ಮನೆಯಲ್ಲಿಯೇ ಬೇವಿನ ಕೀಟನಾಶಕ ತಯಾರಿಸುವುದು ಹೇಗೆ?

Written by By: janajagran

Updated on:

how to prepare neem pesticide ನೈಸರ್ಗಿಕವಾಗಿ ದೊರೆಯುವ ಬೇವಿನ ಬೀಜ, ಎಲೆಗಳನ್ನು ಶತಮಾನಗಳಿಂದ ಬಳಸಿಕೊಂಡು ಬರುತ್ತಿರುವುದು ಎಲ್ಲರಿಗೂ ಗೊತ್ತಿದ ಸಂಗತಿ. ಬೇವನ್ನು ಪುರಾತನ ಕಾಲದಿಂದಲೂ ಆಯುರ್ವೇದಿಯ ಔಷಧಕ್ಕಾಗಿ ಬಳಸಲಾಗುತ್ತಿದೆ. ಬೇವಿನ ಮರದ ಲಾಭ ಮನುಷ್ಯರಿಗೆ ಮಾತ್ರವಲ್ಲ ವಿಶೇಷವಾಗಿ ರೈತರಿಗೆ ಬೇವು ಪ್ರಕೃತಿಯ ವರದಾನವೆಂದೇ ಹೇಳಬಹುದು.

ಕೃಷಿಯಲ್ಲಿ ಬೇವು ಅತ್ಯಂತ ಉಪಯುಕ್ತವಾಗಿದೆ ಎಂದು ಕೀಟನಾಶಕಗಳ ರೂಪದಲ್ಲಿ ಹಾಗೂ ಭೂಮಿಯ ಫಲವರ್ಧನೆ ವೃದ್ಧಿಸಿಕೊಳ್ಳಲು ಬಳಸುತ್ತಾರೆ.  ಬೇವಿನಿಂದ ಮಾಡಿದ ಕೀಟನಾಶಕಗಳನ್ನು (neem pesticide)  ಬೆಳೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಪ್ರಾಣಿ ಪಕ್ಷಿ ಹಾಗೂ ಮಾನವರಿಗೆ ಕೆಡಕಾಗುವುದಿಲ್ಲವಾದ್ದರಿಂದ ಇದನ್ನು ಬೆಳೆಗಳಿಗೆ ತಗಲುವ ರೋಗ ನಿಯಂತ್ರಣ ಹಾಗೂ ಕೀಟನಾಶಕವಾಗಿ ಬಳಸಬಹುದೆಂದು ತಜ್ಞರು ಸಲಹೆ ನೀಡುತ್ತಲೇ ಇರುತ್ತಾರೆ. ಆದರೂ ಸಹ ಇತ್ತೀಚೆಗೆ ರಾಸಾಯನಿಕ ಕೀಟನಾಕಶಗಳ ಬಳಕೆ ಹೆಚ್ಚಾಗುತ್ತಿದೆ.

