House construction ಪಕ್ಕಾ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ

Written by Ramlinganna

Published on:

House construction: ಮನೆ ನಿರ್ಮಾಣ ಮಾಡಲು ಇಚ್ಚಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಪಕ್ಕಾ ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕೆಲವರು ಪ್ಲಾಟ್ ಖರೀದಿಸಿರುತ್ತಾರೆ. ಆದರೆ ಮನೆ ಕಟ್ಟಲು ಹಣಕಾಸಿನ ತೊಂದರೆ ಇರುತ್ತದೆ. ಅಂತಹವರು ಮನೆ ಕಟ್ಟಿಕೊಳ್ಳಲು ಇಲ್ಲಿ ಸುವರ್ಣಾವಕಾಶವಿದೆ.

ಹೌದು, ಮನೆ ಕಟ್ಟಲು ಆಸಕ್ತಿಯಿರುವವರು ಈಗ ಅರ್ಜಿ ಸಲ್ಲಿಸಿ ಮನೆ ಕಟ್ಟಿಸಿಕೊಳ್ಳಬಹುದು. ಇದಕ್ಕಾಗಿ ಹಣಕಾಸಿನ ನೆರವು ಸಹ ನೀಡಲಾಗುವುದು. ಅರ್ಹರಿಗೆ ಎಲ್ಲಿ ಹಣಕಾಸಿನ ನೆರವು ನೀಡಲಾಗುವುದು? ಅರ್ಜಿ ಯಾರು ಯಾರು ಸಲ್ಲಿಸಲು ಅರ್ಹರಾಗಿರುತ್ತಾರೆ? ಯಾವ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

2023-24ನೇ ಸಾಲಿನ ಶೇ 7.25 ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಶೇ. 7.25 ಯೋಜನೆ ಅಡಿಯಲ್ಲಿ ನಗರಸಭೆ ಅನುದಾನದ ಅಡಿಯಲ್ಲಿ ಪಕ್ಕಾ ಮನೆ ನಿರ್ಮಾಣ ಮಾಡುವ ಕುರಿತು ಅರ್ಹ ಅರ್ಜಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು (ಮಹಿಳಾ ಅರ್ಜಿದಾರರು ಮಾತ್ರ ಅರ್ಜಿ ಸಲ್ಲಿಸಬಹುದು).

House construction ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸಲಿಚ್ಚಿಸುವವರು ಸ್ಥಳೀಯ ನಿವಾಸಿಯಾಗಿರಬೇಕು. ವಾಸಸ್ಥಳ ಪ್ರಮಾಣ ಪತ್ರ ಹೊಂದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು. ಓಟರ್ ಐಡಿ ಕಾರ್ ಇರಬೇಕು. ಎರಡು ಫೋಟೋ ಇರಬೇಕು. ಖಾತಾ ನಕಲು ಪ್ರತಿ ಲಗತ್ತಿಸಬೇಕು.

ಇದನ್ನೂ ಓದಿ FID ಗೆ ನಿಮ್ಮ ಎಷ್ಟು ಸರ್ವೆ ನಂಬರ್ ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಸಲಿಚ್ಚಿಸುವವರು ಜೂನ್ 6 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ.

House construction ಯಾವ ಯಾವ ಯೋಜನೆಗಳಿಂದ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗುವುದು?

ಪ್ರಧಾನಮಂತ್ರಿ ಅವಾಸ್ ಯೋಜನೆ, ರಾಜೀವ್ ಗಾಂಧಿ ಅವಾಸ್ ಯೋಜನೆಗಳ ವತಿಯಿಂದಲೂ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಈ  ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವವರಿಗೆ ಸಬ್ಸಿಡಿ ನೀಡಲಾಗುವುದು. ಕೆಲವು ಸಮುದಾಯದವರಿಗೆ ಉಚಿತವಾಗಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗುವುದು.

ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯ ವತಿಯಿಂದ ನಗರ ಪ್ರದೇಶಗಳಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗುವುದು. ಅರ್ಹರು ಅರ್ಜಿ ಆಹ್ವಾನಿಸುವಾಗ ಅರ್ಜಿ ಸಲ್ಲಿಸಿ ಮನೆ ಕಟ್ಟಿಕೊಳ್ಳಬಹುದು. ಇದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮನೆ ನಿರ್ಮಿಸಿಕೊಳ್ಳಬಹುದು.  ಮನೆ ಕಟ್ಟಿಸಿಕೊಳ್ಳಲಿಕೆ ದಿನಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ಆಗ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಎಸ್ಎಸ್ಎಲ್ಸಿಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ 2023-24ನೇ ಸಾಲಿನಲ್ಲಿ ಸರ್ಕಾರಿ ನೌಕರರ ಮಕ್ಕಳು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.

ಸಂಘ ನಿಗದಿಪಡಿಸಿರುವ ನಮೂನೆಯಲ್ಲಿ ಇಲಾಖೆ ಮುಖ್ಯಸ್ಥರಿಂದ ಮೇಲು ರುಜು ಪಡೆದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ, ತಾಲೂಕು, ಶಾಖೆಗಳ ಅಧ್ಯಕ್ಷರ ಸಹಿಯೊಂದಿಗೆ ದೃಢೀಕರಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು. ಮಾಹಿತಿಗೆ ಕಚೇರಿ ವ್ಯವಸ್ಥಾಪಕ ಸುರೇಶ ಎನ್. 08022354784 /83 ಗೆ ಸಂಪರ್ಕಿಸಬಹುದು ಎಂದು ಶಿಗ್ಗಾಂವಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಮೇಶ ಹರಿಜನ ಕೋರಿದ್ದಾರೆ.

Leave a Comment