Apply for land occupy ರೈತರು ತಮ್ಮ ಜಮೀನು ಇನ್ನೊಬ್ಬರಿಂದ ಅಥವಾ ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕೆಂಬುದರ ಮಾಹಿತಿ ಇಲ್ಲಿದೆ.
ರೈತರು ತಮ್ಮ ಜಮೀನಿನ ಪಹಣಿಯಲ್ಲಿ ತೋರಿಸಿದಷ್ಟು ಎಕರೆ ಇರುವುದಿಲ್ಲ. ಪಹಣಿಯಲ್ಲಿ ಜಮೀನು ಹೆಚ್ಚಿರುತ್ತದೆ. ಆದರೆ ವಾಸ್ತವದಲ್ಲಿ ಆ ಜಮೀನು ಕಡಿಮೆಯಾಗಿರುತ್ತದೆ. ಹೀಗಾಗಿ ಕೆಲವು ರೈತರು ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜಮೀನು ಒತ್ತುವರಿಯಾಗಿದ್ದರೆ ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸಿದ ನಂತರ ಜಮೀನು ಅಳತೆ ಮಾಡಲು ಯಾರು ಬರುತ್ತಾರೆ? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಮೀನು ಒತ್ತುವರಿ ಎಂದರೇನು?
ಜಮೀನು ಅಥವಾ ಖಾಲಿ ನಿವೇಶನಗಳನ್ನು ಅಕ್ಕಪಕ್ಕದವರು ಅತಿಕ್ರಮಣ ಅಥವಾ ಒತ್ತುವರಿ ಮಾಡಿಕೊಂಡು ಆ ಜಾಗದ ಸುಪರ್ದಿಯನ್ನು ತಾವೇ ಪಡೆದುಕೊಂಡು ಅಸಲಿ ಮಾಲಿಕನಿಗೆ ದೂರು ಇಡುವುದನ್ನು ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎನ್ನುವರು.
ಪ್ರತಿ ಜಮೀನಿಗೆ ಹದ್ದುಬಸ್ತು ಇದ್ದೇ ಇರುತ್ತದೆ. ಅಂದರೆ ಸರ್ವೆ ದಾಖಲೆಗಳ ಪ್ರಕಾರ ಜಮೀನು ಅಳತೆಯಾಗಿರುತ್ತದೆ. ಆಯಾ ಜಮೀನಿನ ಗಡಿ ಭಾಗವನ್ನು ಪತ್ತೆಹಚ್ಚಿ ಗುರುತು ಸಹ ಮಾಡಲಾಗಿರುತ್ತದೆ. ಆದರೆ ಈ ಜಮೀನು ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು
ಇದನ್ನೂ ಓದಿ : ಯಾವ ಯಾವ ಯೋಜನೆಗಳಿಂದ ನಿಮಗೆಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ತಮ್ಮ ಜಮೀನು ಒತ್ತುವರಿಯಾಗಿದೆ ಎಂಬ ಸಂಶಯ ಬಂದರೆ ಅಂದರೆ ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಇದೆ ಎಂಬ ಸಂಶಯವಿದ್ದರು ಅರ್ಜಿ ಸಲ್ಲಿಸಬಹುದು.
Apply for land occupy ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರ ಪ್ರಕ್ರಿಯೆ ಹೇಗಿರುತ್ತದೆ?
ರೈತರು ಅರ್ಜಿಯನ್ನು ತಮ್ಮ ಹತ್ತಿರದ ನಾಡ ಕಚೇರಿ ಅಥವಾ ತಹಶೀಲ್ದಾರಾ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ರಸೀದಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರು ತಮ್ಮ ಜಮೀನಿಗೆ ಬರುವ ಮಾಹಿತಿಯನ್ನು ಸಹ ಫೋನ್ ಕರೆ ಮಾಡಿ ತಿಳಿಸಬಹುದು. ಅಂದರೆ ಒಂದು ದಿನಾಂಕ ನಿಗದಿಪಡಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಕಾರ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಮುಂಚಿತವಾಗಿ ನೋಟಿಸ್ ಸಹ ಕಳಿಸಲಾಗುವುದು. ಜಮೀನಿನ ಸರ್ವೆಯನ್ನು ಎಲ್ಲಾ ಜಮೀನಿನ ಮಾಲಿಕರ ಸಮ್ಮುಖದಲ್ಲಿಮಾಡುವರು. ಅಳತೆ ಮಾಡಿದ ನಂತರ ಜಮೀನು ಒತ್ತುವರಿಯಾಗಿದ್ದರೆ ತಿಳಿಸುವರು. ಹಾಗೂ ಹದ್ದುಬಸ್ತು ಕಲ್ಲುಗಳನ್ನಿಟ್ಟು ಹೋಗುವರು. ಈ ಆಧಾರದ ಮೇಲೆ ತಮ್ಮ ಜಮೀನು ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ : ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರು ಭೂಮಾಲಿಕರ ಜಮೀನಿಗೆ ಬಂದು ಅಳತೆ ಮಾಡುತ್ತಾರೆ. ಸರ್ವೆ ದಾಖಲೆಗಳ ಪ್ರಕಾರ ಜಮೀನಿನ ಅಳತೆ ಮಾಡಿ ಗಡಿಭಾಗವನ್ನು ಪತ್ತೆ ಹಚ್ಚಿ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.
Apply for land occupy ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?
ಅರ್ಜಿ ಸಲ್ಲಿಸಲು ಸಹಜವಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇದರೊಂದಿಗೆ ಜಮೀನಿನ ಪಹಣಿ (ಆರ್.ಟಿ.ಸಿ) ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು ಲಗತ್ತಿಸಬೇಕೆಂಬುದರ ಕುರಿತು ಅರ್ಜಿಯಲ್ಲಿ ತಿಳಿಸಿರುತ್ತಾರೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವುದನ್ನು ಮರೆಯಬಾರದು. ಅರ್ಜಿಯಲ್ಲಿ ಒತ್ತುವರಿಯಾಗಿರುವ ಜಮೀನಿನ ಸರ್ವೆ ನಂಬರ್, ಚೆಕ್ಕುಬಂದಿ, ಅಕ್ಕಪಕ್ಕದ ರೈತರ ಸರ್ವೆ ನಂಬರ್ ಹಾಗೂ ಜಮೀನಿನ ಮಾಲಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿಯೊಂದಿಗೆ ಭೂ ಒತ್ತುವರಿಗೆ ನಿಗದಿಪಡಿಸಲಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿರುವ ಭೂ ಮಾಪಕ ಅಧಿಕಾರಿಗಳಿಗೆ ಸಂಪರ್ಕಿಸಬಹುದು.