ರೈತರು ಜಮೀನಿನ ಮೇಲೆ ಪಡದ ಸಾಲ ತೀರಿಸಿದರೂ ಸಹ ಇನ್ನೂ ಪಹಣಿಯಲ್ಲಿ ಸಾಲವಿದೆ ಎಂದು ತೋರಿಸುತ್ತಿದೆಯೇ. ಅಥವಾ ಸಾಲ ತೆಗೆದುಕೊಳ್ಳದಿದ್ದರೂ ನಿಮ್ಮ ಪಹಣಿಯಲ್ಲಿ ಬ್ಯಾಂಕ್ ಸಾಲ ತೋರಿಸುತ್ತಿದ್ದರೆ ಚಿಂತೆ ಮಾಡಬೇಡಿ. ಪಹಣಿಯಲ್ಲಿರುವ ಸಾಲ ತೆಗೆದು ಹಾಕಲು ನೀವು ಈ ಕೆಳಗಿನ ವಿಧಾನ ಅನುಸರಿಸಿದರೆ ಸಾಕು… ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪಹಣಿಯಲ್ಲಿರುವ ಸಾಲ ತೆಗೆದುಹಾಕಲಾಗುವುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರು ಬೆಳೆ ಸಾಲ ತೆಗೆದುಕೊಳ್ಳುವುದು ಸಹಜ. ಕೆಲವು ದಿನಗಳ ನಂತರ ರೈತರು ಬಡ್ಡಿಸಮೇತ ಅಸಲು ಕಟ್ಟಿರುತ್ತಾರೆ. ಅಥವಾ ಸರ್ಕಾರವು ರೈತರ ಸಾಲಮನ್ನಾ ಮಾಡಿರುತ್ತದೆ. ಆದರೆ ಪಣಿಯಲ್ಲಿ ಇನ್ನೂ ಸಾಲವಿದೆ ಎಂದು ತೋರಿಸಲಾಗುತ್ತದೆ. ಅಂತಹ ರೈತರು ಪಹಣಿಯಲ್ಲಿನ 11ನಂ ಕಾಲಂನಲ್ಲಿ ಋಣ (ಸಾಲ) ತೆಗೆದುಹಾಕುವುದು ಹೇಗೆ ಅದಕ್ಕೆ ಯಾವ ಯಾವ ದಾಖಲೆ ಬೇಕು ಎಲ್ಲಾ ಮಾಹಿತಿಯನ್ನು ನೀಡಲಾಗಿದೆ. ಈ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಪಹಣಿಯಿಂದ ಸಾಲ ತೆಗೆಸಬಹುದು.
ಪಹಣಿಯಲ್ಲಿರುವ ಸಾಲ(ಋಣ) ತೆಗೆಸುವುದು ಹೇಗೆ?
ರೈತರು ಒಂದು ಲಕ್ಷಕ್ಕಿಂತ ಕಡಿಮೆ ಬೆಳೆ ಸಾಲ ಪಡೆದಿದ್ದರೆ ಮೊಟ್ಟಮೊದಲನೆದಾಗಿ ರೈತರು ಜಮೀನಿನ ಮೇಲೆ ತೆಗೆದುಕೊಂಡ ಸಾಲದ ಅಸಲು ಮತ್ತು ಬಡ್ಡಿ ಕಟ್ಟಿರಬೇಕು., ಸಾಲ ಕಟ್ಟಿದ ನಂತರ ಬ್ಯಾಂಕ್ ಮ್ಯಾನೇಜರ್ ಬಳಿ ಹೋಗಿ ನಿಮ್ಮ ಸಾಲವಿಲ್ಲವೆಂಬ (No Due Certificate) ಪ್ರಮಾಣ ಪತ್ರ ಪಡೆಯಬೇಕು. ಚಾಲ್ತಿ ವರ್ಷದ ಪಹಣಿ ಇರಬೇಕು. ನಿಮ್ಮ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಇರಬೇಕು. ಸಾಲವನ್ನು ಬ್ಯಾಂಕಿಗೆ ಮರುಪಾವತಿಸಿರುವ ಬಗ್ಗೆ ಅರ್ಜಿ ಬರೆಯಬೇಕು. ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ನೋ ಡ್ಯೂ ಸರ್ಟಿಫಿಕೇಟ್ ಲಗತ್ತಿಸಿ ನಿಮ್ಮ ತಾಲೂಕಿನ ಭೂಮಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯನ್ನು ಭೂಮಿ ಕೇಂದ್ರಕ್ಕೆ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದ ಅಕ್ನಾಲೆಜ್ಮೆಂಟ್ ರಸೀದಿ ಪಡೆಯಬೇಕು. ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳಲ್ಲಿ ರೈತರ ಪಹಣಿಯಲ್ಲಿರುವ ಸಾಲ ತೆಗೆದುಹಾಕಲಾಗಿರುತ್ತದೆ. ಆಗ ನಿಮ್ಮ ಪಹಣಿ ಋಣಮುಕ್ತ ಪಹಣಿಯಾಗುತ್ತದೆ. ಪಹಣಿಯಲ್ಲಿ ಸಾಲ ಪಡೆದದ್ದು ಹೋದರೆ ಮಾತ್ರ ನೀವು ಬ್ಯಾಂಕಿನಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಬ್ಯಾಂಕಿನವರು ಅಥವಾ ಖಾಸಗಿ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸುತ್ತಾರೆ.
ಜಮೀನಿನ ಪಹಣಿಯಲ್ಲಿ ಸಾಲವಿದ್ದರೆ ಆ ಜಮೀನನ್ನು ಮುಂದೆ ಮಾರಾಟ ಮಾಡಲು ಕಷ್ಟವಾಗುತ್ತದೆ. ಜಮೀನು ಕೊಳ್ಳುವವರು ಸಾಲವಿದೆಯೆಂದು ಖರೀದಿಗೆ ನಿರಾಕರಿಸಬಹುದು. ಅದಕ್ಕಾಗಿ ಒಂದು ವೇಳೆ ನಿಮ್ಮ ಜಮೀನಿನ ಪಹಣಿಯಲ್ಲಿ ನೀವು ಸಾಲ ತೀರಿಸಿದ್ದರೂ ಅಥವಾ ಸಾಲಮನ್ನಾವಾಗಿದ್ದರೂ ಸಾಲ ತೋರಿಸುತ್ತಿದ್ದರೆ ಕೂಡಲೇ ಮೇಲೆ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಿ ಪಹಣಿಯಿಂದ ಸಾಲ ತೆಗೆಸಬಹುದು.