ಡಿಜಿಟಲ್ e-EPIC ಗುರುತಿನ ಚೀಟಿ ಡೌನ್ಲೋಡ್ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

Written by By: janajagran

Updated on:

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡ ಯುವ ಮತದಾರರಿಗೆ ಇ–ಎಪಿಕ್‌ ಕಾರ್ಡ್‌ ಮೊಬೈಲ್‌ ಮೂಲಕ ಪಡೆದುಕೊಳ್ಳಲು ಚುನಾವಣಾ ಆಯೋಗವು ಅವಕಾಶ ನೀಡಿದೆ.( How to download Digital voter id online) ಹೇಗೆ ಮತದಾರದ ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳಬೇಕೆಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾದ 18-19 ವರ್ಷದ ಯುವ ಮತದಾರರಿಗೆ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಲ್ಲದೆ www.nvsp.in ವೆಬ್‌ಸೈಟ್‌ನಲ್ಲಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಮತದಾರರ ಗುರುತಿನ ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

ಚುನಾವಣಾ ಗುರುತಿನ ಚೀಟಿ ಏಕೆ ಬೇಕು

ಭಾರತದ ಮತದಾರರ ಚೀಟಿ 18 ನೇ ವಯಸ್ಸಿಗೆ ತಲುಪಿದ ಭಾರತದ ವಯಸ್ಕರಿಗೆ ಭಾರತದ ಚುನಾವಣಾ ಆಯೋಗದ ಗುರುತಿನ ದಾಖಲೆಯಾಗಿದೆ, ಇದು ಪ್ರಾಥಮಿಕವಾಗಿ ಭಾರತೀಯ ನಾಗರಿಕರಿಗೆ ಒಂದು ಗುರುತಿನ ಪುರಾವೆಯಾಗಿ ದೇಶದ ಪುರಸಭೆ, ರಾಜ್ಯ, ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸುತ್ತದೆ . ಇದು ಸಾಮಾನ್ಯ ಗುರುತು, ವಿಳಾಸ, ಮತ್ತು ಮೊಬೈಲ್ ಫೋನ್ ಸಿಮ್ ಕಾರ್ಡ್ ಖರೀದಿ ಅಥವಾ ಪಾಸ್ಪೋರ್ಟ್ಗಾಗಿ ಅರ್ಜಿ ಮಾಡಬಹುದು. ಇದನ್ನು ವಯಸ್ಸು ಪುರಾವೆಯಾಗಿಯೂ ಉಪಯೋಗಿಸಬಹುದು. ಇದನ್ನು ಚುನಾವಣಾ ಫೋಟೋ ಐಡಿ ಕಾರ್ಡ್ (ಇಪಿಐಸಿ) ಎಂದೂ ಕರೆಯಲಾಗುತ್ತದೆ.

ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಚುನಾವಣಾ ಆಯೋಗದ ವೆಬ್ ಸೈಟ್ https://voterportal.eci.gov.in/ ಭೇಟಿ ನೀಡಬೇಕು. ನಿಮ್ಮ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಮೆನು ಆಯ್ಕೆಗೆ ಡೌನ್ ಲೋಡ್ `e-EPIC ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ಗೆ ಬರುವ ಒಟಿಪಿ ನಮೂದು ಮಾಡಿದ ನಂತರ ಡೌನ್ ಲೋಡ್ ಇ-ಎಪಿಕ್ ಸೆಲೆಕ್ಟ್ ಮಾಡಿದರೆ ವೋಟರ್ ಐಡಿ ಡೌನ್ ಲೋಡ್ ಆಗಲಿದೆ.

ಅಥವಾ ಭಾರತದ ಚುನಾವಣಾ ಆಯೋಗದ ವೆಬ್ ಸೈಟ್ ಮೂಲಕವೂ ನೋಡಬಹುದು. https://electoralsearch.in/##resultArea ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಹೊಸ ಭಾರತದ ಚುನಾವಣಾ ಆಯೋಗದ ವೆಬ್ಸೈಟ್ ಓಪನ್ ಆಗುತ್ತದೆ. ಅಲ್ಲಿ ಸರ್ಚ್ ಎಪಿಕ್ ನಂಬರ್ ಸೆಲೆಕ್ಟ್ ಮಾಡಿಕೊಂಡು ಎಪಿಕ್ ನಂಬರ್, ರಾಜ್ಯ ಹಾಗೂ ಕ್ಯಾಪ್ಚ್ಯಾ ಕೋಡ್ ಟೈಪ್ ಮಾಡಿ ನಿಮ್ಮ ಡಿಜಿಟಲ್ ಕಾರ್ಡ್ ನೋಡಬಹುದು.

2 thoughts on “ಡಿಜಿಟಲ್ e-EPIC ಗುರುತಿನ ಚೀಟಿ ಡೌನ್ಲೋಡ್ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ”

Leave a comment