ರಾಸಾಯನಿಕ ಕೀಟನಾಶಕದಿಂದಾಗಿ ಗಾಳಿ, ನೀರು, ಪಶುಪಕ್ಷಿಗಳಿಗೆ ಹಾಗೂ ಮಾನವ ಆರೋಗ್ಯಕ್ಕೂ ಮಾರಕವಾಗಿದೆ. ಹೆಚ್ಚಿನ ಹಣ ಕೊಟ್ಟು ಮಾರುಕಟ್ಟೆಯಲ್ಲಿ ಕೀಟನಾಶಕಗಳನ್ನು ತಂದು ಆರೋಗ್ಯ, ಭೂಮಿಯ ಫಲವತ್ತತೆ ಹಾಳುಮಾಡುವದರ ಬದಲು ದಯವಿಟ್ಟು ಮನೆಯಲ್ಲಿಯೇ ಯಾವುದೇ ಖರ್ಚಿಲ್ಲದೆ ಬೇವಿನ ಬೀಜಗಳಿಂದ ಕೀಟನಾಶಕ ತಯಾರಿಸಬಹುದು. ಕೀಟನಾಶಕ ತಯಾರಿಸುವುದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮ್ಮ ಮನೆಯ ಮುಂದುಗಡೆ ಅಥವಾ ಹೊಲದ ಬದುಗಳಲ್ಲಿರುವ ಬೇವಿನ ಮರದ ಕೆಳಗಡೆ ಬಿದ್ದಿರುವ ಬೇವಿನ ಬೀಜಗಳನ್ನು ಆರಿಸಿ ಚೆನ್ನಾಗಿ ಒಣಗಿಸಬೇಕು. ಬೀಜಗಳು ಸಂಪೂರ್ಣವಾಗಿ ಒಣಗಬೇಕು. ನಂತರ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ನಿಮಗೆ ಬೇಕಾದಾಗ ಬೇವಿನ ಕಷಾಯ ತಯಾರಿಸಲು ಅನುಕೂಲವಾಗುತ್ತದೆ. ಯಾವುದೇ ಕಾರಣಕ್ಕೂ ಬೀಜಗಳನ್ನು ಪುಡಿ ಮಾಡದೆ ಹಾಗೆಯೇ ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವಾಗ ಕಷಾಯ ತಯಾರಿಸುತ್ತೀರೋ ಆಗ ಬೀಜಗಳನ್ನು ಪುಡಿ ಮಾಡಿ ಕಷಾಯ ತಯಾರಿಸಬೇಕು.

ಕಷಾಯ ತಯಾರಿಸುವುದು ಹೇಗೆ (How to prepare neem pesticide)

ಒಂದು ಕೆಜಿಯಷ್ಟು ಸಿಪ್ಪೆ ತೆಗೆದ ಬೇವಿನ ಬೀಜಗಳನ್ನು ಕುಟ್ಟಿ ಪುಡಿ ಮಾಡಬೇಕು. ಹಿಟ್ಟಾಗುವಂತೆ ಪುಡಿ ಮಾಡಬಾರದು. ಹೆಸರು ಬೇಳೆ ಗಾತ್ರದಷ್ಟು ನುಚ್ಚಾದರೂ ಸಾಕು. ಪುಡಿ ಮಾಡಿದ ಬೇವಿನ ಬೀಜಗಳ್ನು ದೇಸೀ ಹಸುವಿನ 2 ಲೀಟರ್ ಗೋಮೂತ್ರದಲ್ಲಿ ಎರಡು ದಿನಗಳವರೆಗೆ ನೆನೆಯಿಡಬೇಕು. ಒಂದು ವೇಳೆ ನಿಮಗೆ ಹೆಚ್ಚಿನ ಕಷಾಯ ಬೇಕಿದ್ದರೆ ಉದಾಹರಣೆಗೆ ಎರಡು ಕೆಜಿ ಬೇವಿನ ಬೀಜಕ್ಕೆ ನಾಲ್ಕು ಲೀಟರ್ ಗೋಮೂತ್ರದಲ್ಲಿ ನೆನೆಯಿಡಬೇಕು. ಹೀಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿಗೆ ಮಾಡಬಹುದು.

ಇದನ್ನೂ ಓದಿ FRUITS ID ಯಲ್ಲಿ ಎಷ್ಟು ಸರ್ವೆ ನಂಬರ್ ಲಿಂಕ್ ಆಗಿದೆ? ಚೆಕ್ ಮಾಡಿ

ಗೋಮೂತ್ರ ಸಿಗದಿದ್ದರೆ ನೀರಿನಲ್ಲಿಯೂ ನೆನೆಯಿಡಬಹುದು. ಒಂದು ಎಕರೆಗೆ 5 ಕೆಜಿ ಬೇವಿನ ಹಿಂಡಿಯನ್ನು ಒಂದು ಬಟ್ಟೆಯಲ್ಲಿ ಹಾಕಿ ಕಟ್ಟಿ ಅದನ್ನು 10 ಲೀಟರ್ ನೀರಿನಲ್ಲಿ ಮೂರು ನೆನೆಯಿಡಬೇಕು. ನಂತರ ಗಂಟು ಹಿಂಡಿದಾಗ 7 ರಿಂದ 8 ಲೀಟರ್ ದ್ರಾವಣ ಸಿಗುತ್ತದೆ. ಇದನ್ನು ಒಂದು ಲೀಟರ್ ನೀರಿಗೆ 50-100 ಮಿ.ಲೀ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು. ಬೇವಿನ ಬೀಜದ ಕಷಾಯದ ಸಿಂಪಡಣೆಯ ಪರಿಣಾಮವು 7 ರಿಂದ 10 ದಿನಗಳವರೆಗೆ ಉಳಿಯುತ್ತದೆ.

