ಸ್ಮಾರ್ಟ್ ಫೋನ್ ಬಂದಮೇಲೆ ಬಹಳಷ್ಟು ಕೆಲಸಗಳು ಮನೆಯಲ್ಲಿಯೇ ಕುಳಿತು ಮಾಡಬಹುದು. ಫೋನ್ ರಿಚಾರ್ಜ್, ಮನೆ ಬಿಲ್, ಡಿಟಿಎಚ್ ಬಿಲ್, ಎಲೆಕ್ಟ್ರಿಸಿಟಿ ಬಿಲ್ ಬಿಲ್ ಸೇರಿದಂತೆ ಇನ್ನಿತರ ಬಿಲ್ ಗಳನ್ನು ಕಟ್ಟಲು ಈಗ ಸರತಿಸಾಲಿನಲ್ಲಿ ನಿಂತುಕೊಂಡು ಸಮಯ ಹಾಳು ಮಾಡುವ ಅವಶ್ಯಕತೆಯಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿಯೇ ಲೈಟ್ ಬಿಲ್ ಕಟ್ಟಬಹುದು. ಇದರಿಂದಾಗಿ ನಿಮ್ಮ ಸಮಯ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲ ಲೈಟ್ ಬಿಲ್ ಕಟ್ಟಲು ಸರತಿಯಲ್ಲಿ ನಿಂತು ಸುಸ್ತಾಗುವ ಅವಶ್ಯಕತೆಯಿಲ್ಲ. ಹಾಗೂ ನಿಮ್ಮ ಪೆಟ್ರೋಲ್ ಸಹ ಉಳಿತಾಯವಾಗುತ್ತದೆ. ಫೋನ್ ಪೇ, ಪೇಟಿಎಂ, ಗೂಗಲ್ ಪೇ, ಅಮೇಜಾನ್ ಪೇ ಮೂಲಕವೂ ಆನ್ಲೈನ್ ಮೂಲಕ ಲೈಟ್ ಬಿಲ್ ಕಟ್ಟಬಹುದು.. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ನೀವು ಗೂಗಲ್ ಪೇ ಬಳಸುತ್ತಿದ್ದರೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಆನ್ ಮಾಡಬೇಕು. ನಂತರ ನ್ಯೂ ಪೇಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ಆಮೇಲೆ ಬಿಲ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಡಿಟಿಹೆಚ್, ಎಲೆಕ್ಟ್ರಿಸಿಟಿ, ಎಲ್.ಪಿ.ಜಿ, ವಾಟರ್ ಹೀಗೆ ಯಾವ ಯಾವ ಬಿಲ್ ಗಳನ್ನು ಗೂಗಲ್ ಪೇ ಮೂಲಕ ಪಾವತಿಸಬಹುದು ಎಂಬ ಪಟ್ಟಿ ಕಾಣುತ್ತದೆ. ಅಲ್ಲಿ ನೀವು ಎಲೆಕ್ಟ್ರಿಸಿಟಿ ಮೇಲೆ ಕ್ಲಿಕ್ ಮಾಡಬೇಕು.
