ರೈತಬಾಂಧವರಿಗಿಲ್ಲಿದೆ ಸಂತಸದ ಸುದ್ದಿ. ರೈತರು ತಮ್ಮ ಹೊಲ, ಜಮೀನು, ಪ್ಲಾಟ್ ಸೇರಿದಂತೆ ಇನ್ನಿತರ ಸ್ಳಳವನ್ನು ಮೊಬೈಲ್ ನಲ್ಲಿಯೇ ಅಳತೆ ಮಾಡಬಹುದು. ಇದಕ್ಕೆ ಯಾರ ಸಹಾಯವೂ ಬೇಕಾಗಿಲ್ಲ, ಹಗ್ಗ ಕೋಲು ಸಹ ಬೇಕಾಗಿಲ್ಲ, ಮೊಬೈಲ್ ಒಂದಿದ್ದರೆ ಸಾಕು. ಯಾರ ಸಹಾಯವಿಲ್ಲದೆ ಅತೀ ಸುಲಭವಾಗಿ ಜಿಪಿಎಸ್ ಆಧಾರಿತ GPS Field Area Measure App ಮೂಲಕ ಅಳತೆ ಮಾಡಬಹುದು. ಹೌದು, ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ರೈತರು ಮೊದಲು ಜಿಪಿಎಸ್ ಫೀಲ್ಡ್ ಏರಿಯಾ ಮೀಸರ್ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆ್ಯಪ್ ಡೌನ್ಲೋಡ್ ಮಾಡಿ ಅಳತೆ ಮಾಡುವುದರ ಕುರಿತು ಇಲ್ಲಿ ಸುಲಭವಾಗಿ ಮಾಹಿತಿ ನೀಡಲಾಗಿದೆ.
GPS Fields Area Measure App ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ರೈತರು ಮೊದಲು ಮೊಬೈಲ್ ನ ಪ್ಲೇ ಸ್ಟೋರ್ ಅಥವಾ ಗೂಗಲ್ ನಲ್ಲಿ GPS Fields Area Measure ಎಂದು ಟೈಪ್ ಮಾಡಬೇಕು. ನಂತರ Appನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ https://play.google.com/store/apps/details?id=lt.noframe.fieldsareameasure&hl=en_IN&gl=US
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಿಪಿಎಸ್ ಫೀಲ್ಡ್ ಏರಿಯಾ ಮೀಸರ್ Appನ್ನು ಇನ್ಸ್ ಸ್ಟಾಲ್ ಮಾಡಿಕೊಳ್ಳಹಬಹುದು.. ಆಗ ಓಪನ್ ಆಗುವ ಫೈಲ್ ನಲ್ಲಿ Installed ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಪಿಎಸ್ ಫೀಲ್ಡ್ ಏರಿಯಾ ಮೀಷರ್ App ಓಪನ್ ಆಗುತ್ತದೆ. ಆಗ ಜಿಪಿಎಸ್ ಫೀಲ್ಡ್ ಏರಿಯಾ ಮೀಷರ್ App ಎಡಗಡೆ ಕಾಣುವ ಮೂರು ಲೈನ್ ಮೇಲೆ ಕ್ಲಿಕ್ ಮಾಡೇಕು. ಅಲ್ಲಿ ಸೆಟಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೀಸರ್ ಮೆಂಟ್ ಸಿಸ್ಟಮ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ Imperial ಆಯ್ಕೆ ಮಾಡಿಕೊಳ್ಳಬೇಕು. ಆಮೇಲೆ Area unit ಮೇಲೆ ಕ್ಲಿಕ್ ಮಾಡಬೇಕು.ಇಲ್ಲಿ FT ಹಾಗೂ Ac ಬಾಕ್ಸ್ ಆಯ್ಕೆ ಮಾಡಿಕೊಂಡು Done ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ :ನೀವು ಖರೀದಿಸುವ ಜಮೀನಿನ ಮಾಲೀಕರಾರು,ಜಮೀನಿನ ಸರ್ವೆ ನಂಬರ್ ಸೇರಿದಂತೆ ಆಸ್ತಿಯ ನಿಖರ ಮಾಹಿತಿ ತಿಳಿಯಲು ಬಳಸಿ ದಿಶಾಂಕ್ ಆ್ಯಪ್
