ನಿಮಗೇಕೆ ಶೂನ್ಯ ಬಿಲ್ ಬಂದಿಲ್ಲ? ಹೀಗೆ ಲೆಕ್ಕಾಚಾರ ಮಾಡಿ

Written by Ramlinganna

Updated on:

calculate free electricity bill ಆಗಸ್ಟ್ ತಿಂಗಳಿನಲ್ಲಿ ನಿಮಗೆ ವಿದ್ಯುತ್ ಬಿಲ್ ಎಷ್ಟು ಬಂದಿದೆ? ಝೀರೋ ಬಿಲ್ ಬಂದಿಲ್ಲವೇ? 200 ಯೂನಿಟ್ ಗಿಂತ ಕಡಿಮೆ ಯೂನಿಟ್ ಬಳಸಿದ್ದರೂ ಶೂನ್ಯ ಬಿಲ್ ಬಂದಿಲ್ಲವೇ? ವಿದ್ಯುತ್  ಯೂನಿಟ್ ಲೆಕ್ಕಾಚಾರ ಹೇಗೆ ಮಾಡುತ್ತಾರೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಬಹುತೇಕ ಫಲಾನುಭವಿಗಳಿಗೆ ವಾರ್ಷಿಕ ಬಳಕೆಯ ಯೂನಿಟ್ ಮೇಲೆ ಲೆಕ್ಕಾಚಾರ ಮಾಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಮನೆಯಲ್ಲಿ ಬಳಸುವ ವಿದ್ಯುತ್ ಯೂನಿಟ್ ಸರಾಸರಿ ಎಷ್ಟಿದೆ? ಒಂದು ವರ್ಷದಲ್ಲಿ ನೀವು ಬಳಸುವ ವಿದ್ಯುತ್ ಯೂನಿಟ್ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ಬಿಲ್ ನೀಡಲಾಗುವುದು.

calculate free electricity bill ಯೂನಿಟ್ ಲೆಕ್ಕಾಚಾರ ಹೇಗೆ ಮಾಡುತ್ತಾರೆ?

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ನೀಡಲು 2022 ರ ಜುಲೈ ತಿಂಗಳಿಂದ ಜೂನ್ 2023 ರವರೆಗೆ ಒಂದು ವರ್ಷದ ಯೂನಿಟ್ ಗಳನ್ನು ಲೆಕ್ಕಾಚಾರ ಮಾಡಲಾಗುವುದು. ಹೌದು ಉದಾಹರಣೆಗೆ ನೀವು ಜುಲೈ ತಿಂಗಳಲ್ಲಿ 70, ಆಗಸ್ಟ್ ತಿಂಗಳಲ್ಲಿ 80, ಸೆಪ್ಟೆಂಬರ್ ತಿಂಗಳಲ್ಲಿ 80, ಅಕ್ಟೋಬರ್ ತಿಂಗಳಲ್ಲಿ 90, ನವೆಂಬರ್ ತಿಂಗಳಲ್ಲಿ 60, ಡಿಸೆಂಬರ್ ತಿಂಗಳಲ್ಲಿ 80, ಜನವರಿ ತಿಂಗಳಲ್ಲಿ 80, ಫೆಬ್ರವರಿ ತಿಂಗಳಲ್ಲಿ 90, ಮಾರ್ಚ್ ತಿಂಗಳಲ್ಲಿ 80, ಏಪ್ರೀಲ್ ತಿಂಗಳಲ್ಲಿ 70, ಮೇ ತಿಂಗಳಲ್ಲಿ 80 ಹಾಗೂ ಜೂನ್ ತಿಂಗಳಲ್ಲಿ 70 ಯೂನಿಟ್ ಬಳಸಿದ್ದರೆ ಒಟ್ಟು ಯೂನಿಟ್ ಗಳನ್ನು ಕೂಡಿಸಿ 12 ರಿಂದ ಭಾಗಿಸಿದರೆ  ಪ್ರತಿ ತಿಂಗಳು ಸರಾಸರಿ ಬಳಸುವ ವಿದ್ಯುತ್ ಯೂನಿಟ್ ಎಷ್ಟು ಎಂಬುದು ತಿಳಿಯುತ್ತದೆ.