ಕರ್ನಾಟಕದಲ್ಲಿ ಬಿಲ್ ಪೇಮೆಂಟ್ ಮಾಡಲು ಮೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಹೀಗೆ ನೀವು ಯಾವ ಜಿಲ್ಲೆಯವರೋ ಆ ವಿಭಾಗದ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊದಲು ನೀವು ಆನ್ಲೈನ್ ಮೂಲಕ ಹಣ ಕಟ್ಟುತ್ತಿದ್ದರೆ ಅಲ್ಲಿ Link account ಮೇಲೆ ಕ್ಲಿಕ್ ಮಾಡಬೇಕು. ನಂತರ ಲೈಟ್ ಬಿಲ್ ನಲ್ಲಿರುವ Consumer Number ಮತ್ತು ಅಕೌಂಟ್ ನೇಮೆ ಅಂದರೆ ಲೈಟ್ ಬಿಲ್ ಯಾರ ಹೆಸರಿನ ಮೇಲಿದೆಯೋ ಅವರ ಹೆಸರು ನಮೂದಿಸಿ ಲಿಂಕ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಲಿಂಕ್ Confirm ಆಗುತ್ತದೆ. ಆಗ ನಿಮ್ಮ ಬಿಲ್ ಎಷ್ಟಿದೆ ಎಂಬ ಮಾಹಿತಿ ಅಲ್ಲಿ ಕಾಣುತ್ತದೆ. ಅಲ್ಲಿ ನೀವು pay bill ಮೇಲೆ ಕ್ಲಿಕ್ ಮಾಡಬೇಕು.ಆಗ ನೀವು ಯಾವುದರ ಮೂಲಕ ಆನ್ಲೈನ್ ನಲ್ಲಿ ಪೇಮೆಂಟ್ ಮಾಡುತ್ತೀರೋ ಅದರಿಂದ ಹಣ ಪಾವತಿಸಬೇಕು. ಒಂದು ಸಲ ನೀವು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಿದರೆ ಮುಂದಿನ ತಿಂಗಳಿಂದ ನಿಮಗೆ ನೋಟಿಫಿಕೇಷನ್ ಬರುತ್ತದೆ. ಬಿಲ್ ಬಂದ ತಕ್ಷಣ ನೀವು ಮನೆಯಲ್ಲಿಯೇ ಕುಳಿತು ಬಿಲ್ ಪಾವತಿಸಬಹುದು.
ಪೇಟಿಎಂ, ಗೂಗಲ್ ಪೇ, ಫೋನ್ ಪೇ ಹೀಗೆ ವಿವಿಧ App ಗಳ ಮೂಲಕ ಪಾವತಿಸಿದರೆ ಕೆಲವು ಸಲ ನಿಮಗೆ ಕ್ಯಾಷ್ ಬ್ಯಾಕ್ ಆಫರ್ ಸಹ ಬರುತ್ತದೆ.
ಗೂಗಲ್ ಪೇ ಮೂಲಕ ಎಲೆಕ್ಟ್ರಿಸಿಟಿ ಬಿಲ್ ಕಟ್ಟುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪೇ ಆನ್ ಮಾಡಿದ ನಂತರ ಬಿಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಯಾವ ಯಾವ ಬಿಲ್ ಗಳನ್ನು ಗೂಗಲ್ ಪೇ ಮಾಡಬಹುದು ಎಂದು ಲಿಸ್ಟ್ ಕಾಣುತ್ತದೆ. ಕೆಳಗಡೆ ಕಾಣುವ ಎಲೆಕ್ಟ್ರಿಸಿಟಿ ಬಿಲ್ ಮೇಲೆ ಕ್ಲಿಕ್ ಮಾಡಿ ಆಯಾ ತಿಂಗಳ ಬಿಲ್ ಪಾವತಿಸಬಹುದು. ಇದೇ ರೀತಿ ಫೋನ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ Appಗಳಲ್ಲಿಯೂ ಈ ಸೌಲಭ್ಯವಿರುತ್ತದೆ. ಇದರಿಂದಾಗಿ ನೀವು ನಿಮ್ಮ ಪೆಟ್ರೋಲ್ ಉಳಿಸಬಹುದು. ಅಷ್ಟೇ ಅಲ್ಲ ನಿಮ್ಮ ಸಮಯ ಸಹ ಉಳಿತಾಯವಾಗುತ್ತದೆ. ಅದೇ ಸಮಯದಲ್ಲಿ ನೀವು ಬೇರೆ ಕೆಲಸ ಮಾಡಿಕೊಳ್ಳಬಹುದು.
ಇದನ್ನೂ ಓದಿ : ಪಂಚಮಿತ್ರದಲ್ಲಿ ಅಡಗಿದೆ ಗ್ರಾಮ ಪಂಚಾಯತಿಯ ಸರ್ವ ಮಾಹಿತಿ…. ಮೊಬೈಲ್ ನಲ್ಲಿಯೇ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