ಬೆಳೆ ಹಾನಿಯಾದ 72 ಗಂಟೆಯೊಳಗೆ ಇಲ್ಲಿ ಅರ್ಜಿ ಸಲ್ಲಿಸಿ

Written by By: janajagran

Updated on:

crop insurance compensation call ಇತ್ತೀಚೆಗೆ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆ ಹಾಳಾಗುತ್ತಿದೆ. ಇದರಿಂದಾಗಿ ರೈತರಿಗೆ ಅಪಾರ ಹಾನಿಯಾಗುತ್ತಿದೆ.

ಬೇಸಿಗೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಟಾವಿನ ಹಂತದಲ್ಲಿರುವ ತೊಟಗಾರಿಕೆ ಬೆಳೆ ಹಾಗೂ ಹಿಂಗಾರು ಬೆಳೆಯೂ ನಷ್ಟವಾಗುತ್ತಿದೆ. ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿದೆ. ಇದರೊಂದಿಗೆ ಆಲಿಕಲ್ಲು ಮಳೆಯಿಂದ ಬೆಳೆ ನಷ್ಟವಾಗುತ್ತಿದ್ದರೆ ರೈತಬಾಂಧವರು‌ ಕೂಡಲೇ ಬೆಳೆ ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ.

ಹವಾಮಾನ ವೈಪರೀತ್ಯದ ಕಾರಣದಿಂದ ರೈತರು ಪದೇಪದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ರೈತರ ನೆರವಿಗೆ ಬರಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ

ಫಸಲ್ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಯಾವುದೇ ರೀತಿಯ ಧನ ಸಹಾಯ ನೀಡಲಾಗುವುದು.
ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.

crop insurance compensation call ವಿಮೆ ಮಾಡಿಸಿದ ರೈತರು ಏನು ಮಾಡಬೇಕು?

ಬೆಳೆ ವಿಮೆ ಮಾಡಿಸಿದ ರೈತರು ಯಾವ ಬೆಳೆಗೆ ಎಷ್ಟು ಹಣ ವಿಮೆ ಹಣ ಕಟ್ಟಿದ್ದಾರೆ ಮತ್ತು ಯಾವ ವಿಮಾ ಕಂಪನಿಗೆ ಹಣ ಕಟ್ಟಿದ್ದಾರೆಎಂಬುದರ ಕುರಿತು ರಶೀದಿ ಹೊಂದಿರಬೇಕು. ವಿಶೇಷವಾಗಿ ವಿಮಾ ಕಂಪನಿಯ ನಿಮ್ಮ ತಾಲೂಕಿನ ಏಜಿಂಟ್ ನಂಬರ್ ಹೊಂದಿರಬೇಕು. ಏಕೆಂದರೆ ಬೆಳೆ ನಷ್ಟವಾದಾಗ ಅವರಿಗೆ ನೀವು ಮಾಹಿತಿ ನೀಡಬೇಕಾಗುತ್ತದೆ. ಮಾಹಿತಿ ನೀಡಿದ ನಂತರ ಸಂಬಂಧಿಸಿದವರು ನಿಮ್ಮ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಾರೆ.

ಬೆಳೆ ವಿಮೆ ಪರಿಹಾರ ಹೇಗೆ ನಿರ್ಧರಿಸಲಾಗುವುದು?

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು.
ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.
ಒಂದು ವೇಳೆ ನಿಮಗೆ ನಿಮ್ಮ ಜಿಲ್ಲೆಯ ವಿಮಾ ಕಂಪನಿ ನಂಬರ್ ನೆನಪಿಲ್ಲದಿದ್ದರೆ ರೈತರು 1800 180 1551 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಪಡೆದು ಮಾಹಿತಿ ನೀಡಬಹುದು.
ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಕಟ್ಟಿದ ರೈತರು ಅರ್ಜಿಯ ಸ್ಟೇಟಸ್ ನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಈ https://www.samrakshane.karnataka.gov.in/

ಲಿಂಕ್ ಮೇಲೆ  ಲಾಂಗ್ ಪ್ರೆಸ್ ಅಂದರೆ ಒತ್ತಿ ಇಡಬೇಕು ಮಾಡಿದಾಗ ಸಂರಕ್ಷಣೆಯ ವೆಬ್ ಪೇಜ್ ಓಪನ್ ಆಗುತ್ತದೆ.. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ವರ್ಷ ಮತ್ತು ಋತು ಆಯ್ಕೆ ಮಾಡಿಕೊಳ್ಳಬೇಕು. . ಹಿಂಗಾರು ಬೆಳೆಯ ಕುರಿತಂತೆ ಸ್ಟೇಟಸ್ ನೋಡಬೇಕಾದರೆ ರಾಬಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಫಾರ್ಮರ್ಸ್ ಕಾಲಂನಲ್ಲಿರುವ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಆಗ ಮೊಬೈಲ್ ನಂಬರ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.. ನಿಮ್ಮ ಹೆಸರು ಮತ್ತು ಅರ್ಜಿಯ ಸ್ಟೇಟಸ್ ಕಂಪನಿಯಿಂದ ವಿಮೆಯ ಹಣ ಸ್ವೀಕೃತವಾಗಿದೆಯೋ ಇಲ್ಲವೋ ಹಾಗೂ ಬೆಳೆ ನೋಂದಣಿಯ ಸ್ಥಿತಿಗತಿಯನ್ನು ನೋಡಬಹುದು.

Leave a Comment