ಮೇಲೆ ತಿಳಿಸಿದ ಯೂನಿಟ್ ಗಳನ್ನು ಲೆಕ್ಕಾಚಾರ ಮಾಡೋಣ. 70+ 80+ 80+ 90+ 60+ 80+ 80+ 90+ 80+ 70+ 80+ 70 = 850 ಯೂನಿಟ್ ಬಳಸಿದ್ದಿರೆಂದರ್ಥ. ಇದನ್ನೂ 12 ರಿಂದ ಭಾಗಿಸಿದರೆ 70.8  ಯೂನಿಟ್ ನಿಮ್ಮ ವಿದ್ಯುತ್ ಬಿಲ್ ಸರಾಸರಿ ಆಗಲಿದೆ. ಇದಕ್ಕೆ ಮಾಸಿಕ ಸರಾಸರಿಗೆ ಶೇ. 10 ರಷ್ಟು  ಅಂದರೆ 7.8% ರಷ್ಟು ಸೇರಿಸಿದರೆ 78 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವವರಿಗೆ ಜುಲೈ 24 ರಂದು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ

ಸರಾಸರಿ ವಿದ್ಯುತ್ ಗಿಂತ ಕಡಿಮೆಯಿದ್ದರೂ ನಿಮಗೆ ಉಚಿತ ವಿದ್ಯುತ್ ಸಿಗುತ್ತಿಲ್ಲವೇ? ಹಾಗಾದರೆ ತಾಂತ್ರಿಕ ತೊಂದರೆ ಆಗಿರಬಹುದು. ನಿಮ್ಮ ವಿದ್ಯುತ್ ಬಿಲ್ ನಲ್ಲಿ ನಿಮಗೆ ಗೃಹಜ್ಯೋತಿ ಸಬ್ಸಿಡಿ ಎಷ್ಟು ಸಿಗುತ್ತಿದೆ ಎಂಬುದನ್ನು ನಮೂದಿಸಲಾಗಿರುತ್ತದೆ. ಅದು ಗೊತ್ತಾಗುತ್ತಿಲ್ಲವಾದರೆ ನೀವು ನಿಮ್ಮ ಹತ್ತಿರದ ಎಸ್ಕಾಂ ಕಚೇರಿಗೆ ಹೋಗಿ ವಿಚಾರಿಸಬೇಕಾಗುತ್ತದೆ.

ಒಂದು ವರ್ಷದ ಒಳಗಡೆ ಮೀಟರ್ ತೆಗೆದುಕೊಂಡವರಿಗೆ ಲೆಕ್ಕ ಹೇಗೆ ಹಾಕಲಾಗುವುದು?

ಕಳೆದ ವರ್ಷ ಜುಲೈ  ತಿಂಗಳಿಂದ ಜೂನ್ ತಿಂಗಳವರೆಗೆ ವಾರ್ಷಿಕ ಲೆಕ್ಕಾಚಾರ ಹಾಕಲಾಗುವುದು. ಆದರೆ ಒಂದು ವರ್ಷದ ಒಳಗಡೆ ಮನೆ ಕಟ್ಟಿದವರಿಗೆ ಹೇಗೆ ಲೆಕ್ಕಾಚಾರ ಹಾಕಲಾಗುವುದು ಎಂಬುದರ ಕುರಿತ ಸ್ಪಷ್ಟನೆ ನೀಡಿಲ್ಲ. ಇದರೊಂದಿಗೆ ಕಳೆದ ಐದಾರು ತಿಂಗಳ ಹಿಂದೆ ಮೀಟರ್ ತೆಗೆದುಕೊಂಡವವರಿಗೆ ಹೊಸದಾಗಿ ಮನೆ ಕಟ್ಟಿದವರಿಗೆ ಉಚಿತ ಸೌಲಭ್ಯ ಲೆಕ್ಕಾಚಾರ ಹಾಕಿಲ್ಲ. ಕಳೆದ ತಿಂಗಳಂತೆ ಈ ತಿಂಗಳವೂ ಬಿಲ್ ನೀಡಲಾಗುತ್ತಿದೆ. ಕೆಲವು ಫಲಾನುಭವಿಗಳಿಗೆ ಕೇವಲ 1 ಯೂನಿಟ್ ಉಚಿತ ಸೌಲಭ್ಯ ಎಂದು ಬಿಲ್ ನಲ್ಲಿ ನಮೂದಿಸಲಾಗಿರುತ್ತದೆ. ಅದು ಹೇಗೆ ಸಾಧ್ಯ? ಕೇವಲ ಒಂದು ಯೂನಿಟ್ ಬಳಕೆ ಹೇಗಾಗುತ್ತದೆ? ಈ ಕುರಿತು ವಿದ್ಯುತ್ ಕಚೇರಿಗೆ ಹೋಗಿ ವಿಚಾರಿಸಿ ಸರಿಪಡಿಸಿಕೊಳ್ಳಲು ಅವಕಾಶವಿದೆ.

ನಿಮ್ಮ 12 ತಿಂಗಳ ವಿದ್ಯುತ್ ಬಿಲ್ ನಿಮ್ಮಲ್ಲಿರದಿದ್ದರೆ ನೀವು ಹೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಪಡೆಯಬಹುದು.ಆಗ ನಿಮಗೆ 12 ತಿಂಗಳಲ್ಲಿ ಸರಾಸರಿ ಬಿಲ್ ಎಷ್ಟು ಬರುತ್ತದೆ ಎಂಬುದರ ಸಂಪೂರ್ಣ ಬಿಲ್ ಸಹ ನೀಡಲಾಗುವುದು.

Leave a Comment