ಆಮೇಲೆ Distant unit ಮೇಲೆ ಕ್ಲಿಕ್ ಮಾಡಬೇಕು.. ಆಗ ಇನ್ನೊಂದು ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿ ಇಲ್ಲಿಯೂ ಸಹ FT ಆಯ್ಕೆ ಮಾಡಿಕೊಂಡು Done ಮೇಲೆ ಕ್ಲಿಕ್ ಮಾಡಿಕೊಂಡು ಬ್ಯಾಕ್ ಬರಬೇಕು.ನಂತರ ಪ್ಲಸ್ ಮೇಲೆ ಕ್ಲಿಕ್ ಮಾಡಬೇಕು. ಏರಿಯಾ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿ ಮ್ಯಾನುವಲ್ ಮೀಸರಿಂಗ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಾವಿರುವ ಸ್ಥಳದ ಸುತ್ತಮುತ್ತಲಿನ ಜಮೀನಿನ ಕಾರ್ನರ್ ಕಾಣುತ್ತದೆ. ಅದು ಚೌಕಾಕಾರವಾಗಿರಬಹುದು ಅಥವಾ ಆಯಾತಾಕಾರವಾಗಿರಬಹುದು. ಜಮೀನು ಹೇಗಿದೆಯೋ ಅದೇ ರೀತಿ ಕಾಣಿಸುತ್ತದೆ.
ಆಗ ನೀವು ಜಿಪಿಎಸ್ ಪೈಂಟ್ ನಿಂದ ಜಮೀನಿನ ಕಾರ್ನರ್ ನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಝೂಮ್ ಮಾಡಿಕೊಂಡು ಕರೆಕ್ಟ್ ಪೈಂಟ್ ಆಕೆ ಮಾಡಿಕೊಳ್ಳಬಹುದು. ಆಗ ಮೇಲ್ಗಡೆ ನೀವು ಗುರುತಿಸಿದ ಜಾಗ ಎಷ್ಟು ಎಕರೆ ಇದೆ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಬಹುದು. ನಾವು ಸ್ಥಳದವನ್ನು ಹೇಗೆ ಆಯ್ಕೆ ಮಾಡುತ್ತೇವೆಯೋ ಅದರ ಮೇಲೆ ಅಳತೆ ಅವಲಂಬಿರುತ್ತದೆ. ಬದುಗಳನ್ನು ನೀವು ಕರೆಕ್ಟ್ ಆಗಿ ಆಯ್ಕೆ ಮಾಡಿಕೊಂಡು ಗುರುತಿಸಬೇಕು. ಮನೆಯ ಸೈಟ್ ಇದ್ದರೆ ಎಷ್ಟು ಸ್ಕ್ವೈರ್ ಫೀಟ್ ಇದೆ ಎಂಬು ಮಾಹಿತಿ ಸಹ ಗೊತ್ತಾಗುತ್ತದೆ. ಜಿಪಿಎಸ್ ಫೀಲ್ಟ್ ಏರಿಯಾ App ಮೂಲಕ ಕೇವಲ ಜಮೀನು ಅಷ್ಟೇ ಅಲ್ಲ, ನಿಮ್ಮ ಮನೆ ಹಾಗೂ ನೀವಿದ್ದ ಸ್ಥಳವನ್ನು ಅಳತೆ ಮಾಡಿಕೊಳ್ಳಬಹುದು.
ಡಿಸ್ಟಂಟ್ ಮೇಲೆ ಕ್ಲಿಕ್ ಮಾಡಿ ಉದ್ದ ಅಗ ಎಷ್ಟಿದೆ ಎಂಬುದನ್ನು ನೋಡಬಹುದು. ಡಿಸ್ಟಂಟ್ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿ ಮ್ಯಾನುವಲ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಉದ್ದ ಮತ್ತು ಅಗಲವನ್ನು ಅಳತೆ ಮಾಡಬಹುದು.