ದುಷ್ಪರಿಣಾಮ ತುಂಬಾ ಕಡಿಮೆ

ಪ್ರಕೃತಿಯಲ್ಲಿ ಅನೇಕ ಜೀವಿಗಳು, ಮನುಷ್ಯನಿಗೆ ಉಪಯೋಗಕರವಾದ ಕೀಟಗಳು ಇವೆ. ಅದೇ ರೀತಿ ಉತ್ತಮ ರೀತಿಯಲ್ಲಿ ವಿಕಾಸವಾಗಿರಬಹುದಾದ ಪ್ರಾಣಿಗಳೂ ಇವೆ, ರಾಸಾಯನಿಕ ಕೀಟನಾಶಕಗಳ ಯಥೇಚ್ಛವಾಗಿ ಬಳಕೆ ಮಾಡುವುದರಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟು ಮಾಡುತ್ತದೆ. ಆಧರೆ ಬೇವಿನ ಕಷಾಯ ಸಿಂಪರಣೆ ಮಾಡುವುದರಿಂದ ದುಷ್ಪರಿಣಾಮ ಉಂಟಾಗುವುದಿಲ್ಲ.

ಕೀಟಗಳ ಉಸಿರಾಟಕ್ಕೆ ತೊಂದರೆ

ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟಗಳು ಬೇಗ ಸಾಯುತ್ತವೆ. ಆದರೆ ಬೇವಿನ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟ ಕೂಡಲೇ ಸಾಯುವುದಿಲ್ಲ. ಕಾಲಕ್ರಮೇಣ ಅದರ ಸಂತತಿ ನಾಶವಾಗುತ್ತದೆ. ಬೆಳೆಗಳ ಮೇಲೆ ಅದನ್ನು ಸಿಂಪಡಿಸಿದಾಗ ಕೀಟಗಳು ಅಂತಹ ಎಲೆಯಿಂದ ರಸವನ್ನು ಹೀರಿದಾಗ ಬೇವಿನ ಕಷಾಯ ಕೀಟಗಳ ದೇಹದಲ್ಲಿ ಹೊಕ್ಕಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕಶಾಯವನ್ನು ಸೇವಿಸಿದರೆ ಅವುಗಳಿಗೆ ವಾಕರಿಕೆ ಆರಂಭವಾಗುತ್ತದೆ. ಬಳಿಕ ಹಲವು ದಿನಗಳವರೆಗೆ ಕೀಟಗಳು ಆಹಾರ ಸೇವಿಸದೆ ಇರುವ ಕಾರಣ ನಿತ್ರಾಣಗೊಂಡು ಸತ್ತು ಹೋಗುತ್ತವೆ. ಕೆಲವು ಮೊಂಡು ಕೀಟಗಳು ಬದುಕಿದರೂ ಅವುಗಳ ಸಂತಾನ ಶಕ್ತಿಯನ್ನು ಈ ಬೇವು ನಾಶಪಡಿಸಿರುತ್ತದೆ.

ಬೇವಿನ ಕಷಾಯ ಪರಿಸರ ಸ್ನೇಹಿ (benefit of neem pesticide)

ಬೇವಿನ ಬೀಜಗಳು ಪರಿಸರ ಸ್ನೇಹಿಯಾಗಿವೆ. ಹಾನಿಕಾರಕ ಕೀಟಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾಣಿ, ಪಕ್ಷಿ ಅಥವಾ ಮಾನವರಿಗೆ ಕೆಡಕುಂಟು ಮಾಡುವುದಿಲ್ಲ. ಭೂಮಿಯ ಫಲವತ್ತತೆಗೂ ತೊಂದರೆಯಾಗುವುದಿಲ್ಲ. ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳಿಗೂ ಬೇವು ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Leave a Comment