ನಿಮ್ಮ ಜಮೀನಿನ ಅಳತೆಗಾಗಿ ಅರ್ಜಿ ಸಲ್ಲಿಸಿದರೆ ಸರ್ವೆಯರ್ ಗಳು ಯಾವ ದಿನಾಂಕದಂದು ಬರುತ್ತಾರೆ. ನಿಮ್ಮ ಅರ್ಜಿಯ ತಿರಸ್ಕೃತವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಅರ್ಜಿಯ ಸ್ಟೇಟಸ್ ನೋಡಲು ಈಗ ರೈತರು ಎಲ್ಲಿಯೂ ಹೋಗಬೇಕಿಲ್ಲ.  ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ನೋಡಬಹುದು.

ಹೌದು, ಮೋಜಿನಿಗೆ ಅರ್ಜಿ ಸಲ್ಲಿಸಿದ ನಂತರ ಸರ್ವೆಯರ್ ಗಳು ಯಾವ ದಿನಾಂಕದಂದು ಬರುತ್ತಾರೆ ಎಂಬುದನ್ನು ನೋಡಲು ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯು ಅಭಿವೃದ್ಧಿಪಡಿಸಿದ ಮೋಜಿನಿ ತಂತ್ರಾಂಶದ ಮೂಲಕ ಮನೆಯಲ್ಲಿಯೇ ಕುಳಿತು ನೋಡಬಹುದು.

ಜಮೀನಿನ ಹದ್ದುಬಸ್ತು, ಜಮೀನಿನ ಅಳತೆಗಾಗಿ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ಯಾವ ದಿನಾಂಕದಂದು ಅಧಿಕಾರಿಗಳು ಬರುತ್ತಾರೆ ಹಾಗೂ ಯಾವ ಅಧಿಕಾರಿಗಳು ಬರುತ್ತಾರೆ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಬಹುದು.

ಮೋಜಿನಿ ಅರ್ಜಿಯ ಸ್ಟೇಟಸ್ ನೋಡಬೇಕೇ?

ಜಮೀನಿನ ಅಳತೆಗೆ ಅರ್ಜಿ ಸಲ್ಲಿಸಿದ್ದರೆ ಸ್ಟೇಟಸ್ ನೋಡಲು ಈ http://103.138.196.154/service19_temp/Report/ApplicationDetails ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಮೋಜಿನಿ ಅರ್ಜಿಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ನಿಮ್ಮ ಅರ್ಜಿ ನಂಬರ್ ಗೊತ್ತಿದ್ದರೆ ಅಪ್ಲಿಕೇಷನ್ ನಂಬರ್ ಹಾಕಿ ಗೆಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.

ಒಂದು ವೇಳೆ ಅರ್ಜಿಯ ನಂಬರ್ ನೆನಪಿಲ್ಲದಿದ್ದರೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಗೆಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಷ್ಟೇ ಅಲ್ಲ, ಸರ್ವೆ ನಂಬರ್ ಮೂಲಕವೂ ನೋಡಬಹುದು. ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ ನಂಬರ್ ಹಾಕಿ ಗೆಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ. ಸರ್ವೆಯರ್ ಅಧಿಕಾರಿಗಳು ಯಾವಾಗ ಬರುತ್ತಾರೆ ಎಂಬ ಮಾಹಿತಿ ಕಾಣುತ್ತದೆ.

ಏನಿದು ಮೋಜಿನಿ?

ಮೋಜಿನಿಯು ಭೂಮಿಯ ಅಥವಾ ಜಮೀನಿನ ಅಳತೆಗೆಗಾಗಿ ಬಳಸುವ ಸಾಧನವಾಗಿದೆ. ಜಮೀನಿನ, ನಿವೇಶನದ ಗಡಿರೇಖೆಗಳನ್ನು ಗುರುತಿಸಲು ಬಳಸುತ್ತಾರೆ.  ಜಮೀನಿನ ಮಾರಾಟ ಮತ್ತು ಖರೀದಿಸುವ ಸಂದರ್ಭದಲ್ಲಿ ಮೋಜಿಣಿ ಸಹಾಯದಿಂದ ಜಮೀನಿನ ಅಳತೆ ಮಾಡಲಾಗುತ್ತದೆ.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *