿಂತ ಮುಂಚಿತವಾಗಿ ಅ ಖರಾಬು ಮತ್ತು ಬ ಖರಾಬ ಜಮೀನು ಬಗ್ಗೆ ತಿಳಿದುಕೊಳ್ಳೋಣ
ಖರಾಬು ಎಂದೇನು?
ಉಳುಮೆಗೆ ಯೋಗ್ಯವಲ್ಲದಂತಹ ಮತ್ತು ವ್ಯವಸಾಯ ಮಾಡಲು ಅನರ್ಹವಾಗಿರುವ ಜಮೀನನ್ನು ಖರಾಬು ಜಮೀನು ಎಂದು ಕರೆಯುತ್ತಾರೆ. ಖರಾಬುನಲ್ಲಿ ಎರಡು ವಿಧಗಳಿವೆ. ಅ ಖರಾಬು ಮತ್ತು ಬ ಖರಾಬು
ಅ ಖರಾಬು ಎಂದರೇನು?
ಜಮೀನಿನಲ್ಲಿರುವ ಉಳುಮೆ ಮಾಡಲಿಕ್ಕೆ ಬರದ ಜಮೀನನ್ನು ಅ ಖರಾಬು ಜಮೀನು ಎಂದು ಕರೆಯುತ್ತಾರೆ. ಈ ಜಮೀನಿನ ವಿಸ್ತೀರ್ಣ ಮತ್ತು ನಕಾಶೆ ಇರುತ್ತದೆ. ತೆರಿಗೆ ಇರುವುದಿಲ್ಲ. ಕೃಷಿ ಮಾಡಲಿಕ್ಕೆ ಈ ಜಮೀನು ಯೋಗ್ಯವಲ್ಲದ ಕಾರಣ ಇದಕ್ಕೆ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ. ಉದಾಹರಣೆಗೆ ಗುಡ್ಡ, ಸಣ್ಣ ನಾಲೆ, ಕಣಮನೆ, ಮರಡಿಕೊರಕಲ್ಲು, ಪಾಳು ಜಮೀನು ಆಗಿರಬಹುದು. ಇವೆಲ್ಲ ಅ ಖರಾಬು ಜಮೀನಿನಲ್ಲಿ ಬರುತ್ತದೆ. ಆದರೆ ಈ ಜಮೀನನ್ನು ರೈತರು ಸಕ್ರಮಗೊಳಿಸಬಹುದು.
ಬ ಖರಾಬು ಎಂದರೇನು?
ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿರುವ ಜಮೀನನ್ನು ಬ ಖರಾಬು ಜಮೀನು ಎಂದು ಕರೆಯುತ್ತಾರೆ. ಉದಹರಣೆಗೆ ರಸ್ತೆ, ಬಂಡಿದಾರಿ, ಕಾಲುದಾರಿ, ಹಳ್ಳ, ಸ್ಮಶಾನ ಭೂಮಿ ಹೀಗೆ ಅನೇಕ ಜಮೀನುಗಳು ಬರುತ್ತವೆ. ಬ ಖರಾಬು ಜಮೀನು ಸರ್ಕಾರದ ಅಡಿಯಲ್ಲಿ ಬರುತ್ತದೆ.
ಅ ಖರಾಬು ಭೂಮಿ ಸಕ್ರಮಗೊಳಿಸಲು ಬೇಕಾಗುವ ದಾಖಲೆಗಳು
5 ವರ್ಷದಿಂದ ಸಾಗುವಳಿ ಮಾಡುವಂತಿರಬೇಕು. ಭೂಮಿ ಸಮತಟ್ಟಾಗಿರಬೇಕು. ಕೆರೆ, ಕಟ್ಟೆ ಮಣ್ಣಿನ ದಿಬ್ಬೆಗಳು ಅಥವಾ ಬೆಟ್ಟದಿಂದ ಇರಬಾರದು. ಸಾರ್ವಜನಿಕರಿಗೆ ತೊಂದರೆ ಆಗಬಾರದು. ಕಂದಾಯ ಒಪ್ಪಿಗೆ ಪತ್ರ ಕಡ್ಡಾಯವಾಗಿ ಪಡೆದಿರಬೇಕು.
ಇದನ್ನೂ ಓದಿ :ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅ ಖರಾಬು ಭೂಮಿ ಸಕ್ರಮಗೊಳಿಸಲು ತಾಲೂಕಿನ ಸರ್ವೆ ಕಚೇರಿಗೆ ಹೋಗಿ ಅ ಖರಾಬು ಜಮೀನನ್ನು ಸಕ್ರಮಗೊಳಿಸಿ ಪಹಣಿಯಲ್ಲಿ ಸೇರಿಸಲು ಮೊದಲು ರೈತರು ಜಮೀನು ಅಳತೆ ಮಾಡಲು ಅರ್ಜಿ ಸಲ್ಲಿಸಬೇಕು. ಅ ಖರಾಬ ಭೂಮಿ ಸರ್ವೆ ಮಾಡಿಸಿ ಅಕ್ಕಪಕ್ಕದ ರೈತರ, ಗ್ರಾಮಸ್ಥರ ಎದುರುಗಡೆ ಪಂಚನಾಮೆ ಮಾಡಿಸಿರಬೇಕು.
ಭೂಮಾಪಕರು ಮಾಡಿದ ಸರ್ವೆ ವರದಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ವರದಿ ಇರಬೇಕು. ಚಾಲ್ತಿ ಪಹಣಿ ಮತ್ತು ಆಧಾರ್ ಕಾರ್ಡ್ ಬೇಕಾಗುತ್ತದೆ. ಈಗ ಎಲ್ಲಾ ದಾಖಲೆಗಳನ್ನು ಯಾರಿಗೆ ಎಲ್ಲಿ ಸಲ್ಲಿಸಬೇಕು.
ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಜಿಲ್ಲಾ ಕಂದಾಯ ಉಪ ವಿಭಾಗ ಅಧಿಕಾರಿಗಳಿಗೆ ಸಲ್ಲಿಸಬೇಕು. ಜಿಲ್ಲಾ ಉಪ ವಿಭಾಗ ಸಲ್ಲಿಸಿದ ನಂತರ ಉಪ ವಿಭಾಗಾದಿಕಾರಿಗಳು ಕೆಳ ಹಂತದ ಅಧಿಕಾರಿಗಳ ವರದಿ ಆಧರಿಸಿ ಅ ಖರಾಬು ಜಮೀನನ್ನು ಸಾಗುವಳಿ ಭೂಮಿಯಾಗಿ ಪರಿವರ್ತಿಸುತ್ತಾರೆ. ಈ ರೀತಿಯಾಗಿ ಶಾಶ್ವತವಾಗಿ ಅ ಖರಾಬು ಜಮೀನನ್ನು ಸಾಗುವಳಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಳಬಹುದು.